IND vs ENG: ಇತಿಹಾಸ ಸೃಷ್ಟಿಸಿದ ಅಶ್ವಿನ್.. ದಿಗ್ಗಜರ ದಾಖಲೆಳೆಲ್ಲ ಉಡೀಸ್!

Ravichandran Ashwin: ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪೂರೈಸಿ.. ದಿಗ್ಗಜ ಬೌಲರ್‌ಗಳ ದಾಖಲೆಗಳನ್ನು ಮುರಿದರು. 

Written by - Savita M B | Last Updated : Feb 17, 2024, 08:45 AM IST
  • ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್
  • ರವಿಚಂದ್ರನ್ ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ.
  • ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪೂರೈಸಿ.. ದಿಗ್ಗಜ ಬೌಲರ್‌ಗಳ ದಾಖಲೆಗಳನ್ನು ಮುರಿದಿದ್ದಾರೆ
IND vs ENG: ಇತಿಹಾಸ ಸೃಷ್ಟಿಸಿದ ಅಶ್ವಿನ್.. ದಿಗ್ಗಜರ ದಾಖಲೆಳೆಲ್ಲ ಉಡೀಸ್! title=

India vs England - Ravichandran Ashwin: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ರಾಜ್‌ಕೋಟ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ನಲ್ಲಿ 500 ವಿಕೆಟ್ ಪೂರೈಸಿದರು. ಪಂದ್ಯದ ಎರಡನೇ ದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾಕ್ ಕ್ರೌಲಿಯನ್ನು ಔಟ್ ಮಾಡುವ ಮೂಲಕ ಅಶ್ವಿನ್ ಈ ಐತಿಹಾಸಿಕ ಸಾಧನೆ ಮಾಡಿ.. ಟೆಸ್ಟ್ ನಲ್ಲಿ 500 ವಿಕೆಟ್ ಪಡೆದ ಭಾರತದ ಎರಡನೇ ಕ್ರಿಕೆಟಿಗ ಮತ್ತು ವೇಗವಾಗಿ 500 ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 98ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದಾರೆ..

ಇನ್ನು 87ನೇ ಟೆಸ್ಟ್‌ನಲ್ಲಿ ಮುತ್ತಯ್ಯ ಮುರಳೀಧರನ್‌ ಅವರು ಟೆಸ್ಟ್‌ನಲ್ಲಿ ವೇಗವಾಗಿ 500 ವಿಕೆಟ್‌ ಗಳಿಸಿದ ದಾಖಲೆ ಹೊಂದಿದ್ದಾರೆ. ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ 105 ಟೆಸ್ಟ್‌ಗಳಲ್ಲಿ ಈ ದಾಖಲೆಯನ್ನು ಸಾಧಿಸಿದ್ದರೆ, ದಿವಂಗತ ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ ತಮ್ಮ 108 ನೇ ಟೆಸ್ಟ್‌ನಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಒಟ್ಟಾರೆಯಾಗಿ ಅಶ್ವಿನ್ ವಾರ್ನ್ ಮತ್ತು ಕುಂಬ್ಳೆ ಅವರನ್ನು ಹಿಂದಿಕ್ಕಿ ಅತಿವೇಗವಾಗಿ 500 ವಿಕೆಟ್ ಗಳಿಸಿದ ಆಟಗಾರ ಎನಿಸಿಕೊಂಡರು.

ಇದನ್ನೂ ಓದಿ-7 ಪಂದ್ಯ, 7 ಶತಕ… ಕೇನ್ ವಿಲಿಯಮ್ಸನ್ ಆಟಕ್ಕೆ 92 ವರ್ಷಗಳ ಬಳಿಕ ಇತಿಹಾಸವೇ ಸೃಷ್ಟಿ, ದಾಖಲೆಗಳೆಲ್ಲಾ ಉಡೀಸ್

ಅಲ್ಲದೆ, ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪೂರೈಸಿದ ವಿಶ್ವದ 9ನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾದರು. ಅಲ್ಲದೆ, 500 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಐದನೇ ಸ್ಪಿನ್ನರ್ ಆಗಿಯೂ ಅಶ್ವಿನ್‌ ಗುರುತಿಸಿಕೊಳ್ಳುತ್ತಿದ್ದಾರೆ... ಶ್ರೀಲಂಕಾದ ಆಟಗಾರ ಮುತ್ತಯ್ಯ ಮುರಳೀಧರನ್ (800) ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದಾರು... ಸದ್ಯ ಶೇನ್ ವಾರ್ನ್ (708) ಎರಡನೇ ಸ್ಥಾನದಲ್ಲಿದ್ದು, ಜೇಮ್ಸ್ ಆಂಡರ್ಸನ್ (695*) ಮೂರನೇ ಸ್ಥಾನದಲ್ಲಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು 

1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ 1992-2010): 133 ಟೆಸ್ಟ್‌ಗಳು - 800 ವಿಕೆಟ್‌ಗಳು 

2. ಶೇನ್ ವಾರ್ನ್ (ಆಸ್ಟ್ರೇಲಿಯಾ 1992-2007): 145 ಟೆಸ್ಟ್‌ಗಳು - 708 ವಿಕೆಟ್‌ಗಳು

3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್ 2003-2023): 185* ಟೆಸ್ಟ್‌ಗಳು - 696* ವಿಕೆಟ್‌ಗಳು

4. ಅನಿಲ್ ಕುಂಬ್ಳೆ (ಭಾರತ 1990-2008): 132 ಟೆಸ್ಟ್‌ಗಳು - 619 ವಿಕೆಟ್‌ಗಳು

5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್ 2007-2023): 167 ಟೆಸ್ಟ್‌ಗಳು - 604 ವಿಕೆಟ್‌ಗಳು

6. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ 1993-2007): 124 ಟೆಸ್ಟ್‌ಗಳು - 563 ವಿಕೆಟ್‌ಗಳು

7. ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್ 1984-2001): 132 ಟೆಸ್ಟ್‌ಗಳು - 519 ವಿಕೆಟ್‌ಗಳು

8. ನಾಥನ್ ಲಿಯಾನ್ (ಆಸ್ಟ್ರೇಲಿಯಾ 2011-2023): 127* ಟೆಸ್ಟ್‌ಗಳು - 517* ವಿಕೆಟ್‌ಗಳು

9. ರವಿಚಂದ್ರನ್ ಅಶ್ವಿನ್ (ಭಾರತ 2011-2023): 98* ಟೆಸ್ಟ್ - 500* ವಿಕೆಟ್‌ಗಳು.

ಇದನ್ನೂ ಓದಿ-ಮದ್ಯ ಸೇವಿಸಿ ಮಹಿಳಾ ಕ್ರಿಕೆಟಿಗರೊಂದಿಗೆ ಅನುಚಿತವಾಗಿ ವರ್ತಿಸಿದ ಕೋಚ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News