Tilak Varma IPL 2022: ವಿರಾಟ್ ಕೊಹ್ಲಿಗೆ ಮಾರಕವಾಗಬಹುದು 19ರ ಹರೆಯದ ಈ ಆಟಗಾರ ..! ಶೀಘ್ರದಲ್ಲೇ ಸಿಗಲಿದೆ ಅವಕಾಶ

Tilak Varma IPL 2022 : ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ತಿಲಕ್ ವರ್ಮಾ ತಮ್ಮ ಆಟದಿಂದ ಎಲ್ಲರ ಮನ ಗೆದ್ದಿದ್ದಾರೆ. ಈ ಸೀಸನ್ ನಲ್ಲಿ ತಿಲಕ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಬಹಳಷ್ಟು ರನ್ ಗಳಿಸಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಈ ಆಟಗಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಬಹುದು. 

Written by - Ranjitha R K | Last Updated : May 31, 2022, 11:26 AM IST
  • IPL 2022 ಅನೇಕ ಯುವ ಆಟಗಾರರಿಗೆ ಬಹಳ ಸ್ಮರಣೀಯವಾಗಿತ್ತು.
  • ಈ ಸೀಸನ್ ನಿಂದಾಗಿ ಭಾರತ ತಂಡಕ್ಕೆ ಬಹಳಷ್ಟು ಹೊಸ ಆಟಗಾರರು ಸೇರ್ಪಡೆಯಾಗುವ ನಿರೀಕ್ಷೆಯಿದೆ.
  • ಶೀಘ್ರದಲ್ಲೇ ಈ ಆಟಗಾರನಿಗೆ ಅವಕಾಶ ನೀಡಲಿರುವ ರೋಹಿತ್
Tilak Varma IPL 2022: ವಿರಾಟ್ ಕೊಹ್ಲಿಗೆ  ಮಾರಕವಾಗಬಹುದು 19ರ ಹರೆಯದ ಈ ಆಟಗಾರ ..!   ಶೀಘ್ರದಲ್ಲೇ ಸಿಗಲಿದೆ ಅವಕಾಶ  title=
Tilak Varma IPL 2022 (file photo)

ಬೆಂಗಳೂರು : Tilak Varma IPL 2022: IPL 2022 ಅನೇಕ ಯುವ ಆಟಗಾರರಿಗೆ ಬಹಳ ಸ್ಮರಣೀಯವಾಗಿತ್ತು. ಈ ಸೀಸನ್ ನಿಂದಾಗಿ ಭಾರತ ತಂಡಕ್ಕೆ ಬಹಳಷ್ಟು ಹೊಸ ಆಟಗಾರರು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಐಪಿಎಲ್‌ನ ಈ ಋತುವಿನಲ್ಲಿ, ಇಲ್ಲಿವರೆಗಿನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್  ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ. ಆದರೆ, ತಂಡದ ಯುವ ಆಟಗಾರನೊಬ್ಬ ತನ್ನ ಸ್ಫೋಟಕ ಆಟದ ಮೂಲಕ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ  ಆಟಗಾರ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಭಾಗವಾದರೂ ಆಶ್ಚರ್ಯವಿಲ್ಲ. 

ಶೀಘ್ರದಲ್ಲೇ ಈ ಆಟಗಾರನಿಗೆ ಅವಕಾಶ ನೀಡಲಿರುವ ರೋಹಿತ್ : 
ಟೀಂ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಇದಕ್ಕೆ ಇನ್ನಷ್ಟು ಶಕ್ತಿ ತುಂಬಲು ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ 19 ವರ್ಷದ ತಿಲಕ್ ವರ್ಮಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಬಹುದು.  ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ತಿಲಕ್ ವರ್ಮಾ ತಮ್ಮ ಆಟದಿಂದ ಎಲ್ಲರ ಮನ ಗೆದ್ದಿದ್ದಾರೆ. ಈ ಸೀಸನ್ ನಲ್ಲಿ ತಿಲಕ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಬಹಳಷ್ಟು ರನ್ ಗಳಿಸಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಈ ಆಟಗಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಬಹುದು. ಟೀಮ್ ಇಂಡಿಯಾದಲ್ಲಿ, ಈ ಸ್ಥಾನ ವಿರಾಟ್ ಕೊಹ್ಲಿಗೆ ಸೇರಿದೆ.

ಇದನ್ನೂ ಓದಿ : 'ಹಾರ್ದಿಕ್ ಪಾಂಡ್ಯ ಭವಿಷ್ಯದ ಭಾರತ ಕ್ರಿಕೆಟ್ ತಂಡದ ನಾಯಕ'

ತಿಲಕ್ ವರ್ಮಾ ಐಪಿಎಲ್ 2022 ರ 14 ಪಂದ್ಯಗಳಲ್ಲಿ 36.09 ಸರಾಸರಿಯಲ್ಲಿ 397 ರನ್ ಗಳಿಸಿದ್ದಾರೆ. ಈ ಸೀಸನ್ ನಲ್ಲಿ ಅವರು 2 ಅರ್ಧ ಶತಕ ಬಾರಿಸಿದ್ದಾರೆ. IPL 2022ರಲ್ಲಿ  ಮುಂಬೈ ಇಂಡಿಯನ್ಸ್  ಸಂಪೂರ್ಣವಾಗಿ ವಿಫಲವಾಯಿತು. ಆದರೆ, ತಿಲಕ್ ವರ್ಮಾ ಮಾತ್ರ ಅದ್ಬುತ ಪ್ರದರ್ಶನ ನೀಡಿದ್ದಾರೆ. ತಿಲಕ್ ವರ್ಮಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಆಟಗಾರ ಅಮೋಘ ಆಟ ಪ್ರದರ್ಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆಟಗಾರನನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚು. 

ಮುಂಬೈ ಇಂಡಿಯನ್ಸ್  ನಾಯಕ ರೋಹಿತ್ ಶರ್ಮಾ ಕೂಡ IPL 2022ರ ಸಂದರ್ಭದಲ್ಲಿ ತಿಲಕ್ ವರ್ಮಾ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾಗಾಗಿ ಎಲ್ಲಾ ಮೂರು ಫಾರ್ಮ್ಯಾಟ್ ಗಳಲ್ಲಿ  ಆಡಬಹುದು ಎಂದು ಹೇಳಿದ್ದರು. ರೋಹಿತ್ ಶರ್ಮಾ ಅವರ ಈ ಹೇಳಿಕೆಯನ್ನು ಸುನಿಲ್ ಗವಾಸ್ಕರ್ ಕೂಡ ಬೆಂಬಲಿಸಿದ್ದಾರೆ. 

ಇದನ್ನೂ ಓದಿ : ಐಪಿಎಲ್ ಟ್ರೋಫಿ ನಂತರ ಈಗ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಹಾರ್ದಿಕ್ ಪಾಂಡ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News