Umesh Yadav: ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್‍ಗೆ 44 ಲಕ್ಷ ರೂ. ವಂಚನೆ!

Umesh Yadav: 2014ರ ಜುಲೈ 15ರಂದು ಉಮೇಶ್ ಯಾದವ್ ಟೀಂ ಇಂಡಿಯಾ ಸದಸ್ಯರಾಗಿ ಆಯ್ಕೆಯಾದ ನಂತರ ನಿರುದ್ಯೋಗಿಯಾಗಿದ್ದ ತನ್ನ ಸ್ನೇಹಿತ ಶೈಲೇಶ್ ಠಾಕ್ರೆಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು.

Written by - Puttaraj K Alur | Last Updated : Jan 22, 2023, 08:16 AM IST
  • ತನ್ನ ಸ್ನೇಹಿತನಿಂದಲೇ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್‍ಗೆ ವಂಚನೆ
  • ಮಹಾರಾಷ್ಟ್ರದ ನಾಗ್ಪುರಲ್ಲಿ ಜಮೀನು ಖರೀದಿಸುವ ನೆಪದಲ್ಲಿ ವಂಚನೆ
  • ಮ್ಯಾನೇಜರ್ ಆಗಿದ್ದ ಸ್ನೇಹಿತನಿಂದಲೇ 44 ಲಕ್ಷ ರೂ. ವಂಚನೆ ನಡೆದಿದೆ
Umesh Yadav: ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್‍ಗೆ 44 ಲಕ್ಷ ರೂ. ವಂಚನೆ! title=
ಉಮೇಶ್ ಯಾದವ್‍ಗೆ ವಂಚನೆ!

ಮುಂಬೈ: ಮಹಾರಾಷ್ಟ್ರದ ನಾಗ್ಪುರಲ್ಲಿ ಜಮೀನು ಖರೀದಿಸುವ ನೆಪದಲ್ಲಿ ತನ್ನ ಸ್ನೇಹಿತನಿಂದಲೇ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ವಂಚನೆಗೊಳಗಾಗಿದ್ದಾರೆಂದು ವರದಿಯಾಗಿದೆ.

ಮ್ಯಾನೇಜರ್ ಕೂಡ ಆಗಿದ್ದ ಸ್ನೇಹಿತನಿಂದಲೇ 44 ಲಕ್ಷ ರೂ.ವನ್ನು ಉಮೇಶ್ ಯಾದವ್ ಕಳೆದುಕೊಂಡಿದ್ದಾರೆ. ಈ ಸಂಬಂಧ ಶೈಲೇಶ್ ಠಾಕ್ರೆ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇನ್ನೂ ಆರೋಪಿಯನ್ನು ಬಂಧಿಸಿಲ್ಲವೆಂದು ತಿಳಿದುಬಂದಿದೆ.

2014ರ ಜುಲೈ 15ರಂದು ಉಮೇಶ್ ಯಾದವ್ ಟೀಂ ಇಂಡಿಯಾ ಸದಸ್ಯರಾಗಿ ಆಯ್ಕೆಯಾದ ನಂತರ ನಿರುದ್ಯೋಗಿಯಾಗಿದ್ದ ತನ್ನ ಸ್ನೇಹಿತ ಶೈಲೇಶ್ ಠಾಕ್ರೆಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಇದೀಗ ಆತನಿಂದಲೇ ತನೆಗೆ ವಂಚನೆಯಾಗಿದೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ʼಪಂತ್‌ ಇಸ್‌ ಬ್ಯಾಕ್‌...ʼ ಸಹಜ ಸ್ಥಿತಿಗೆ ಮರಳಲಿದ್ದಾರೆ ಕ್ರಿಕೆಟಿಗ ರಿಷಬ್..!

ಮ್ಯಾನೇಜರ್ ಆಗಿದ್ದ ಶೈಲೇಶ್ ಠಾಕ್ರೆ ಉಮೇಶ್ ಯಾದವ್ ವಿಶ್ವಾಸ ಗಳಿಸಿದ್ದ. ಕ್ರಿಕೆಟಿಗನ ಎಲ್ಲಾ ಹಣಕಾಸಿನ ವ್ಯವಹಾರ ನಿಭಾಯಿಸಲು ಪ್ರಾರಂಭಿಸಿದ್ದ. ಬ್ಯಾಂಕ್ ಖಾತೆ, ಆದಾಯ ತೆರಿಗೆ & ಇತರ ಹಣಕಾಸು ಕಾರ್ಯಗಳನ್ನು ಶೈಲೇಶ್ ನಿರ್ವಹಿಸುತ್ತಿದ್ದ. ಉಮೇಶ್ ಯಾದವ್ ಅವರ ಎಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದ ಶೈಲೇಶ್ ನಾಗ್ಪುರದಲ್ಲಿ ಖಾಲಿ ಜಮೀನು ಮಾರಾಟಕ್ಕಿದ್ದು, 44 ಲಕ್ಷ ರೂ.ಗೆ ಸಿಗುತ್ತದೆಂದು ತಿಳಿಸಿದ್ದನಂತೆ. ಇದನ್ನು ನಂಬಿದ್ದ ಉಮೇಶ್ ಯಾದವ್‍ರಿಂದ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದನಂತೆ.

ನಂತರ ಶೈಲೇಶ್ ಠಾಕ್ರೆ ನಿವೇಶನವನ್ನು ತನ್ನ ಹೆಸರಿಗೆ ಮಾಡಿಕೊಂಡು ಉಮೇಶ್‍ ಯಾದವ್‍ಗೆ ವಂಚಿಸಿದ್ದಾನೆ. ನಿವೇಶನ ಹಿಂತಿರುಗಿಸಲು ನಿರಾಕರಿಸಿದ್ದರಿಂದ ಉಮೇಶ್ ಯಾದವ್ ಆತನ ವಿರುದ್ಧ ದೂರು ನೀಡಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.    

ಈ ಬಗ್ಗೆ ನಾಗ್ಪುರ ಡಿಸಿಪಿ ಅಶ್ವಿನಿ ಪಾಟೀಲ್ ಮಾತನಾಡಿ, ‘ಕ್ರಿಕೆಟಿಗ ಉಮೇಶ್ ಯಾದವ್ ಹೆಸರಲ್ಲಿ ಆಸ್ತಿ ಖರೀದಿಸಲು ಶೈಲೇಶ್ ಠಾಕ್ರೆ 44 ಲಕ್ಷ ರೂ. ಪಡೆದು ದ್ರೋಹ ಮಾಡಿದ್ದಾರೆ. ಐಪಿಸಿ ಸೆಕ್ಷನ್ 406 ಮತ್ತು 420ರಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮ್ಯಾನೇಜರ್‍ಗಾಗಿ ಶೋಧ ನಡೆಸುತ್ತಿದ್ದೇವೆಂದು’ ತಿಳಿಸಿದ್ದಾರೆ.  

ಇದನ್ನೂ ಓದಿ: IND vs NZ : ಇಂದು ನಾಯಕ ರೋಹಿತ್ ಮುಂದಿವೆ ಈ ಸವಾಲು, 2 ತಪ್ಪು ಸರಣಿ ಗೆಲ್ಲುವ ಕನಸನ್ನೇ ಮುರಿಯಬಹುದು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News