IND vs BAN : ಅಶ್ವಿನ್ ಪ್ರದರ್ಶನ ನೋಡಿ 'ಸೈಂಟಿಸ್ಟ್' ಎಂದು ಕರೆದ ಸೆಹ್ವಾಗ್

Ravichandran Ashwin : ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಢಾಕಾದಲ್ಲಿ ಅದ್ಭುತ ಪ್ರದರ್ಶನ ನೀಡಿ, ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬಿಗಿದೆ.

Written by - Channabasava A Kashinakunti | Last Updated : Dec 25, 2022, 07:35 PM IST
  • ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಢಾಕಾದಲ್ಲಿ ಅದ್ಭುತ ಪ್ರದರ್ಶನ
  • ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯ ಗೆಲುವು
  • ಅಶ್ವಿನ್ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಭರ್ಜರಿ ಪ್ರದರ್ಶನ
IND vs BAN : ಅಶ್ವಿನ್ ಪ್ರದರ್ಶನ ನೋಡಿ 'ಸೈಂಟಿಸ್ಟ್' ಎಂದು ಕರೆದ ಸೆಹ್ವಾಗ್ title=

Ravichandran Ashwin : ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಢಾಕಾದಲ್ಲಿ ಅದ್ಭುತ ಪ್ರದರ್ಶನ ನೀಡಿ, ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬಿಗಿದೆ. ಭಾರತಕ್ಕೆ 145 ರನ್‌ಗಳ ಟಾರ್ಗೆಟ್ ನೀಡಿತ್ತು. ಆತಿಥೇಯರು 37 ರನ್‌ಗಳಿಗೆ ಅವರ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಶ್ವಿನ್ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಭರ್ಜರಿ ಪ್ರದರ್ಶನ ನೀಡಿದರು.

54 ರನ್ ಮತ್ತು 6 ವಿಕೆಟ್

ಅನುಭವಿ ರವಿಚಂದ್ರನ್ ಅಶ್ವಿನ್ ತಮ್ಮ ಆಲ್ ರೌಂಡ್ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ತಮ್ಮ ಆಫ್ ಸ್ಪಿನ್‌ನಿಂದ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ಬ್ಯಾಟಿಂಗ್ ನಿಂದಲೂ ಅಬ್ಬರಿಸಿದರು. ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ 4 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದರು. ಆಗ 12 ರನ್ ಗಳಿಸಿತ್ತು. ಇದಾದ ಬಳಿಕ ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಉರುಳಿಸಿತ್ತು. ಅಶ್ವಿನ್ ಭಾರತಕ್ಕೆ ಸಂರಕ್ಷಕ ಎಂದು ಮತ್ತೆ ಸಾಬೀತುಪಡಿಸಿದರು. 42 ರನ್‌ ಸಿಡಿಸಿ, ಔಟ್ ಆಗದೆ ಇನ್ನಿಂಗ್ಸ್ ಅಡಿ ಟೀಂ ಇಂಡಿಯಾವನ್ನು ಗೆಲ್ಲಿಸಿದರು. ಅಶ್ವಿನ್ 62 ಬಾಲ್ ಗೆ ಔಟ್ ಆಗದೆ, 4 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿದರು.

ಇದನ್ನೂ ಓದಿ : IND vs BAN : ಕಳಪೆ ಪ್ರದರ್ಶನದಿಂದ ಬಿಜೆಪಿ ನಾಯಕರ ಟೀಕೆಗೆ ಗುರಿಯಾದ ರಾಹುಲ್!

ವಿಜ್ಞಾನಿ ಎಂದು ಕರೆದ ಸೆಹ್ವಾಗ್

ಟೀಂ ಇಂಡಿಯಾದ ಮಾಜಿ ಆರಂಭಿಕ ಮತ್ತು ಹಿರಿಯ ಆಟಗಾರ ವೀರೇಂದ್ರ ಸೆಹ್ವಾಗ್ ಅಶ್ವಿನ್ ಅವರನ್ನು 'ವಿಜ್ಞಾನಿ' ಎಂದು ಕರೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೀಮ್ ಅನ್ನು ಹಂಚಿಕೊಂಡಿದ್ದಾರೆ. ಈ ಮೀಮ್ ನಲ್ಲಿ ಅಶ್ವಿನ್ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮೀಮ್ ಶೇರ್ ಮಾಡಿಕೊಂಡು 'ವಿಜ್ಞಾನಿ ಅಶ್ವಿನ್ ಮಾಡಿರುವುದು ಅದ್ಬುತ. ಅದು ಹೇಗೋ ಟೀಂ ಇಂಡಿಯಾ ಗೆದ್ದಿತು. ಅಶ್ವಿನ್ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ಅವರ ಅತ್ಯುತ್ತಮ ಜೊತೆಯಾಟ ಸೂಪರ್ ಆಗಿತ್ತು ಎಂದು ಬರೆದುಕೊಂಡಿದ್ದಾರೆ.

ಸರಣಿ ಗೆದ್ದು ಬಿಗಿದ ಟೀಂ ಇಂಡಿಯಾ 

ಢಾಕಾದ ಶೇರ್-ಎ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 3 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಆತಿಥೇಯ ತಂಡದ ನಾಯಕ ಶಕೀಬ್ ಅಲ್ ಹಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬಾಂಗ್ಲಾದೇಶದ ಇನ್ನಿಂಗ್ಸ್ 227 ರನ್‌ಗಳಿಗೆ ಆಲೌಟ್ ಆದ ನಂತರ ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 314 ರನ್ ಗಳಿಸಿತು. ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 231 ರನ್ ಗಳಿಸಿ ಟೀಂ ಇಂಡಿಯಾಗೆ ಗೆಲ್ಲಲು 145 ರನ್ ಟಾರ್ಗೆಟ್ ನೀಡಿದೆ. ರವಿಚಂದ್ರನ್ ಅಶ್ವಿನ್ (42*) ಮತ್ತು ಶ್ರೇಯಸ್ ಅಯ್ಯರ್ (29*) ಅವರ ಉಪಯುಕ್ತ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ 47 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿಯನ್ನು ಸಾಧಿಸಿತು. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇದನ್ನೂ ಓದಿ : RCB Squad IPL 2023: ಈ ಬಾರಿ ಆರ್‌ಸಿಬಿ ಪಕ್ಕಾ ಫೈನಲ್‍ಗೆ ಎಂಟ್ರಿಯಾಗುತ್ತೆ ಎಂದ ಟಾಮ್ ಮೂಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News