Viral Video: ‘ಚಿನ್ನ’ದ ಹುಡುಗ ನೀರಜ್ ಜೋಪ್ರಾನ ಮಸ್ತ್ ಮಸ್ತ್ ಡ್ಯಾನ್ಸ್ ವಿಡಿಯೋ ವೈರಲ್..!

‘ಚಿನ್ನ’ದ ಹುಡುಗ ನೀರಜ್ ಚೋಪ್ರಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

Written by - Puttaraj K Alur | Last Updated : Aug 9, 2021, 10:13 AM IST
  • ಟೋಕಿಯೊ ಒಲಂಪಿಕ್ಸ್ ನಲ್ಲಿ ‘ಚಿನ್ನ’ದ ಸಾಧನೆ ಮಾಡಿದ ನೀರಜ್ ಚೋಪ್ರಾ ಡ್ಯಾನ್ಸ್ ವಿಡಿಯೋ ವೈರಲ್
  • ಪಂಜಾಬಿ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿರುವ ನೀರಜ್ ಚೋಪ್ರಾ
  • 87.58 ಮೀ. ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ನೀರಜ್ ಚೋಪ್ರಾ
Viral Video: ‘ಚಿನ್ನ’ದ ಹುಡುಗ ನೀರಜ್ ಜೋಪ್ರಾನ ಮಸ್ತ್ ಮಸ್ತ್ ಡ್ಯಾನ್ಸ್ ವಿಡಿಯೋ ವೈರಲ್..!    title=
ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ ನೀರಜ್ ಚೋಪ್ರಾ

ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟ(Tokyo Olympics 2020)ದಲ್ಲಿ ಚಿನ್ನದ ಪದಕ ಗೆದ್ದು ಕೋಟ್ಯಂತರ ಭಾರತೀಯರ ಹೃದಯ ಗೆದ್ದ 23 ವರ್ಷದ ನೀರಜ್ ಚೋಪ್ರಾ ಇಡೀ ದೇಶದಕ್ಕೆ ಹೆಮ್ಮೆ ತಂದಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಬಹುವರ್ಷಗಳ ನಂತರ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ ನೀರಜ್ ಸಾಧನೆ ಪ್ರತಿಯೊಬ್ಬ ಕ್ರೀಡಾಪಟುವಿಗೂ ಸ್ಫೂರ್ತಿಯಾಗಿದೆ. ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಬಂಗಾರದ ಪದಕದ ಬರವನ್ನು ನೀರಜ್ ನೀಗಿಸಿದ್ದಾರೆ.

ಇದನ್ನೂ ಓದಿ: ಈ ನಟಿಗೆ ಪಿ.ಟಿ.ಉಷಾ ಕುರಿತ ಜೀವನ ಚರಿತ್ರೆ ಚಿತ್ರದಲ್ಲಿ ನಟಿಸಬೇಕಂತೆ...!

ಟೋಕಿಯೊ ಒಲಂಪಿಕ್ಸ್ ನಲ್ಲಿ ಬರೋಬ್ಬರಿ 87.58 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್(Neeraj Chopra)ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ ನಲ್ಲಿ 10 ಮೀ. ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ ವೈಯುಕ್ತಿಕ ವಿಭಾಗದಲ್ಲಿ ಸ್ವರ್ಣ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ದಾಖಲೆ ಬರೆದಿದ್ದರು. ಇದೀಗ ನೀರಜ್ ಚೋಪ್ರಾ ಕೂಡ ಆ ಸಾಧನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್ ಒಬ್ಬ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಕನಸು ನನಸಾದಂತಾಗಿದೆ. ನೀರಜ್ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ತಿಳಿಸಿದ್ದಾರೆ. ಚಿನ್ನದ ಹುಡುಗನಿಗೆ ಬಹುಮಾನಗಳ ಸುರಿಮಳೆಯೇ ಆಗಿದೆ. ಈ ಮಧ್ಯೆ ಅವರ ಕೆಲ ಹಳೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ಪಿ.ಟಿ ಉಷಾ ಆದಾಗ...! ಕ್ರೀಡಾ ದಿನದಂದು ಪೋಸ್ಟರ್ ವೈರಲ್

ಸ್ವರ್ಣ ಸಾಧನೆ ಮಾಡಿರುವ ನೀರಜ್ ಜಾವೆಲಿನ್(Javelin Throw)ಎಸೆಯುವುದಕ್ಕೂ ಸೈ.. ಡ್ಯಾನ್ಸ್ ಮಾಡಲು ಸೈ.. ಪಂಜಾಬಿ ಹಾಡಿಗೆ ನೀರಜ್ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿಡಿಯೋ ಶೇರ್ ಆದ ಕೇವಲ 24 ಗಂಟೆಯಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ‘ನೀರಜ್ ಚೋಪ್ರಾ ಜಾವೆಲಿನ್ ಎಸೆಯುವುದರ ಜೊತೆ ಜೊತೆಗೆ ಸಖತ್ ಆಗಿ ಹೆಜ್ಜೆಯನ್ನೂ ಹಾಕುತ್ತಾರೆ’ ಅಂತಾ ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಅನೇಕರು ನೀರಜ್ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಚಿನ್ನದ ಹುಡುಗ ಭರ್ಜರಿ ಡ್ಯಾನ್ಸ್ ಅಂತಾ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಟೋಕಿಯೊ ಒಲಂಪಿಕ್ಸ್(Tokyo Olympics)ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ಅವರ ಕನಸನ್ನು ನನಸು ಮಾಡಿದ್ದಾರೆ. ತವರಿಗೆ ಮರಳಿದ ಬಳಿಕ ತಮ್ಮ ಚಿನ್ನದ ಪದಕವನ್ನು ಮಿಲ್ಕಾ ಸಿಂಗ್ ಅವರಿಗೆ ಸಮರ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News