Mangaluru: ಮುಸ್ಲಿಂ ಯುವತಿಯನ್ನೇ ವರಿಸಿದ ಬಜರಂಗದಳ ಕಾರ್ಯಕರ್ತ..!

Muslim woman marries Bajrang Dal activist: ಕಳೆದ ಮೂರು ವರ್ಷಗಳಿಂದ ಪ್ರಶಾಂತ್ ಭಂಡಾರಿ ಹಾಗೂ ಆಯಿಷಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಜರಂಗದಳ ಕಾರ್ಯಕರ್ತನೇ ಅಂತರ್ ಧರ್ಮೀಯ ವಿವಾಹವಾಗಿರುವುದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Written by - Puttaraj K Alur | Last Updated : Dec 8, 2023, 06:52 PM IST
  • ಮುಸ್ಲಿಂ ಯುವತಿಯನ್ನೇ ಪ್ರೀತಿಸಿ ವಿವಾಹವಾದ ಬಜರಂಗದಳ ಕಾರ್ಯಕರ್ತ
  • ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿರುವ ಘಟನೆ
  • ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ
Mangaluru: ಮುಸ್ಲಿಂ ಯುವತಿಯನ್ನೇ ವರಿಸಿದ ಬಜರಂಗದಳ ಕಾರ್ಯಕರ್ತ..! title=
ಸುರತ್ಕಲ್‌ನಲ್ಲಿ ನಡೆದಿರುವ ಘಟನೆ!

ಮಂಗಳೂರು (ದಕ್ಷಿಣ ಕನ್ನಡ): ಬಜರಂಗದಳ ಕಾರ್ಯಕರ್ತನೋರ್ವ ಮುಸ್ಲಿಂ ಯುವತಿಯನ್ನೇ ಪ್ರೀತಿಸಿ ವಿವಾಹವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಭಂಡಾರಿ ಎಂಬುವರು ಆಯೇಷಾ ಎಂಬ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶುಕ್ರವಾರ ಹಿಂದುತ್ವ ಕಾರ್ಯಕರ್ತರು ಭಜರಂಗದಳದ ಕಾರ್ಯಕರ್ತನೊಂದಿಗೆ  ಮುಸ್ಲಿಂ ಮಹಿಳೆಯ ವಿವಾಹ ಸಮಾರಂಭವನ್ನು ಆಚರಿಸಿದರು. ಕಳೆದ 3 ವರ್ಷಗಳಿಂದ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಇದನ್ನೂ ಓದಿ: Viral Video: 'ತಾಳಿ ಕಟ್ಟುವ ಶುಭ ವೇಳೆ' ಕೈ ಅಡ್ಡ ಹಿಡಿದ ವಧು! ವರನಿಗೆ ಏನಾಯ್ತು..?

ದಕ್ಷಿಣ ಕನ್ನಡದ ಸುರತ್ಕಲ್ ಪಟ್ಟಣದ ಹಿಂದುತ್ವ ಕಾರ್ಯಕರ್ತರು ಆಯೇಷಾ ಅಕ್ಷತಾ ಆಗಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕಿದ್ದಾರೆ. ಪ್ರಶಾಂತ್‌ ಮತ್ತು ಆಯೇಷಾ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನೂತನ ದಂಪತಿ ಸಂಪ್ರದಾಯಿಕ ಹಿಂದೂ ಉಡುಗೆಯನ್ನು ಧರಿಸಿರುವುದನ್ನು ಕಾಣಬಹುದು.

ನವೆಂಬರ್ 30 ರಂದು ಪ್ರಶಾಂತ್‌, ʼನಿಮ್ಮ ಮಗಳು-ನಾನು ಪರಸ್ಪರ ಪ್ರೀತಿಸುತ್ತಿದ್ದು, ನಮ್ಮಿಬ್ಬರ ಮದುವೆಗೆ ಅನುಮತಿ ನೀಡಬೇಕುʼ ಎಂದು ಆಯೇಷಾಳ ತಾಯಿಗೆ ಮನವಿ ಮಾಡಿಕೊಂಡಿದ್ದರಂತೆ. ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದರು.  ಅದೇ ದಿನ ಸಂಜೆ ಪ್ರಶಾಂತ್‌ ಮತ್ತು ಆಯೇಷಾ ನಾಪತ್ತೆಯಾದ ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ರೌಡಿಶೀಟರ್ ಕೇಸ್ ಕೂಡ ಇದೆ ಎನ್ನಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಆಡಳಿತ, ರಾಜಕೀಯ ವ್ಯವಸ್ಥೆಯ ಅರಿವು ಮುಖ್ಯ- ಸಚಿವ ಸಂತೋಷ ಲಾಡ್

ಬಜರಂಗದಳ ಕಾರ್ಯಕರ್ತನೇ ಅಂತರ್ ಧರ್ಮೀಯ ವಿವಾಹವಾಗಿರುವುದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದ್ದು, ಶುಕ್ರವಾರ ಸಂಜೆ ದಂಪತಿ ತಮಗೆ ರಕ್ಷಣೆ ಕೋರಿ ಸುರತ್ಕಲ್ ಪೊಲೀಸ್ ಠಾಣೆಗೆ ಹಾಜರಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News