IND vs PAK: ಪಾಕಿಸ್ತಾನದ ವಿರುದ್ಧ ಚಹಾಲ್ ಬದಲಿಗೆ ಈ ಆಟಗಾರನಿಗೆ ಅವಕಾಶ ಸಾಧ್ಯತೆ

ಏಷ್ಯಾಕಪ್‌ನಲ್ಲಿ ಯುಜ್ವೇಂದ್ರ ಚಹಾಲ್ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧದ ಸೂಪರ್-4ರ ಪಂದ್ಯಕ್ಕೆ ಚಹಾಲ್ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

Written by - Puttaraj K Alur | Last Updated : Sep 3, 2022, 11:58 AM IST
  • ಏಷ್ಯಾಕಪ್ ಟೂರ್ನಿಯಲ್ಲಿ ಯುಜುವೇಂದ್ರ ಚಾಹಲ್ ಕಳಪೆ ಪ್ರದರ್ಶನ
  • ಪಾಕ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ
  • ಯುಜುವೇಂದ್ರ ಚಾಹಲ್ ಬದಲು ರವಿಚಂದ್ರನ್ ಅಶ್ವಿನ್‍ಗೆ ಅವಕಾಶ ಸಾಧ್ಯತೆ
IND vs PAK: ಪಾಕಿಸ್ತಾನದ ವಿರುದ್ಧ ಚಹಾಲ್ ಬದಲಿಗೆ ಈ ಆಟಗಾರನಿಗೆ ಅವಕಾಶ ಸಾಧ್ಯತೆ  title=
ರವಿಚಂದ್ರನ್ ಅಶ್ವಿನ್‍ಗೆ ಅವಕಾಶ ಸಾಧ್ಯತೆ

ನವದೆಹಲಿ: ಏಷ್ಯಾಕಪ್‌ ಸೂಪರ್-4ರ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 4ರಂದು ಉಭಯ ತಂಡಗಳ ನಡುವೆ ಗೆಲುವಿಗಾಗಿ ಸೆಣಸಾಟ ನಡೆಯಲಿದೆ. ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ್ದ ಟೀಂ ಇಂಡಿಯಾ ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಪಾಕ್ ಮೇಲೆ ಸವಾರಿ ಮಾಡಲು ಸಜ್ಜಾಗಿದೆ.

ಟೀಂ ಇಂಡಿಯಾದಲ್ಲಿ ಅನೇಕ ಮ್ಯಾಚ್ ವಿನ್ನರ್ ಆಟಗಾರರಿದ್ದಾರೆ. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ನಿಪುಣತೆ ಈ ಆಟಗಾರರಲ್ಲಿದೆ. ಅದೇ ರೀತಿ ಪಾಕಿಸ್ತಾನದ ವಿರುದ್ಧ ಗೆಲ್ಲಲು ನಾಯಕ ರೋಹಿತ್ ಶರ್ಮಾ ಆಡುವ XIನಲ್ಲಿ ಬದಲಾವಣೆ ಮಾಡಲು ಬಯಸುತ್ತಾರೆ.

ಇದನ್ನೂ ಓದಿ: Asia Cup 2022: ಪಾಕ್ ಪತ್ರಕರ್ತ ಕೇಳಿದ ಪ್ರಶ್ನೆಗೆ ಬಿದ್ದು ಬಿದ್ದು ನಕ್ಕ ಸೂರ್ಯಕುಮಾರ್ ಯಾದವ್! ಅಂತಹದ್ದೇನಂದ್ರು?

ಯುಜ್ವೇಂದ್ರ ಚಹಾಲ್ ಕಳಪೆ ಪ್ರದರ್ಶನ

ಏಷ್ಯಾಕಪ್‌ನಲ್ಲಿಯುಜುವೇಂದ್ರ ಚಹಾಲ್‌ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅವರ ಬೌಲಿಂಗ್‍ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಬಾರಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಚಹಾಲ್ ತುಂಬಾ ದುಬಾರಿ ಎನಿಸಿಕೊಂಡಿದ್ದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ 32 ರನ್ ಬಿಟ್ಟುಕೊಟ್ಟಿದ್ದ ಚಹಾಲ್‍ಗೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ದುಬೈನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಸಹಾಯಕವಾಗಿವೆ. ಈ ಪಿಚ್‌ಗಳಲ್ಲೂ ಚಹಲ್‌ಗೆ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಹಾಂಗ್ ಕಾಂಗ್ ವಿರುದ್ಧವೂ ಚಹಾಲ್ ಹೇಳಿಕೊಳ್ಳುವಂತಹ ಬೌಲಿಂಗ್ ಮಾಡಲಿಲ್ಲ. 4 ಓವರ್ ಗಳಲ್ಲಿ 18 ರನ್ ನೀಡಿದ ಅವರು ಸಿಂಗಲ್ ವಿಕೆಟ್ ಗಳಿಸಲು ವಿಫಲರಾದರು.

ಈ ಆಟಗಾರ ಅವಕಾಶ ಸಾಧ್ಯತೆ

ಯುಜುವೇಂದ್ರ ಚಾಹಲ್ ಟೀಂ ಇಂಡಿಯಾಕ್ಕೆ ಹೊರೆಯಾಗಿದ್ದಾರೆ. ತಂಡದ ಗೆಲುವಿನಲ್ಲಿ ಅವರಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯುಜುವೇಂದ್ರ ಚಹಲ್ ಬದಲಿಗೆ ರವಿಚಂದ್ರನ್ ಅಶ್ವಿನ್‍ಗೆ ಪಾಕ್‍ ವಿರುದ್ಧದ ಪಂದ್ಯಕ್ಕೆ ಅವಕಾಶ ನೀಡುವ ಸಾಧ‍್ಯತೆ ಇದೆ. ಅಶ್ವಿನ್ ಸ್ಪಿನ್‌ನಲ್ಲಿ ಅದ್ಭುತ ‍ಪ್ರದರ್ಶನ ನೀಡುತ್ತಾರೆ. T20 ಕ್ರಿಕೆಟ್‌ನಲ್ಲಿ ಅವರ 4 ಓವರ್‌ಗಳು ಗೆಲುವು ಮತ್ತು ಸೋಲಿನ ವ್ಯತ್ಯಾಸವನ್ನು ನಿರ್ಧರಿಸುತ್ತವೆ. ಚಹಾಲ್‍ಗೆ ಹೋಲಿಸಿಕೊಂಡರೆ ಅಶ್ವಿನ್ ಹೆಚ್ಚು ರನ್ ಬಿಟ್ಟುಕೊಡುವುದಿಲ್ಲ.

ಇದನ್ನೂ ಓದಿ: Team India : ಟೀಂ ಇಂಡಿಯಾಗೆ ಬಿಗ್ ಶಾಕ್ : ಗಾಯದ ಕಾರಣ ಸರಣಿಯಿಂದ ಈ ಬೌಲರ್ ಔಟ್!

 ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶನ

ರವಿಚಂದ್ರನ್ ಅಶ್ವಿನ್ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ಎದುರಾಳಿಗಳಿಗೆ ಗೊಂದಲವನ್ನುಂಟು ಮಾಡುವ ಅಶ್ವಿನ್ ಬೌಲಿಂಗ್ ಶೈಲಿ ಅತ್ಯುತ್ತಮವಾಗಿದೆ. ಅವರ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ ಹಲವು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತ ಪರ 54 ಟಿ-20 ಪಂದ್ಯಗಳಲ್ಲಿ ಅಶ್ವಿನ್ 64 ವಿಕೆಟ್ ಪಡೆದಿದ್ದಾರೆ. ಅದೇ ರೀತಿ ಅವರು ಟೆಸ್ಟ್ ಪಂದ್ಯಗಳಲ್ಲಿ 2ನೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಅವರಿಗೆ ಪಾಕ್ ವಿರುದ್ಧ ಅವಕಾಶ ನೀಡಿದರೆ ಭಾರತದ ಗೆಲುವಿಗೆ ನೆರವಾಗಬಹುದು.

ಭಾರತದ ಮೇಲುಗೈ

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 15 ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ 9 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 4 ಪಂದ್ಯ ಗೆದ್ದಿದೆ. ಭಾರತ ಗರಿಷ್ಠ ಅಂದರೆ 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದೆ. ಅದೇ ರೀತಿ ಪಾಕಿಸ್ತಾನ ತಂಡ 2 ಬಾರಿ ಮಾತ್ರ ಏಷ್ಯಾಕಪ್ ಗೆದ್ದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News