124 ವರ್ಷಗಳ ಇತಿಹಾಸದ ಒಲಂಪಿಕ್ಸ್ ನಲ್ಲಿ ಇದುವರೆಗೆ ಸಾಧ್ಯವಾಗದ ದಾಖಲೆ ನಿರ್ಮಿಸಿದ ಭಾರತದ ಶೂಟರ್ ಗಳು..!

 ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕಗಳ ಭೇಟೆಗೆ ಅಡಿಪಾಯವನ್ನು ಹಾಕಿದರು. ಇದಾದ ನಂತರ ಅವರು  10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. 

Written by - Manjunath N | Last Updated : Aug 1, 2024, 06:01 PM IST
  • ವಿಶೇಷವೆಂದರೆ 1900 ರಲ್ಲಿ ಪ್ರಾರಂಭವಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಭಾರತದ ಇತಿಹಾಸದಲ್ಲಿ, ಒಂದೇ ಕ್ರೀಡೆಯು ಒಂದೇ ಆವೃತ್ತಿಯಲ್ಲಿ ದೇಶಕ್ಕೆ ಮೂರು ಪದಕಗಳನ್ನು ನೀಡಿದ್ದು ಇದೇ ಮೊದಲು.
  • ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಭಾರತವು ಒಂದೇ ಕ್ರೀಡೆಯಲ್ಲಿ ಎರಡು ಪದಕಗಳನ್ನು ಗೆದ್ದ ಸಂದರ್ಭಗಳಿವೆ, ಆದರೆ ಹಿಂದೆಂದೂ ಒಂದು ಕ್ರೀಡೆಯು ರಾಷ್ಟ್ರಕ್ಕೆ ಮೂರು ಪದಕಗಳನ್ನು ಗೆದ್ದಿರುವ ನಿದರ್ಶನಗಳಿಲ್ಲ.
  • ಈ ಹಿಂದೆ ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಗೆದ್ದಿದ್ದರು.
 124 ವರ್ಷಗಳ ಇತಿಹಾಸದ ಒಲಂಪಿಕ್ಸ್ ನಲ್ಲಿ ಇದುವರೆಗೆ ಸಾಧ್ಯವಾಗದ ದಾಖಲೆ ನಿರ್ಮಿಸಿದ ಭಾರತದ ಶೂಟರ್ ಗಳು..! title=

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕಗಳ ಭೇಟೆಗೆ ಅಡಿಪಾಯವನ್ನು ಹಾಕಿದರು. ಇದಾದ ನಂತರ ಅವರು  10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಪ್ಯಾರಿಸ್ ಕ್ರೀಡಾಕೂಟದ 6 ನೇ ದಿನದಂದು, ಸ್ವಪ್ನಿಲ್ ಸಿಂಗ್ ಅವರು ಪುರುಷರ 50 ಮೀ ರೈಫಲ್ 3-ಸ್ಥಾನಗಳ ಫೈನಲ್‌ನಲ್ಲಿ ಕಂಚಿನ ಪದಕವನ್ನು ಗಳಿಸಿದರು ಆ ಮೂಲಕ ಭಾರತ ಈಗ ಶೂಟಿಂಗ್ ನಲ್ಲಿಯೇ ಮೂರು ಕಂಚಿನ ಪದಗಳನ್ನು ಪಡೆದಿದೆ.

ಇದನ್ನೂ ಓದಿ: Top 5 Bikes In India: ಇವೇ ನೋಡಿ 2024ರ ಟಾಪ್ ಬೈಕುಗಳು

ವಿಶೇಷವೆಂದರೆ 1900 ರಲ್ಲಿ ಪ್ರಾರಂಭವಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಭಾರತದ ಇತಿಹಾಸದಲ್ಲಿ, ಒಂದೇ ಕ್ರೀಡೆಯು ಒಂದೇ ಆವೃತ್ತಿಯಲ್ಲಿ ದೇಶಕ್ಕೆ ಮೂರು ಪದಕಗಳನ್ನು ನೀಡಿದ್ದು ಇದೇ ಮೊದಲು. ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಭಾರತವು ಒಂದೇ ಕ್ರೀಡೆಯಲ್ಲಿ ಎರಡು ಪದಕಗಳನ್ನು ಗೆದ್ದ ಸಂದರ್ಭಗಳಿವೆ, ಆದರೆ ಹಿಂದೆಂದೂ ಒಂದು ಕ್ರೀಡೆಯು ರಾಷ್ಟ್ರಕ್ಕೆ ಮೂರು ಪದಕಗಳನ್ನು ಗೆದ್ದಿರುವ ನಿದರ್ಶನಗಳಿಲ್ಲ. ಈ ಹಿಂದೆ ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಗೆದ್ದಿದ್ದರು.

ಇದನ್ನೂ ಓದಿ: ಸೈಬರ್ ದಾಳಿಯಿಂದ ಬ್ಯಾಂಕ್‌ಗಳ UPI-IMPS ಸ್ಥಗಿತ!300 ಬ್ಯಾಂಕ್ ಗಳ ಪಟ್ಟಿಯಲ್ಲಿದೆಯೇ ನಿಮ್ಮ ಬ್ಯಾಂಕ್ ? ಇಲ್ಲಿ ಚೆಕ್ ಮಾಡಿ

ಇನ್ನೂ  2020 ರ ಟೋಕಿಯೊ ಗೇಮ್ಸ್‌ನಲ್ಲಿ, ಬಾಕ್ಸಿಂಗ್‌ನಲ್ಲಿ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಅವರ ಕಂಚು ಮತ್ತು 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ರವಿ ಕುಮಾರ್ ದಹಿಯಾ ಬೆಳ್ಳಿ ಪದಕವನ್ನು ಗೆದಿದ್ದರು.ಇದಕ್ಕೂ ಮೊದಲು, ನಾರ್ಮನ್ ಪ್ರಿಚರ್ಡ್ ಅವರು 1900 ರ ಅಥ್ಲೆಟಿಕ್ಸ್‌ನಲ್ಲಿ ಬ್ರಿಟೀಷ್ ಆಳ್ವಿಕೆಯಲ್ಲಿ ಭಾರತದ ಪರವಾಗಿ ಪುರುಷರ 200 ಮೀ ಮತ್ತು ಪುರುಷರ 200 ಮೀ ಹರ್ಡಲ್ಸ್ ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

 

Trending News