Punjab vs Bangalore: ಕೆ.ಎಲ್.ರಾಹುಲ್ ಅಬ್ಬರ, ಹರ್ಪ್ರೀತ್ ಕೈಚಳಕಕ್ಕೆ ಮಣಿದ RCB

ಅಹಮದಾಬಾದ್ ನಲ್ಲಿನ ಮೋಟೆರಾ ಕ್ರೀಡಾಂಗಣದಲ್ಲಿ ನಡೆದ  ಐಪಿಎಲ್ ಟೂರ್ನಿಯ 26 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 34 ರನ್ ಗಳಿಂದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.

Last Updated : Apr 30, 2021, 11:45 PM IST
Punjab vs Bangalore: ಕೆ.ಎಲ್.ರಾಹುಲ್ ಅಬ್ಬರ, ಹರ್ಪ್ರೀತ್ ಕೈಚಳಕಕ್ಕೆ ಮಣಿದ RCB  title=
Photo Courtesy: Twitter

ನವದೆಹಲಿ: ಅಹಮದಾಬಾದ್ ನಲ್ಲಿನ ಮೋಟೆರಾ ಕ್ರೀಡಾಂಗಣದಲ್ಲಿ ನಡೆದ  ಐಪಿಎಲ್ ಟೂರ್ನಿಯ 26 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 34 ರನ್ ಗಳಿಂದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.

ಟಾಸ್ ಗೆದ್ದು ಬೆಂಗಳೂರು ತಂಡವು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು. ಇನ್ನೊಂದೆಡೆಗೆ  ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡವು ಆರಂಭದಲ್ಲಿಯಲ್ಲಿ 19 ರನ್ ಗಳಾಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಗೂಡಿದ ಕೆ.ಎಲ್ ರಾಹುಲ್( 91) ಹಾಗೂ ಕ್ರಿಸ್ ಗೆಲ್( 46 ) ಅವರ ಭರ್ಜರಿ ಬ್ಯಾಟಿಂಗ್ ತಂಡವು ಉತ್ತಮ ಮೊತ್ತವನ್ನು ಪೂರೈಸುವಲ್ಲಿ ಸಾಧ್ಯವಾಯಿತು.

ಕೆ. ರಾಹುಲ್ ಕೇವಲ 57 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್ ಹಾಗೂ ಏಳು ಬೌಂಡರಿಗಳೊಂದಿಗೆ 91 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕ್ರಿಸ್ ಗಗೇಲ್  ಎರಡು ಭರ್ಜರಿ ಸಿಕ್ಸರ್ ಹಾಗೂ ಆರು ಬೌಂಡರಿಗಳ ನೆರವಿನಿಂದ 24 ಎಸೆತಗಳಲ್ಲಿ 46 ರನ್ ಗಳನ್ನು ಕಲೆ ಹಾಕಿದರು.ಇನ್ನೊಂದೆಡೆಗೆ ಕೊನೆಯಲ್ಲಿ ಹರಪ್ರೀತ್ ಬ್ರಾರ್  17 ಎಸೆತಗಳಲ್ಲಿ 25 ರನ್ ಗಳಿಸುವ ಮೂಲಕ ಪಂಜಾಬ್ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

180 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ತಂಡವು ಆರಂಭದಲ್ಲಿ ತಂಡದ ಮೊತ್ತ 19 ಆಗಿದ್ದಾಗ ದೇವದತ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಾದ ನಂತರ ಪಂಜಾಬ್ ತಂಡದ ಹರಪ್ರೀತ್ ದಾಳಿಗೆ ಸಿಲುಕಿದ ಬೆಂಗಳೂರು ತಂಡವು ಕೇವಲ 7 ರನ್ ಗಳ ಅಂತರದಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡಿತು. ತಂಡದ ಮೊತ್ತ 69 ರನ್ ಗಳಾಗಿದ್ದಾಗ  ನಾಲ್ಕು ವಿಕೆಟ್ ನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಒಳಗಾದ ಬೆಂಗಳೂರು ತಂಡವು ನಂತರ ಚೇತರಿಸಿಕೊಳ್ಳಲೆ ಇಲ್ಲ. ಕೊನೆಗೆ 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಳ್ಳುವ ಮೂಲಕ 145 ರನ್ ಗಳನ್ನು ಮಾತ್ರಗಳಿಸಲು ಸಾಧ್ಯವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News