ಜಲಪಾತದಲ್ಲಿ ಜಳಕ-ಪುಳಕ; ಧೋನಿ ವೀಡಿಯೋ ಆಯ್ತು ವೈರಲ್!

ಎಂ.ಎಸ್.ಧೋನಿ ಜಲಪಾತದಲ್ಲಿ ಜಳಕ ಮಾಡುತ್ತಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Last Updated : Aug 12, 2018, 06:31 PM IST
ಜಲಪಾತದಲ್ಲಿ ಜಳಕ-ಪುಳಕ; ಧೋನಿ ವೀಡಿಯೋ ಆಯ್ತು ವೈರಲ್! title=

ನವದೆಹಲಿ: ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಕ್ರಿಕೆಟರ್ ಎಂ.ಎಸ್.ಧೋನಿ ಇದೀಗ ಪ್ರಕೃತಿ ನಡುವೆ ವಿಶ್ರಾಂತಿ ಮೂಡ್ ಅಲ್ಲಿ ಇದ್ದಂತಿದೆ. ಹಾಗಂತ ನಾವ್ ಹೇಳ್ತಿಲ್ಲ. ಧೋನಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರೋ ವೀಡಿಯೋ ಹೇಳ್ತಿದೆ!

ಧೋನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಜಾರ್ಖಂಡ್ ಸರೋವರ ಬಳಿ ಸ್ನಾನ ಮಾಡುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ರಾಂಚಿ ನಗರದ ಬಳಿ 3 ಜಲಪಾತಗಳಿದ್ದು, ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು. ಆದರೆ ನಾನು 10 ವರ್ಷಗಳ ಬಳಿಕ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದೇನೆ. ಹಳೆಯ ನೆನಪುಗಳು ಮರುಕಳಿಸುತ್ತಿವೆ. ಅಲ್ಲದೆ ಒಳ್ಳೆಯ ಹೆಡ್ ಮಸ್ಸಾಜ್ ಕೂಡ ಆಗುತ್ತಿದೆ ಎಂದು ಧೋನಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇದೀಗ ಧೋನಿ ಜಲಪಾತದಲ್ಲಿ ಜಳಕ ಮಾಡುತ್ತಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಲೈಕ್ ಮತ್ತು ಕಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. 
 

Trending News