ಬಾಲಿವುಡ್ ನಲ್ಲಿಯೂ ಮಿಂಚು ಹರಿಸಲು ಸಜ್ಜಾಗಿರುವ ರೋಹಿತ್ ಶರ್ಮಾ, ಸಿನಿಮಾದ ಫಸ್ಟ್ ಲುಕ್ ರಿಲೀಸ್

ಕ್ರಿಕೆಟ್ ಮೈದಾನದ ಹೊರಗೆ ಕೂಡಾ ಮಿಂಚು ಹರಿಸಲು ಸಜ್ಜಾಗಿದ್ದಾರೆ ಭಾರತ ತಂಡದ ದಾಂಡಿಗ ರೋಹಿತ್ ಶರ್ಮಾ.ಹೌದು ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ರೋಹಿತ್.  ಅವರು  ನಟಿಸಲಿರುವ ಸಿನಿಮಾದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. 

Written by - Ranjitha R K | Last Updated : Sep 2, 2022, 10:51 AM IST
  • ಶೀಘ್ರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ರೋಹಿತ್ ಶರ್ಮಾ
  • ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರೋಹಿತ್
  • ರಶ್ಮಿಕಾ ಮಂದಣ್ಣ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿರುವ ಬ್ಯಾಟ್ಸ್ ಮೆನ್
ಬಾಲಿವುಡ್ ನಲ್ಲಿಯೂ ಮಿಂಚು ಹರಿಸಲು ಸಜ್ಜಾಗಿರುವ ರೋಹಿತ್ ಶರ್ಮಾ, ಸಿನಿಮಾದ ಫಸ್ಟ್ ಲುಕ್ ರಿಲೀಸ್   title=
Rohit sharma in bollywwod film (photo instagram)

ಬೆಂಗಳೂರು : ಭಾರತದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ನಾಯಕ ರೋಹಿತ್ ಶರ್ಮಾ  ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ರೋಹಿತ್ ಫಾರ್ಮ್ ನಲ್ಲಿರುವಾಗ ಬೌಲರ್ ನ ಬೆವರಿಳಿಸಿ ಬಿಡುತ್ತಾರೆ.  ರೋಹಿತ್ ಶರ್ಮಾ ಟೀಂ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. ಈಗ ಕ್ರಿಕೆಟ್ ಮೈದಾನದ ಹೊರಗೆ ಕೂಡಾ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ರೋಹಿತ್.  ಅವರು  ನಟಿಸಲಿರುವ ಸಿನಿಮಾದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. 

ಈ ಚಿತ್ರದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ  :
ಭಾರತ ತಂಡದ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕ್ರಿಕೆಟ್ ಶೀಘ್ರದಲ್ಲೇ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ರೋಹಿತ್ ಶರ್ಮಾ ಅಭಿನಯದ ಈ ಚಿತ್ರದ ಹೆಸರು 'ಮೆಗಾ ಬ್ಲಾಕ್ ಬಸ್ಟರ್'.  ಈ ಪೋಸ್ಟ್ ಶೇರ್ ಮಾಡಿರುವ ರೋಹಿತ್ ಶರ್ಮಾ,  ಇದು ಒಂದು ರೀತಿಯ ಚೊಚ್ಚಲ ಸಿನಿಮಾ ಎಂದು ಬರೆದಿದ್ದಾರೆ. ಓಶಿಮ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಚಿತ್ರದ ಟ್ರೈಲರ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಲಿದೆ.

 

ಇದನ್ನೂ ಓದಿ : Asia Cup 2022 : ರೋಹಿತ್​ಗೆ ಎದುರಾಗಿದೆ ಸಂಕಷ್ಟ, ಪಾಂಡ್ಯ ವಾಪಸಾದರೆ ಟೀಂನಿಂದ ಯಾರು ಔಟ್?

ರಶ್ಮಿಕಾ ಮಂದಣ್ಣ ಸ್ಕ್ರೀನ್ ಹಂಚಿಕೊಳ್ಳಲಿರುವ ರೋಹಿತ್ ಶರ್ಮಾ :  
ಕನ್ನಡದ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 'ಮೆಗಾ ಬ್ಲಾಕ್‌ಬಸ್ಟರ್' ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಹೀಗಿರುವಾಗ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ  ನಾಯಕನಾಗಿ ರೋಹಿತ್ ಶರ್ಮಾ ನಟಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡತೊಡಗಿವೆ. 

 

ಒಟ್ಟಿನಲ್ಲಿ ರೋಹಿತ್  ಶರ್ಮಾ ಬ್ಯಾಟಿಂಗ್ ಶೈಲಿಯನ್ನು ಮೆಚ್ಚಿರುವ ಅಭಿಮಾನಿಗಳು ಇದೀಗ ಅವರ ನಟನೆಯನ್ನು ನೋಡಳು ಕಾತರದಿಂದ ಕಾಯುತ್ತಿದ್ದಾರೆ.  

ಇದನ್ನೂ ಓದಿ : ಅಭಿಮಾನಿಗಳಿಗೆ ಸಿಹಿ ಸುದ್ದಿ: ಮತ್ತೆ ಕ್ರಿಕೆಟ್ ಮೈದಾನಕ್ಕೆ ಬರಲಿದ್ದಾರೆ ಸಚಿನ್ ತೆಂಡೂಲ್ಕರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News