BCCI : ಬಿಸಿಸಿಐ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದ ಗಂಗೂಲಿ : ರೆಸ್'ನಲ್ಲಿ ರೋಜರ್ ಬಿನ್ನಿ!

ಈ ಟೂರ್ನಿಗೆ ಟೀಂ ಇಂಡಿಯಾ ಸಿದ್ಧತೆಯನ್ನೂ ಆರಂಭಿಸಿದೆ. ಇದೆಲ್ಲದರ ನಡುವೆ ಭಾರತೀಯ ಅಭಿಮಾನಿಗಳಿಗೆ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಟಿ20 ವಿಶ್ವಕಪ್ 2022 ರ ನಡುವೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಚುನಾವಣೆ ಕೂಡ ನಡೆಯಲಿದೆ.

Written by - Channabasava A Kashinakunti | Last Updated : Oct 7, 2022, 08:31 PM IST
  • 2022ರ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದೆ
  • ಅಕ್ಟೋಬರ್ 18 ಕ್ಕೆ ಗಂಗೂಲಿ ಅವಧಿ ಮುಕ್ತಾಯ
  • ಈ ಅನುಭವಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಗಳು
BCCI : ಬಿಸಿಸಿಐ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದ ಗಂಗೂಲಿ : ರೆಸ್'ನಲ್ಲಿ ರೋಜರ್ ಬಿನ್ನಿ! title=

BCCI President Election 2022 : 2022ರ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದೆ. ಈ ಟೂರ್ನಿಗೆ ಟೀಂ ಇಂಡಿಯಾ ಸಿದ್ಧತೆಯನ್ನೂ ಆರಂಭಿಸಿದೆ. ಇದೆಲ್ಲದರ ನಡುವೆ ಭಾರತೀಯ ಅಭಿಮಾನಿಗಳಿಗೆ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಟಿ20 ವಿಶ್ವಕಪ್ 2022 ರ ನಡುವೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಚುನಾವಣೆ ಕೂಡ ನಡೆಯಲಿದೆ.

ಅಕ್ಟೋಬರ್ 18 ಕ್ಕೆ ಗಂಗೂಲಿ ಅವಧಿ ಮುಕ್ತಾಯ

ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ತನದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಕ್ಟೋಬರ್ 18 ರ ನಂತರ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್ ಗಂಗೂಲಿ ಕೆಳಗಿಳಿಯಲಿದ್ದಾರೆ. ವಾಸ್ತವವಾಗಿ, ಗುರುವಾರ, ಬಿಸಿಸಿಐ ಅನುಭವಿಗಳ ಎರಡು ಪ್ರಮುಖ ಸಭೆಗಳು ದೆಹಲಿಯಲ್ಲಿ ನಡೆದಿವೆ. ಈ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ. ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, ಖಜಾಂಚಿ ಅರುಣ್ ಸಿಂಗ್ ಧುಮಾಲ್ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : IND W vs PAK W : ಏಷ್ಯಾ ಕಪ್ 2022 ರಲ್ಲಿ ಟೀಂ ಇಂಡಿಯಾಗೆ ಪಾಕ್ ವಿರುದ್ಧ ಸೋಲು!

ಈ ಎರಡು ಸ್ಥಳಗಳಲ್ಲಿ ನಡೆಯಿತು ಸಭೆ

ಮಾಧ್ಯಮ ವರದಿಗಳ ಪ್ರಕಾರ, ಮೊದಲ ಸಭೆ ಹೋಟೆಲ್‌ನಲ್ಲಿ ನಡೆದಿದ್ದು, ಎರಡನೇ ಸಭೆಯನ್ನು ಬಿಜೆಪಿಯ ಹಿರಿಯ ಸಚಿವರೊಬ್ಬರ ಮನೆಯಲ್ಲಿ ನಡೆಸಲಾಗಿದೆ. ಈ ಸಭೆಯ ನಂತರವಷ್ಟೇ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಲಾಗಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಜಯ್ ಶಾ ಸ್ಪರ್ಧಿಸಬಹುದು. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ, ಈ ಹುದ್ದೆಗೆ ಇಬ್ಬರು ಆಕಾಂಕ್ಷಿಗಳ ಹೆಸರು ಕೂಡ ಮುನ್ನೆಲೆಗೆ ಬಂದಿದೆ.

ಈ ಅನುಭವಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಗಳು

1983 ರ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಲ್ಲಿ ಒಬ್ಬರಾದ ರೋಜರ್ ಬಿನ್ನಿ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಗಳಾಗಿದ್ದರೆ. ಇದರಲ್ಲಿ ಒಬ್ಬರು ಐಪಿಎಲ್ ಅಧ್ಯಕ್ಷರಾಗಬಹುದು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಠಾಕೂರ್ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಿದ್ದಾರೆ. ಸೌರವ್ ಗಂಗೂಲಿ ಹೊರತುಪಡಿಸಿ, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರಿಗೂ ಚುನಾವಣೆಗೆ ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿಲ್ಲ. ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ಚುನಾವಣೆ ನಡೆಯಲಿದೆ.

ಇದನ್ನೂ ಓದಿ : Viral Video : ಭಾರತ ಸೋಲಿನ ನಂತರ ಚಪ್ಪಾಳೆ ತಟ್ಟಿದ ಕಾರ್ತಿಕ್, ಪಂಚ್ ನೀಡಿದ ರೋಹಿತ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News