ಅಟೋ ಡ್ರೈವರ್ ಗಳಿಗೆ ಆಹಾರ ಧಾನ್ಯ ವಿತರಿಸಿದ ಕ್ರಿಕೆಟರ್ ಮಿಥಾಲಿ ರಾಜ್ ತಂದೆ

ಭಾರತದ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ನಾಯಕಿ ಮಿಥಾಲಿ ರಾಜ್ ತಮ್ಮ ಮಿಥಾಲಿ ರಾಜ್ ಇನಿಶಿಯೇಟಿವ್ ಅಡಿಯಲ್ಲಿ ಆಟೋ ಡ್ರೈವರ್‌ಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

Last Updated : May 26, 2021, 05:02 PM IST
  • 2019 ರ ಸೆಪ್ಟೆಂಬರ್‌ನಲ್ಲಿ ಟಿ 20 ಐಗಳಿಂದ ನಿವೃತ್ತಿ ಘೋಷಿಸಿದ ಮಿಥಾಲಿ, ಏಕದಿನ ಮತ್ತು ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಟಿ 20 ಐ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಅಟೋ ಡ್ರೈವರ್ ಗಳಿಗೆ ಆಹಾರ ಧಾನ್ಯ ವಿತರಿಸಿದ ಕ್ರಿಕೆಟರ್ ಮಿಥಾಲಿ ರಾಜ್ ತಂದೆ title=

ನವದೆಹಲಿ: ಭಾರತದ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ನಾಯಕಿ ಮಿಥಾಲಿ ರಾಜ್ ತಮ್ಮ ಮಿಥಾಲಿ ರಾಜ್ ಇನಿಶಿಯೇಟಿವ್ ಅಡಿಯಲ್ಲಿ ಆಟೋ ಡ್ರೈವರ್‌ಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕ್ವಾರಂಟೈನ್ ಗೆ ಒಳಗಾಗಿರುವ ಮಿಥಾಲಿ ರಾಜ್ (Mithali Raj) ಈಗ ತಮ್ಮ ತಂದೆಯವರು ತಮ್ಮ ಸಂಸ್ಥೆಯ ಅಡಿಯಲ್ಲಿ ಅಟೋ ಡ್ರೈವರ್ ಗಳಿಗೆ ಆಹಾರ ಧಾನ್ಯ ವಿತರಿಸುವುದನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: "ಕ್ರಿಕೆಟರ್ ಮಿಥಾಲಿ ರಾಜ್ ಯಶಸ್ಸಿನ ಕಥೆ ಮಹಿಳೆಯರಿಗೆ ಮಾತ್ರವಲ್ಲ ಪುರುಷ ಕ್ರಿಕೆಟಿಗರಿಗೂ ಸ್ಫೂರ್ತಿ"

ಈ ಕುರಿತಾಗಿ ಬರೆದುಕೊಂಡಿರುವ ಅವರು " ಕಳೆದ ವರ್ಷ ಕೊರೊನಾ ಕಾಲಾವಧಿಯಲ್ಲಿ ಮಿಥಾಲಿ ರಾಜ್ ಇನಿಶಿಯೇಟಿವ್ ನಡಿಯಲ್ಲಿ ಈ ಕೆಲಸವನ್ನು ಪ್ರಾರಂಭಿಸಿದೆ, ನನ್ನ ಅನುಪಸ್ಥಿತಿಯಲ್ಲಿ ಅಪ್ಪ ಈ ಗೌರವದ ಸೇವೆಯನ್ನು ಮಾಡುತ್ತಿದ್ದಾರೆ.ಈಗ ಸಮಸ್ಯೆ ಇರುವುದು ಅವರ ಮಾಸ್ಕ್ ನಲ್ಲಿ" ಎಂದು ಅವರು ತಮ್ಮ ತಂದೆ ಸರಿಯಾಗಿ ಮಾಸ್ಕ್ ಧರಿಸದಿರುವುದನ್ನು ಉಲ್ಲೇಖಿಸಿದ್ದಾರೆ.

ಮಿಥಾಲಿ ರಾಜ್ ಅವರು ಇತ್ತೀಚಿಗೆ, ರವಿಚಂದ್ರನ್ ಅಶ್ವಿನ್ ಮತ್ತು ಇತರರೊಂದಿಗೆ ಮೇ 19 ರಂದು ಮುಂಬೈ ತಲುಪಿದರು.ಮುಂಬೈನಲ್ಲಿ ತಮ್ಮ ಕ್ವಾರಂಟಿನ್ ಅವಧಿಯನ್ನು ಪೂರ್ಣಗೊಳಿಸಿದ ನಂತರ ಪುರುಷರ ತಂಡ ಮತ್ತು ಮಹಿಳಾ ತಂಡವು ಯುಕೆಗೆ ಪ್ರಯಾಣಿಸಲು ಸಜ್ಜಾಗಿದೆ.

ಇದನ್ನೂ ಓದಿ: IND W vs SA W: ಅಂತಾರಾಷ್ಟ್ರೀಯ ODI ಕರಿಯರ್ ನಲ್ಲಿ 7000 ರನ್ಸ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ Mithali Raj

2019 ರ ಸೆಪ್ಟೆಂಬರ್‌ನಲ್ಲಿ ಟಿ 20 ಐಗಳಿಂದ ನಿವೃತ್ತಿ ಘೋಷಿಸಿದ ಮಿಥಾಲಿ, ಏಕದಿನ ಮತ್ತು ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಟಿ 20 ಐ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ಹಿರಿಯ ಮಹಿಳಾ ತಂಡಕ್ಕೆ ಭಾರತೀಯ ಮಂಡಳಿ ವಾರ್ಷಿಕ ಒಪ್ಪಂದಗಳನ್ನು ಘೋಷಿಸಿದ್ದರಿಂದ ಮಿಥಾಲಿಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗ್ರೇಡ್ ಬಿ ಗುತ್ತಿಗೆ ನೀಡಿತು.ಗ್ರೇಡ್ ಬಿ ಯಲ್ಲಿರುವ ಎಲ್ಲ ಆಟಗಾರರು ಅಕ್ಟೋಬರ್ 2020 ಮತ್ತು ಸೆಪ್ಟೆಂಬರ್ 2021 ರ ನಡುವಿನ ಅವಧಿಗೆ ತಲಾ 30 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ.

ಇದನ್ನೂ ಓದಿ: IND W vs SA W: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ Mithali Raj

ಮಿಥಾಲಿ ರಾಜ್ ಅವರು 50 ಓವರ್‌ಗಳ ಸ್ವರೂಪದಲ್ಲಿ ಹೆಚ್ಚಿನ ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.ಅವರು ಏಳು ಶತಕಗಳು ಮತ್ತು 55 ಅರ್ಧಶತಕಗಳನ್ನು ಒಳಗೊಂಡಂತೆ 214 ಪಂದ್ಯಗಳಿಂದ 7,098 ರನ್ ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News