Indian Cricketers Married Twice: ಕ್ರಿಕೆಟ್ ಎಂಬುದು ಭಾರತದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕ್ರೀಡೆ. ಇನ್ನು ಇದೇ ಕಾರಣದಿಂದ ಕ್ರಿಕೆಟಿಗರ ಲೈಫ್ ಸ್ಟೈಲ್ ಮತ್ತು ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಇದೀಗ ಈ ವರದಿಯಲ್ಲಿ ಎರಡು ಬಾರಿ ವಿವಾಹವಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯ
ಈ ಪಟ್ಟಿಯಲ್ಲಿ ಮೊದಲ ಹೆಸರು ಭಾರತದ ಮಾಜಿ ಓಪನರ್ ಅರುಣ್ ಲಾಲ್ ಅವರದ್ದು. ಇವರು ತಮ್ಮ 66 ನೇ ವಯಸ್ಸಿನಲ್ಲಿ ಬುಲ್ಬುಲ್ ಸಹಾ ಎಂಬಾಕೆಯನ್ನು ವಿವಾಹವಾದರು. ಬುಲ್‌ಬುಲ್’ಗೆ 38 ವರ್ಷ. ಇದಕ್ಕೂ ಮುನ್ನ ಅರುಣ್ ರೀನಾ ಎಂಬವರನ್ನು ಮದುವೆಯಾಗಿದ್ದರು.
ಇತ್ತೀಚೆಗೆಯಷ್ಟೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದ ದಿನೇಶ್ ಕಾರ್ತಿಕ್ ಕೂಡ ಎರಡು ಬಾರಿ ಮದುವೆಯಾಗಿದ್ದಾರೆ. 2007 ರಲ್ಲಿ ನಿಕಿತಾ ವಂಜಾರಾ ಅವರೊಂದಿಗೆ ಮೊದಲ ವಿವಾಹವಾಗಿತ್ತು. ಮದುವೆಯಾದ 5 ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದು, ನಂತರ ಕಾರ್ತಿಕ್ 2015 ರಲ್ಲಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು.
ಮಾಜಿ ವೇಗಿ ಜಾವಗಲ್ ಶ್ರೀನಾಥ್ ಕೂಡ ಎರಡು ಮದುವೆಯಾಗಿದ್ದಾರೆ. ಅವರ ಮೊದಲ ಮದುವೆಯು 1999 ರಲ್ಲಿ ಜ್ಯೋತ್ಸ್ನಾ ಎಂಬಾಕೆ ಜೊತೆ ನಡೆದಿತ್ತು. ಆದರೆ ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು. ಇದಾದ ಬಳಿಕ 2008ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಎಂಬವರನ್ನು ಎರಡನೇ ಮದುವೆಯಾಗಿದ್ದರು.
ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ಎರಡು ಮದುವೆಯಾಗಿದ್ದಾರೆ. ಅಜರುದ್ದೀನ್ 1987 ರಲ್ಲಿ ನೌರೀನ್’ರನ್ನು ವಿವಾಹವಾದರು. ಇದಾದ ನಂತರ ಅಜರ್ 1996ರಲ್ಲಿ ನೌರೀನ್’ಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ನಟಿ ಸಂಗೀತಾ ಬಿಜಲಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ ಸಹ,2010 ರಲ್ಲಿ ಬೇರ್ಪಟ್ಟರು.
ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಕೂಡ ಎರಡು ಬಾರಿ ಮದುವೆಯಾಗಿದ್ದಾರೆ. ಕಾಂಬ್ಳಿಯವರ ಮೊದಲ ವಿವಾಹವು ನೋಯೆಲಾ ಲೂಯಿಸ್ ಜೊತೆ ನಡೆದಿತ್ತು. ಆದರೆ ಹೆಚ್ಚು ಕಾಲ ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ. ಇದಾದ ನಂತರ ಕಾಂಬ್ಳಿ ಆಂಡ್ರಿಯಾ ಹೆವಿಟ್ ಎಂಬಾಕೆಯನ್ನು ವರಿಸಿದರು.
ಇದನ್ನೂ ಓದಿ: ಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟು
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಎರಡು ಬಾರಿ ವಿವಾಹವಾಗಿದ್ದಾರೆ. ಅವರ ಮೊದಲ ಪತ್ನಿ ಶಬನಮ್ ಸಿಂಗ್, ಯುವರಾಜ್ ಅವರ ತಾಯಿ. ಇದರ ನಂತರ ಸತ್ವೀರ್ ಕೌರ್ ಎಂಬವರನ್ನು ವಿವಾಹವಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ