ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ ನಿವೃತ್ತಿ..! ರಾಹುಲ್ ದ್ರಾವಿಡ್ ಹೇಳಿದ್ದೇನು?

2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ  ಭಾರತದ ತಂಡದ ಸೇಫ್ ಗೇಮ್ ತಂಡಕ್ಕೆ ಭಾರಿ ಹೊಡೆತವನ್ನು ನೀಡಿದೆ.

Written by - Zee Kannada News Desk | Last Updated : Nov 11, 2022, 12:34 AM IST
  • ಈಗ ಒಂದೆಡೆ ಭಾರತ ತಂಡವು ನಿರ್ನಾಯಕ ಘಟ್ಟಗಳಲ್ಲಿ ಸೋಲುತ್ತಿರುವುದುದನ್ನು ಬಹುತೇಕರ ತಲೆ ಬಿಸಿ ಮಾಡಿದೆ.
  • ಹೀಗಾಗಿ ಟಿ 20 ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ನಿವೃತ್ತಿ ತೆಗೆದುಕೊಳ್ಳಬೇಕು
  • ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ ನಿವೃತ್ತಿ..! ರಾಹುಲ್ ದ್ರಾವಿಡ್ ಹೇಳಿದ್ದೇನು? title=

ನವದೆಹಲಿ: 2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ  ಭಾರತದ ತಂಡದ ಸೇಫ್ ಗೇಮ್ ತಂಡಕ್ಕೆ ಭಾರಿ ಹೊಡೆತವನ್ನು ನೀಡಿದೆ.

ಹೌದು ಆರಂಭದಲ್ಲಿ ವಿಕೆಟ್ ರಕ್ಷಣೆಗೆ ಬಗ್ಗೆ ಹೆಚ್ಚಿನ ಗಮನ ನೀಡುತ್ತಾ ಸಾಗಿದ್ದರಿಂದಾಗಿ ತಂಡವು ಪವರ್ ಪ್ಲೇ ಸಂದರ್ಭಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರನ್ ಗಳಿಸಲು ವಿಫಲವಾಯಿತು.ಇದರಿಂದಾಗಿ ಅಂತಿಮವಾಗಿ ತಂಡವು ನೀಡಿದ 169 ರನ್ ಗಳ ಗುರಿಯನ್ನು ಇಂಗ್ಲೆಂಡ್ ತಂಡವು ಸುಲಭವಾಗಿ ವಿಕೆಟ್ ನಷ್ಟವಿಲ್ಲದೆ ತಲುಪಿತು.

ಇದನ್ನೂ ಓದಿ: ಬಿಜೆಪಿಯವರಿಗೆ ನಂಬಿಕೆ ಇರುವುದು ಮನುಸ್ಮೃತಿ ಮೇಲೆ”

ಈಗ ಒಂದೆಡೆ ಭಾರತ ತಂಡವು ನಿರ್ನಾಯಕ ಘಟ್ಟಗಳಲ್ಲಿ ಸೋಲುತ್ತಿರುವುದುದನ್ನು ಬಹುತೇಕರ ತಲೆ ಬಿಸಿ ಮಾಡಿದೆ. ಹೀಗಾಗಿ  ಟಿ 20 ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ನಿವೃತ್ತಿ ತೆಗೆದುಕೊಳ್ಳಬೇಕು ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

ಇದನ್ನೂ ಓದಿ: ವಯಸ್ಸು ಹೆಚ್ಚಿದಂತೆ ಮೀರಾ ಅಂದವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ..!

ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಮಾತನಾಡಿರುವ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್  "ಸೆಮಿ-ಫೈನಲ್ ಪಂದ್ಯದ ನಂತರ, ಅದರ ಬಗ್ಗೆ ಮಾತನಾಡಲು ಇದು ತುಂಬಾ ಬೇಗ ಅನಿಸುತ್ತೆ...ಈ ವ್ಯಕ್ತಿಗಳು ನಮಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದರ ಬಗ್ಗೆ ಪ್ರತಿಬಿಂಬಿಸಲು ನಮಗೆ ಒಂದೆರಡು ವರ್ಷಗಳಿವೆ. ಇವರು ಇಲ್ಲಿ ನಿಜವಾಗಿಯೂ ಗುಣಮಟ್ಟದ ಆಟಗಾರರಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈಗ ಇದರ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವಲ್ಲ, ನಮ್ಮ ಮುಂದೆ ಮುಂಬರುವ ವಿಶ್ವಕಪ್ ಗೆ ಸಿದ್ದರಾಗಲು ಸಾಕಷ್ಟು ಸಮಯವಿದೆ ಎಂದು ಅವರು ಹೇಳಿದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಹಿರಿಯ ಆಟಗಾರರು ವಿಶ್ರಾಂತಿಯನ್ನು ಆಯ್ಕೆ ಮಾಡಿಕೊಂಡಿರುವುದರಿಂದ ವೈಟ್ ಬಾಲ್ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಮುನ್ನಡೆಸಲು ಸಿದ್ಧರಾಗಿರುವ ಹಾರ್ದಿಕ್ ಪಾಂಡ್ಯ ಅವರ ಮೇಲೆ ಈಗ ಎಲ್ಲರ ಕಣ್ಣುಗಳು ನಿಂತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News