IPL 2022, RCB vs LSG: ಲಕ್ನೋ ವಿರುದ್ಧ ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್

ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಸ್ಫೋಟಕ ಆಟದ ನೆರವಿನಿಂದ ಲಕ್ನೋಗೆ RCB 208 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.  

Written by - Zee Kannada News Desk | Last Updated : May 26, 2022, 12:50 AM IST
  • ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳಿಗೆ ಬೆವರಿಳಿಸಿದ ರಜತ್ ಪಾಟಿದಾರ್
  • ಈಡನ್ ಗಾರ್ಡನ್ ಮೈದಾನದ ಮೂಲೆ ಮೂಲೆಗೆ ಬೌಂಡರಿ, ಸಿಕ್ಸರ್ ಗಳ ಸುರಿಮಳೆ
  • ರಜತ್ 7 ಅಮೋಘ ಸಿಕ್ಸರ್, 11 ಬೌಂಡರಿ ಇದ್ದ 112 ರನ್ ಗಳಿಸಿ ಶತಕ ಸಿಡಿಸಿದರು
IPL 2022, RCB vs LSG: ಲಕ್ನೋ ವಿರುದ್ಧ ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್ title=
ಶತಕ ಸಿಡಿಸಿದ ರಜತ್ ಪಾಟಿದಾರ್

ಕೋಲ್ಕತ್ತಾ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಜತ್ ಪಾಟಿದಾರ್ ಭರ್ಜರಿ ಶತಕ ಸಿಡಿಸಿದ್ದಾರೆ. ಟಾಸ್ ಗೆದ್ದ ಲಕ್ನೋ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ RCB ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಬೃಹತ್ ಮೊತ್ತ ಪೇರಿಸಿದೆ.

ಇದನ್ನೂ ಓದಿ: IPL 2022ರಲ್ಲಿಆರ್‌ಸಿಬಿ-ಲಕ್ನೋ ಪ್ರಶಸ್ತಿ ಗೆಲ್ಲುವುದು ಕಷ್ಟ! ಇದಕ್ಕೆ ದೊಡ್ಡ ಕಾರಣ ಏನು ಗೊತ್ತಾ?

ಲಕ್ನೋ ಬೌಲರ್ ಗಳಿಗೆ ಬೆವರಿಳಿಸಿದ ರಜತ್ ಪಾಟಿದಾರ್ ಈಡನ್ ಗಾರ್ಡನ್ ಮೈದಾನದ ಮೂಲೆ ಮೂಲೆಗೆ ಬೌಂಡರಿ, ಸಿಕ್ಸರ್ ಗಳ ಸುರಿಮಳೆ ಸುರಿಸಿದರು. 54 ಎಸೆತಗಳನ್ನು ಎದುರಿಸಿದ ರಜತ್ 7 ಅಮೋಘ ಸಿಕ್ಸರ್ ಮತ್ತು 12 ಬೌಂಡರಿ ಇದ್ದ ಅಜೇಯ112 ರನ್ ಗಳಿಸಿ ಸ್ಫೋಟಕ ಶತಕ ಸಿಡಿಸಿದರು. ರಜತ್ ಅಬ್ಬರದ ಆಟಕ್ಕೆ ಲಕ್ನೋ ತತ್ತರಿಸಿ ಹೋಯಿತು.

ಇದನ್ನೂ ಓದಿ: live ಪಂದ್ಯದ ನಡುವೆಯೇ ಅಶ್ವಿನ್ ಮೇಲೆ ಕೆಂಡ ಕಾರಿದ 20 ರ ಹರೆಯದ ಈ ಆಟಗಾರ..! 

RCB ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿದೆ. ರಜತ್ ಪಾಟಿದಾರ್(ಅಜೇಯ 112) ಮತ್ತು ದಿನೇಶ್ ಕಾರ್ತಿಕ್ (ಅಜೇಯ 37) ರನ್ ಗಳಿಸಿದ್ದಾರೆ. ರಜತ್ ಮತ್ತು ದಿನೇಶ್ ಸ್ಫೋಟಕ ಆಟದ ನೆರವಿನಿಂದ ಲಕ್ನೋಗೆ RCB 208 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News