Rohit Sharma On Wife Ritika Sajdeh: ಇತ್ತೀಚೆಗಷ್ಟೇ ರೋಹಿತ್ ಶರ್ಮಾ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರಗೊಂಡ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ಬಂಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಬೌಲರ್ ನಿಮ್ಮ ಬಳಿ ಬಂದು 'ಸ್ಟೇಡಿಯಂನಲ್ಲಿ ನನ್ನ ಗೆಳತಿ ಇದ್ದಾಳೆ, ಸಿಕ್ಸ್ ಹೊಡೆಯಬೇಡಿ' ಅಂತಾ ಮನವಿ ಮಾಡಿದ್ದಾರೆಯೇ? ಎಂದು ಕಪಿಲ್ ಪ್ರಶ್ನಿಸುತ್ತಾರೆ.
ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ಅಂತಹ ಮನವಿಗಳು ಸಾಕಷ್ಟು ಬಂದಿವೆ, ಆದರೆ ನಾನು ಅವರಿಗೆ ಸ್ಟೇಡಿಯಂನಲ್ಲಿ ನನ್ನ ಪತ್ನಿಯೂ ಇದ್ದಾಳೆ, ಆಕೆ ಪಂದ್ಯ ಮುಕ್ತಾಯದವರೆಗೆ ತನ್ನ ಫಿಂಗರ್ ಕ್ರಾಸ್ ಮಾಡಿ ಕುಳಿತಿರುತ್ತಾಳೆ ಮತ್ತು ಅದು ನನಗೆ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಎಂದು ಹೇಳಿ ಕಳುಹಿಸುತ್ತೇನೆ ಎಂದಿದ್ದಾರೆ, ರೋಹಿತ್ ಪತ್ನಿ ರೀತಿಕಾ ಸಜದೇಹ್ ಅವರ ಎಲ್ಲಾ ಪಂದ್ಯ ವೀಕ್ಷಣೆಗೆ ತೆರಳುತ್ತಾರೆ.
ಇದಾದ ಬಳಿಕ ಕಪಿಲ್ ಶರ್ಮಾ ಅವರು ರೋಹಿತ್ ಶರ್ಮಾ ಅವರ ನಿರ್ವಾಹಕರು ಆಗಿರುವ ರಿತಿಕಾ ಸಜ್ದೇ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರೋಹಿತ್‌ನನ್ನು ಓರ್ವ ಪತಿಯಾಗಿ ಮತ್ತು ಓರ್ವ ಕ್ರಿಕೆಟಿಗನಾಗಿ ನಿರ್ವಹಿಸುವುದು ಯಾವುದು ಕಷ್ಟದ ಕೆಲಸ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ರಿತಿಕಾ ಪತಿಯಾಗಿ ನಿರ್ವಹಿಸುವುದು ಕಷ್ಟ ಎಂದು ಉತ್ತರಿಸುತ್ತಾಳೆ. ನಾಯಕನಾಗಿ, ಅವರು ನಿರ್ವಹಿಸಲು ಇಡೀ ತಂಡವೆ ಇದೆ. ಅದಕ್ಕೆ ನಾನು ಏನನ್ನೂ ಮಾಡಬೇಕಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ-IPL 2024: ವಾಂಖೇಡೆ ಮೈದಾನದಲ್ಲಿ ಹಿಟ್ ಮ್ಯಾನ್ ಘರ್ಜನೆ, ವಾರ್ನರ್-ಕೊಹ್ಲಿಯ ಸ್ಪೆಷಲ್ ಕ್ಲಬ್ ಗೆ ಎಂಟ್ರಿ!
ರಿತಿಕಾ ಸಜ್ದೇ ಅವರ ಈ ಉತ್ತರವನ್ನು ಕೇಳಿದ ರೋಹಿತ್, ಪತ್ನಿಯೇ ಮನೆಯ ಕ್ಯಾಪ್ಟನ್ ಎಂದು ತಮಾಷೆಯಾಗಿ ಹೇಳುತ್ತಾರೆ. ಅವಳು ಮೈದಾನಕ್ಕೆ ಅಥವಾ ಡ್ರೆಸ್ಸಿಂಗ್ ಕೋಣೆಗೆ ಬರಲು ಸಾಧ್ಯವಿಲ್ಲ, ಆದರೆ ನಾನು ಮನೆಗೆ ಹೋಗಬೇಕು. ಅಲ್ಲಿ ಅವಳೇ ಕ್ಯಾಪ್ಟನ್ ಎನ್ನುತ್ತಾರೆ.
ಇದನ್ನೂ ಓದಿ-IPl 2024: ಪ್ರೇಕ್ಷಕರ ಮಧ್ಯೆಯೇ ಜರ್ಸಿ ಬದಲಾಯಿಸಿದ ಮಹಿಳೆ, ಕ್ಯಾಮೆರಾ ಕಣ್ಣೆದುರಲ್ಲೇ RR ತಂಡಕ್ಕೆ ಧೋಕಾ!
ಇದಲ್ಲದೆ, ರೋಹಿತ್ ಶರ್ಮಾ ವಿಶ್ವಕಪ್ 2023 ಫೈನಲ್‌ನಲ್ಲಿನ ಸೋಲಿನ ಬಗ್ಗೆಯೂ ಮಾತನಾಡಿದ್ದಾರೆ. ಟೂರ್ನಿಯುದ್ದಕ್ಕೂ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು, ಆದರೆ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾದ ದೊಡ್ಡ ಜೊತೆಯಾಟವು ನಮ್ಮಿಂದ ಟ್ರೋಫಿಯನ್ನು ಕಸಿದುಕೊಂಡಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ