Rohit Sharma : ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ರೋಹಿತ್ : ಈ ದಾಖಲೆಯ ಮೇಲೆ 'ಹಿಟ್‌ಮ್ಯಾನ್' ಕಣ್ಣು

ಮುಂಬೈ ಇಂಡಿಯನ್ಸ್ (MI) ನಾಯಕ ರೋಹಿತ್ ಶರ್ಮಾ ಇಂದಿನ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲಿ 25 ರನ್ ಗಳಿಸಿದರೆ, ನಂತರ ಅವರು ಕ್ರಿಕೆಟ್‌ನ ಕಡಿಮೆ ಸ್ವರೂಪದಲ್ಲಿ ದಾಖಲೆ ಬರೆಯಲಿದ್ದಾರೆ.

Written by - Channabasava A Kashinakunti | Last Updated : Apr 13, 2022, 03:37 PM IST
  • ಈ ದಾಖಲೆಯ ಮೇಲೆ 'ಹಿಟ್‌ಮ್ಯಾನ್' ಕಣ್ಣು
  • ಕೊಹ್ಲಿ ದಾಖಲೆ ಸರಿಗಟ್ಟುವ ಅವಕಾಶ ಇಂದು ರೋಹಿತ್ ಶರ್ಮಾಗೆ
  • ಐಪಿಎಲ್‌ನಲ್ಲಿ 500 ಫೋರ್ ಪೂರೈಸುವ ಅವಕಾಶ
Rohit Sharma : ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ರೋಹಿತ್ : ಈ ದಾಖಲೆಯ ಮೇಲೆ 'ಹಿಟ್‌ಮ್ಯಾನ್' ಕಣ್ಣು title=

ಮುಂಬೈ : ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ಪಂದ್ಯ ಇಂದು ನಡೆಯಲಿದ್ದು, ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನ ‘ದೈತ್ಯ ದಾಖಲೆ’ ಮೇಲೆ ಕಣ್ಣಿಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ (MI) ನಾಯಕ ರೋಹಿತ್ ಶರ್ಮಾ ಇಂದಿನ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲಿ 25 ರನ್ ಗಳಿಸಿದರೆ, ನಂತರ ಅವರು ಕ್ರಿಕೆಟ್‌ನ ಕಡಿಮೆ ಸ್ವರೂಪದಲ್ಲಿ ದಾಖಲೆ ಬರೆಯಲಿದ್ದಾರೆ.

ಈ ದಾಖಲೆಯ ಮೇಲೆ 'ಹಿಟ್‌ಮ್ಯಾನ್' ಕಣ್ಣು

ಮುಂಬೈ ಇಂಡಿಯನ್ಸ್ (MI) ನಾಯಕ ರೋಹಿತ್ ಶರ್ಮಾ ಇಂದಿನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 25 ರನ್ ಗಳಿಸಿದರೆ, ಅವರು T20 ಕ್ರಿಕೆಟ್‌ನಲ್ಲಿ 10000 ರನ್ ಪೂರ್ಣಗೊಳಿಸುತ್ತಾರೆ. ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 10000 ರನ್ ಪೂರೈಸಿದ ಭಾರತದ ಎರಡನೇ ಮತ್ತು ವಿಶ್ವದ ಏಳನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಇದನ್ನೂ ಓದಿ : CSK vs RCB : ಉತ್ತಪ್ಪ ಸಿಕ್ಸರ್‌ ಬಿರುಗಾಳಿಗೆ ಬೆಚ್ಚಿಬಿದ್ದ ಆರ್‌ಸಿಬಿ! ದಾಖಲೆ ಬರೆದ ಬ್ಯಾಟ್ಸ್‌ಮನ್

ಕೊಹ್ಲಿ ದಾಖಲೆ ಸರಿಗಟ್ಟುವ ಅವಕಾಶ ಇಂದು ರೋಹಿತ್ ಶರ್ಮಾಗೆ

ಇಲ್ಲಿಯವರೆಗೆ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಈ ಸಾಧನೆ ಮಾಡಲು ವಿರಾಟ್ ಕೊಹ್ಲಿಗೆ ಮಾತ್ರ ಸಾಧ್ಯವಾಗಿದೆ. ಟಿ20 ಕ್ರಿಕೆಟ್‌ನಲ್ಲಿ 10000 ರನ್ ಗಳಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಅವರ ಈ ದಾಖಲೆಯನ್ನು ಸರಿಗಟ್ಟುವ ಅವಕಾಶ ಇಂದು ರೋಹಿತ್ ಶರ್ಮಾಗೆ ಇದೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 14562
2. ಶೋಯೆಬ್ ಮಲಿಕ್ (ಪಾಕಿಸ್ತಾನ) - 11698
3. ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್) - 11474
4. ಆರನ್ ಫಿಂಚ್ (ಆಸ್ಟ್ರೇಲಿಯಾ) -10499
5. ವಿರಾಟ್ ಕೊಹ್ಲಿ (ಭಾರತ) -10379
6. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) -10373
7. ರೋಹಿತ್ ಶರ್ಮಾ (ಭಾರತ) - 9975

ಇಂದು ಶರ್ಮಾನಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ

ಪಂಜಾಬ್ ಕಿಂಗ್ಸ್ ವಿರುದ್ಧ ರೋಹಿತ್ ಶರ್ಮಾ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮಾ ಈ ಐಪಿಎಲ್ ಸೀಸನ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ ಇದುವರೆಗೆ ಕೇವಲ 80 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 41 ರನ್ ಆಗಿದೆ.

ಇದನ್ನೂ ಓದಿ : RCB Fan Poster: ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವವರೆಗೂ ಮದುವೆಯಾಗೋಲ್ಲ- ಮಹಿಳಾ ಅಭಿಮಾನಿಯ ಪೋಸ್ಟರ್ ವೈರಲ್

ಐಪಿಎಲ್‌ನಲ್ಲಿ 500 ಫೋರ್ ಪೂರೈಸುವ ಅವಕಾಶ

ರೋಹಿತ್ ಶರ್ಮಾ ಅವರು ಫೋರ್ ಹೊಡೆದ ತಕ್ಷಣ ಐಪಿಎಲ್‌ನಲ್ಲಿ 500 ಬೌಂಡರಿಗಳನ್ನು ಪೂರೈಸಲಿದ್ದಾರೆ. ಶಿಖರ್ ಧವನ್, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ನಂತರ ಈ ಸಾಧನೆ ಮಾಡಿದ ಐದನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News