CSK vs RCB: ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ಸಿ ಕೈಬಿಟ್ಟಿದ್ದೇಕೆ? ಅಸಲಿ ಕಾರಣ ಇದು!!

MS Dhoni has handed over CSK captaincy: ಐಪಿಎಲ್ 2024 ಆರಂಭಕ್ಕೂ ಒಂದು ದಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದು.. ಎಂಎಸ್ ಧೋನಿ ನಾಯಕತ್ವ ಯುಗಾಂತ್ಯವಾಯಿತು.. ಚೆನ್ನೈ ತಂಡದ ನೂತನ ನಾಯಕರಾಗಿ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ. 

Written by - Savita M B | Last Updated : Mar 22, 2024, 10:35 AM IST
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ 17 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
  • ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಐಪಿಎಲ್ 2024 ರ ಮೊದಲ ಪಂದ್ಯಕ್ಕೆ ವೇದಿಕೆಯಾಗಲಿದೆ.
  • ಮೊದಲ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ
CSK vs RCB: ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ಸಿ ಕೈಬಿಟ್ಟಿದ್ದೇಕೆ? ಅಸಲಿ ಕಾರಣ ಇದು!! title=

CSK captaincy: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ 17 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಐಪಿಎಲ್ 2024 ರ ಮೊದಲ ಪಂದ್ಯಕ್ಕೆ ವೇದಿಕೆಯಾಗಲಿದೆ. ಮೊದಲ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಬಾಲಿವುಡ್ ತಾರೆಯರ ಪ್ರದರ್ಶನದೊಂದಿಗೆ ಐಪಿಎಲ್ 2024 ರ ಅದ್ಧೂರಿ ಉದ್ಘಾಟನಾ ಸಮಾರಂಭದ ನಂತರ, ಚೆನ್ನೈ ಮತ್ತು ಆರ್‌ಸಿಬಿ ನಡುವಿನ ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.

ಐಪಿಎಲ್ 2024 ಪ್ರಾರಂಭವಾಗುವ ಒಂದು ದಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದೆ. ಹೌದು CSK ನಾಯಕತ್ವದಿಂದ ಧೋನಿ ಕೆಳಗಿಳಿದಿದ್ದಾರೆ.. ಚೆನ್ನೈ ತಂಡದ ನೂತನ ನಾಯಕರಾಗಿ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ. ಎಂಎಸ್ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದು ಚೆನ್ನೈ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಪ್ರೇಮಿಗಳನ್ನು ತೀವ್ರ ನಿರಾಸೆಗೊಳಿಸಿದೆ. ಆದರೆ ಧೋನಿ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ.. ಚೆನ್ನೈ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ದಿಗ್ಗಜ ಆಟಗಾರ ನಾಯಕತ್ವ ನಿರಾಕರಿಸಲು ಕಾರಣಗಳು ಏನಿರಬಹುದು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.. 

ಇದನ್ನೂ ಓದಿ-CSK New Captain ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಪತಿಯಂತೆ ಈಕೆಯೂ ಭಾರತೀಯ ಕ್ರಿಕೆಟರ್

ಕಳೆದ ಐಪಿಎಲ್ ಸೀಸನ್‌ನಲ್ಲಿ ಎಂಎಸ್ ಧೋನಿ ಹೆಚ್ಚು ದಣಿದಿದ್ದರು. ಸದ್ಯ ಇನ್ನೂ ಅವರು ಫಿಟ್ ಆಗಿದ್ದಾರೆ. ಆದರೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ಧೋನಿಯ ಮುಖ್ಯ ಗುರಿಯಾಗಿದೆ. ಹೀಗಾಗಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.. ಇದು ಧೋನಿಯ ಕೊನೆಯ ಐಪಿಎಲ್ ಎಂತಲೂ ಹೇಳಾಗುತ್ತಿದೆ.. ಆದರೆ ನಾಯಕತ್ವದಿಂದ ಕೆಳಗಿಳಿದಿದ್ದರೂ ಧೋನಿ ಎಷ್ಟು ಪಂದ್ಯಗಳನ್ನಾಡಲಿದ್ದಾರೆ ಎಂಬ ಪ್ರಶ್ನೆಯೂ ಸಹ ಎದ್ದಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಹೊಸ ಸೀಸನ್, ಹೊಸ ಜವಾಬ್ದಾರಿ ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.. ಪ್ಲೇಯಿಂಗ್ 11 ರಲ್ಲಿ ಧೋನಿ ಹೆಸರು ಬರುವವರೆಗೂ ಅಭಿಮಾನಿಗಳ ಟೆನ್ಷನ್ ಕಡಿಮೆಯಾಗಿರಲಿಲ್ಲ. ಆದರೆ ನಾಯಕತ್ವಕ್ಕೆ ಧೋನಿ ರಾಜೀನಾಮೆ ನೀಡಿರುವುದು ಕ್ರಿಕೆಟ್ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದ್ದಲ್ಲದೇ ಧೋನಿ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ.

ಇದನ್ನೂ ಓದಿ-IPL 2024: ಮುಂಬೈ ಇಂಡಿಯನ್ಸ್ ಸೇರಿದ 2nd PUC ಓದುತ್ತಿರುವ ಹುಡುಗ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News