ಅಂದು ಫಿಕ್ಸಿಂಗ್ ಆರೋಪದಲ್ಲಿ ಜೈಲು ಪಾಲಾಗಿದ್ದ ಸ್ಟಾರ್ ಬೌಲರ್’ಗೆ ಇಂದು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ! ಯಾರು ಗೊತ್ತಾ ಆ ಕ್ರಿಕೆಟಿಗ?

Mohammad Amir Retirement U Turn: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ 2010 ಮತ್ತು 2015 ರ ನಡುವೆ ನಿಷೇಧವನ್ನು ಎದುರಿಸಿದ್ದರು. ಅದಾದ ಬಳಿಕ ಸ್ವಲ್ಪ ಸಮಯ ಜೈಲು ವಾಸ ಕೂಡ ಅನುಭವಿಸಿದ್ದರು. ನಂತರ ಅಮೀರ್ 2021 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Written by - Bhavishya Shetty | Last Updated : Mar 24, 2024, 09:11 PM IST
    • ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್
    • ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿ ನಿರ್ಧಾರವನ್ನು ಬದಲಾಯಿಸಿದ್ದಾರೆ
    • ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ 2010 ಮತ್ತು 2015 ರ ನಡುವೆ ನಿಷೇಧವನ್ನು ಎದುರಿಸಿದ್ದರು
ಅಂದು ಫಿಕ್ಸಿಂಗ್ ಆರೋಪದಲ್ಲಿ ಜೈಲು ಪಾಲಾಗಿದ್ದ ಸ್ಟಾರ್ ಬೌಲರ್’ಗೆ ಇಂದು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ! ಯಾರು ಗೊತ್ತಾ ಆ ಕ್ರಿಕೆಟಿಗ? title=
File Photo

Mohammad Amir Retirement U Turn: ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿ ನಿರ್ಧಾರವನ್ನು ಬದಲಾಯಿಸಿದ್ದಾರೆ. ಜೂನ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಆಯ್ಕೆಗೆ ಲಭ್ಯರಾಗಲಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ 2010 ಮತ್ತು 2015 ರ ನಡುವೆ ನಿಷೇಧವನ್ನು ಎದುರಿಸಿದ್ದರು. ಅದಾದ ಬಳಿಕ ಸ್ವಲ್ಪ ಸಮಯ ಜೈಲು ವಾಸ ಕೂಡ ಅನುಭವಿಸಿದ್ದರು. ನಂತರ ಅಮೀರ್ 2021 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈಗ ಮತ್ತೊಮ್ಮೆ ದೇಶಕ್ಕಾಗಿ ಆಡಲು ನಿವೃತ್ತಿ ಹಿಂತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಆರಂಭಿಕ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ RCBಗೆ ಸಿಂಹಸ್ವಪ್ನವಾಗಿ ಕಾಡಿದ ಈ ಎಂ.ರೆಹಮಾನ್ ಯಾರು? ಆತನ ಹಿನ್ನೆಲೆ ಏನು ಗೊತ್ತಾ?

31 ವರ್ಷದ ವೇಗದ ಬೌಲರ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ನಾನು ಇನ್ನೂ ಪಾಕಿಸ್ತಾನಕ್ಕಾಗಿ ಆಡುವ ಕನಸು ಕಾಣುತ್ತೇನೆ! ಕೆಲವೊಮ್ಮೆ ನಮ್ಮ ನಿರ್ಧಾರಗಳನ್ನು ಪುನರ್ವಿಮರ್ಶಿಸಬೇಕಾದ ಹಂತಕ್ಕೆ ಜೀವನವು ನಮ್ಮನ್ನು ತರುತ್ತದೆ. ನನ್ನ ಮತ್ತು ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ನಡುವೆ ಕೆಲವು ಸಕಾರಾತ್ಮಕ ಚರ್ಚೆಗಳು ನಡೆದಿವೆ, ಅಲ್ಲಿ ಗೌರವದಿಂದ ನನ್ನ ಅಗತ್ಯವಿದೆ ಎಂದು ಭಾವಿಸಿದರು. ಕುಟುಂಬದೊಂದಿಗೆ ಚರ್ಚಿಸಿದ ನಂತರ ನಾನು ಪಾಕಿಸ್ತಾನಕ್ಕಾಗಿ ಆಡಬಹುದು ಎಂದು ನಿರ್ಧರಿಸಿದೆ. ಮುಂಬರುವ T20 ವಿಶ್ವಕಪ್ ತಂಡದಲ್ಲಿ ಆಯ್ಕೆಗೆ ನಾನು ಲಭ್ಯವಿದ್ದೇನೆ ಎಂದು ಘೋಷಿಸುತ್ತೇನೆ. ನನ್ನ ದೇಶಕ್ಕಾಗಿ ನಾನು ಇದನ್ನು ಮಾಡಲು ಬಯಸುತ್ತೇನೆ, ಏಕೆಂದರೆ ಇದು ನನ್ನ ವೈಯಕ್ತಿಕ ನಿರ್ಧಾರಗಳಿಗೆ ಮುಂಚಿತವಾಗಿ ಬರುತ್ತದೆ. ಹಸಿರು ಜರ್ಸಿಯನ್ನು ಧರಿಸಿ ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ಯಾವಾಗಲೂ ನನ್ನ ದೊಡ್ಡ ಆಸೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2024: 20 ಎಸೆತ ಆಡುವಷ್ಟರಲ್ಲಿ 2 ಬಾರಿ ಸ್ಥಗಿತಗೊಂಡ RR vs LSG ಮ್ಯಾಚ್! ಕಾರಣವೇನು ಗೊತ್ತಾ?

ಮೊಹಮ್ಮದ್ ಅಮೀರ್ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌’ನಲ್ಲಿ ಭಾರತಕ್ಕೆ ಸಂಕಷ್ಟ ತಂದೊಡ್ಡಿದ್ದರು. ಈ ಪಂದ್ಯದಲ್ಲಿ ಅಮೀರ್ ತನ್ನ ಮಾರಕ ಬೌಲಿಂಗ್‌’ನಿಂದ ಭಾರತದ ಅಗ್ರ ಕ್ರಮಾಂಕವನ್ನು ನಾಶಪಡಿಸಿದ್ದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌’ಗಳಲ್ಲಿ 4 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ಭಾರತ ಬ್ಯಾಟ್ಸ್‌ಮನ್‌ಗಳು ಕೇವಲ 158 ರನ್‌’ಗಳಿಗೆ ಆಲೌಟ್ ಆದರು. ಈ ಸಂದರ್ಭದಲ್ಲಿ ಅಮೀರ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರನ್ನು ಔಟ್ ಮಾಡಿ, ಭಾರತಕ್ಕೆ ಸೋಲು ಕಾಣುವಂತೆ ಮಾಡಿದ್ದರು.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News