ಮೈದಾನಕ್ಕೆ ಬಂದಾಗೆಲ್ಲ 'ರಾಮ್ ಸಿಯಾ ರಾಮ್' ಹಾಡು ಪ್ಲೇ ಮಾಡೋದೇಕೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಕೇಶವ್ ಮಹಾರಾಜ್

Keshav Maharaj on 'ram siya ram' song: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯ ವೇಳೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದ ಕೆಎಲ್ ರಾಹುಲ್ ಕೂಡ ಮಹಾರಾಜ್‌’ಗೆ, ‘ನೀವು ಮೈದಾನಕ್ಕೆ ಬಂದಾಗಲೆಲ್ಲಾ ಅವರು ಈ ಹಾಡನ್ನು ಪ್ಲೇ ಮಾಡುತ್ತಾರೆ” ಎಂದು ಹೇಳಿದ್ದರು.

Written by - Bhavishya Shetty | Last Updated : Jan 9, 2024, 05:17 PM IST
    • ಕ್ರಿಕೆಟ್ ಪಂದ್ಯದ ವೇಳೆ ಭಕ್ತಿ ಪ್ರಧಾನ ಹಾಡುಗಳನ್ನು ಪ್ಲೇ ಮಾಡುವುದು ಅಪರೂಪ
    • ಕೇಶವ ಮಹಾರಾಜ್ ಮೈದಾನಕ್ಕೆ ಬಂದಾಗಲೆಲ್ಲಾ 'ರಾಮ್ ಸಿಯಾ ರಾಮ್' ಹಾಡನ್ನು ಪ್ಲೇ ಮಾಡುತ್ತಾರೆ
    • ಈ ಹಾಡನ್ನು ಪ್ಲೇ ಮಾಡುವಂತೆ ಸ್ವತಃ ಅವರೇ ವಿನಂತಿ ಮಾಡುತ್ತಾರೆ
ಮೈದಾನಕ್ಕೆ ಬಂದಾಗೆಲ್ಲ 'ರಾಮ್ ಸಿಯಾ ರಾಮ್' ಹಾಡು ಪ್ಲೇ ಮಾಡೋದೇಕೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಕೇಶವ್ ಮಹಾರಾಜ್ title=
Keshav Maharaj on Ram Siya Ram Song

Keshav Maharaj on 'ram siya ram' song: ಕ್ರಿಕೆಟ್ ಪಂದ್ಯದ ವೇಳೆ ಭಕ್ತಿ ಪ್ರಧಾನ ಹಾಡುಗಳನ್ನು ಪ್ಲೇ ಮಾಡುವುದು ಅಪರೂಪ, ಆದರೆ ಕೇಶವ ಮಹಾರಾಜ್ ಮೈದಾನಕ್ಕೆ ಬಂದಾಗಲೆಲ್ಲಾ ಸ್ಟೇಡಿಯಂನಲ್ಲಿರುವ ಡಿಜೆ 'ರಾಮ್ ಸಿಯಾ ರಾಮ್' ಹಾಡನ್ನು ಪ್ಲೇ ಮಾಡುತ್ತಾರೆ. ಅಷ್ಟಕ್ಕೂ ಈ ಹಾಡನ್ನು ಪ್ಲೇ ಮಾಡುವಂತೆ ಸ್ವತಃ ಅವರೇ ವಿನಂತಿ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ಬಿಗ್ ಬಾಸ್ ನಲ್ಲಿ ನೇರವಾಗಿ ಫೈನಲ್ ಗೆ ಟಿಕೆಟ್ ಪಡೆದ ಸ್ಪರ್ಧಿ! ಇವರಿಗಿಲ್ಲ ಇನ್ನು ನಾಮಿನೇಷನ್ ಭಯ

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯ ವೇಳೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದ ಕೆಎಲ್ ರಾಹುಲ್ ಕೂಡ ಮಹಾರಾಜ್‌’ಗೆ, ‘ನೀವು ಮೈದಾನಕ್ಕೆ ಬಂದಾಗಲೆಲ್ಲಾ ಅವರು ಈ ಹಾಡನ್ನು ಪ್ಲೇ ಮಾಡುತ್ತಾರೆ” ಎಂದು ಹೇಳಿದ್ದರು.

ಕೇಪ್ ಟೌನ್ ಟೆಸ್ಟ್‌’ನಲ್ಲಿ ಮಹಾರಾಜ್ ಬ್ಯಾಟಿಂಗ್‌’ಗೆ ಬಂದಾಗ, ಈ ಹಾಡು ಮತ್ತೊಮ್ಮೆ ಪ್ಲೇ ಮಾಡಿದರು. ಈ ಸಮಯದಲ್ಲಿ, ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೈ ಜೋಡಿಸಿ ನಿಂತು ಭಗವಾನ್ ಶ್ರೀರಾಮನಂತೆ ಬಿಲ್ಲು ಬಾಣ ಹಿಡಿದಿರುವ ಪೋಸ್ ನೀಡಿದ್ದರು.

ಇನ್ನು ಈ ಬಗ್ಗೆ ಕೇಶವ್ ಮಹಾರಾಜ್ ಬಳಿ ಪ್ರಶ್ನಿಸಿದಾಗ, “ಆ ಹಾಡನ್ನು ಪ್ಲೇ ಮಾಡಲು ನಾನೇ ವಿನಂತಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಸಿಕ್ಕ ಪೇಮೆಂಟ್ ಎಷ್ಟು? ಮಾಹಿತಿ ಬಹಿರಂಗಪಡಿಸಿದ ನಟಿ ಸಿರಿ

ಡರ್ಬನ್ ಮೂಲದ ಭಾರತೀಯ ಮೂಲದ ಕ್ರಿಕೆಟಿಗ ಮಹಾರಾಜ್‌’ಗೆ, ಭಗವಾನ್ ರಾಮನೇ ದೊಡ್ಡ ಶಕ್ತಿಯಂತೆ. “ರಾಮನೇ ನನಗೆ ದೊಡ್ಡ ಶಕ್ತಿ. ಈ ರೀತಿ ಭಕ್ತಿ ತೋರಿಸಲು ಅವಕಾಶ ಸಿಕ್ಕಾಗಲೆಲ್ಲಾ ನಾನು ಅದನ್ನು ತೋರ್ಪಡಿಸಲು ಪ್ರಯತ್ನಿಸುತ್ತೇನೆ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಇತರ ಆಟಗಾರರಿಂದ ಗೌರವವನ್ನು ಪಡೆಯುತ್ತದೆ. ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಮುಖ್ಯ, ಕ್ರೀಡಾಂಗಣದಲ್ಲಿ 'ರಾಮ್ ಸಿಯಾ ರಾಮ್' ಆಡುವುದನ್ನು ಕೇಳಲು ಸಂತೋಷವಾಗುತ್ತದೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News