Ind Vs Eng ODI Series: ಮೊದಲ ಏಕದಿನ ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ ಹೀಗಿರುವ ಸಾಧ್ಯತೆ

Ind Vs Eng ODI Series - ಟೆಸ್ಟ್ ಸರಣಿಯನ್ನು 3-1 ಹಾಗೂ ಟಿ-20 ಸರಣಿಯನ್ನು 3-2 ಅಂತರದಿಂದ ಗೆದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲು ಮೈದಾನಕ್ಕೆ ಇಳಿಯಲಿದೆ.

Written by - Nitin Tabib | Last Updated : Mar 22, 2021, 03:56 PM IST
  • ಭಾರತ ವಿರುದ್ಧ ಇಂಗ್ಲೆಂಡ್ ಪುಣೆ ಏಕದಿನ ಸರಣಿ.
  • ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ ಈ ರೀತಿ ಇರುವ ಸಾಧ್ಯತೆ.
  • ಎಲ್ಲರ ಕಣ್ಣು ಶಿಖರ್ ಧವನ್ ಮೇಲೆ
Ind Vs Eng ODI Series: ಮೊದಲ ಏಕದಿನ ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ ಹೀಗಿರುವ ಸಾಧ್ಯತೆ title=
Ind Vs Eng ODI Series (File Photo)

ನವದೆಹಲಿ: Ind Vs Eng ODI Series - ಟೆಸ್ಟ್ ಸರಣಿಯನ್ನು 3-1 ಹಾಗೂ ಟಿ-20 ಸರಣಿಯನ್ನು 3-2 ಅಂತರದಿಂದ ಗೆದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲು ಮೈದಾನಕ್ಕೆ ಇಳಿಯಲಿದೆ. ಉಭಯ ದೇಶಗಳ ನಡುವೆ ಮಂಗಳವಾರ ಈ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣು ಆರಂಭಿಕ ಆಟಗಾರ ಶಿಖರ್ ಧವನ್ ಅವರ ಮೆಲಿರಲಿದೆ. ಏಕೆಂದರೆ ಅವರಿಗೆ ಟಿ-20 ಪಂದ್ಯದಲ್ಲಿ ಕೇವಲ ಒಂದು ಮ್ಯಾಚ್ ಮಾತ್ರ ಆಡುವ ಅವಕಾಶ ಸಿಕ್ಕಿತ್ತು. ಇನ್ನೊಂದೆಡೆ ಧವನ್ ಪಾಲಿಗೂ ಕೂಡ ಈ ಸರಣಿ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಭಾರತದ ಬಳಿ ಟಾಪ್ ಆರ್ಡರ್ ನಲ್ಲಿ ಸದ್ಯ ಹಲವು ಆಯ್ಕೆಗಳಿವೆ. ಶುಭಮಾನ್ ಗಿಲ್ ಈಗಾಗಲೇ ತಂಡದಲ್ಲಿದ್ದು, ಪೃಥ್ವಿ ಷಾ ಹಾಗೂ ದೇವದತ್ತ ಪಡಿಕಲ್ ಕೂಡ ತಮ್ಮ ಹಕ್ಕು ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ಧವನ್ ಪಾಲಿಗೆ ಈ ಪಂದ್ಯ ಅಗ್ನಿಪರೀಕ್ಷೆಯಾಗಿರಲಿದೆ.

ರೋಹಿತ್ ಶರ್ಮಾ ಅವರೊಂದಿಗೆ ಶಿಖರ್ ಧವನ್ ಈ ಪಂದ್ಯವನ್ನು ಆರಂಭಿಸುವ ಎಲ್ಲಾ ಸಾಧ್ಯತೆಗಳಿವೆ. ಟಿ-20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಏಕದಿನ ಸರಣಿಯಲ್ಲಿಯೂ ಕೂಡ ತಮ್ಮ ಫಾರ್ಮ್ ಮುಂದುವರೆಸಲು ಪ್ರಯತ್ನಿಸಲಿದ್ದಾರೆ. ಏಕದಿನ ಪಂದ್ಯದಲ್ಲಿ ಸೆಟ್ ಆಗಲು ಗಬ್ಬರ್ ಗೆ ಸಾಕಷ್ಟು ಸಮಯಾವಕಾಶ ಸಿಗುವ ಕಾರಣ, ಈ ಪಂದ್ಯದ ಮೂಲಕ ಅವರು ತಮ್ಮ ಕಳೆದುಕೊಂಡ ಫಾರ್ಮ್ ಅನ್ನು ಪುನಃ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಕುರಿತು ಹೇಳುವುದಾದರೆ, ತಂಡ ಈ ವರ್ಷಾಂತ್ಯಕ್ಕೆ ನಡೆಯಲಿರುವ ಟಿ20 ವಿಶ್ವಕಪ್ ಗಾಗಿ ತನ್ನ ಸಿದ್ಧತೆಗಳನ್ನು ಮುಂದುವರೆಸಲಿದೆ. ಏಕೆಂದರೆ ಈ ವರ್ಷ 50 ಓವರ್ ಗಳ ಫಾರ್ಮಾಟ್ ನ ಯಾವುದೇ ದೊಡ್ಡ ಟೂರ್ನಿ ನಡೆಯಬೇಕಿಲ್ಲ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಹೇಳುವುದಾದರೆ, ಕೊಹ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಹಾಗೂ ಏಕದಿನ ಸರಣಿಯಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಏಕೆಂದರೆ ಏಕದಿನ ವೃತ್ತಿ ಜೀವನದಲ್ಲಿ 2019ರ ಆಗಸ್ಟ್ ನಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ತಮ್ಮ 43ನೇ ಶತಕ ಬಾರಿಸಿದ್ದರು. ಕೊಹ್ಲಿ ತಮ್ಮ ಬ್ಯಾಟ್ ನಿಂದ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಕೆ.ಎಲ್ ರಾಹುಲ್ ಹಾಗೂ ರಿಶಬ್ ಪಂತ್ ಕೂಡ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಆದರೆ, ರಾಹುಲ್ ಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಕಳೆದ ವರ್ಷ ಕೂಡ ಅವರು ಮಧ್ಯಮ ಕ್ರಮಾಂಕದಲ್ಲಿಯೇ ಆಟವಾಡಿದ್ದಾರೆ. ಪಂತ್ ಗೆ ವಿಕೆಟ್ ಕೀಪರ್ ಜವಾಬ್ದಾರಿಯ ಜೊತೆಗೆ ಹಾರ್ದಿಕ್ ಪಾಂಡ್ಯಾ ಅವರೊಂದಿಗೆ ಕೆಳಗಿನ ಕ್ರಮಾಂಕದಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಿದೆ.

ಇವೆಲ್ಲವುಗಳ ನಡುವೆಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲು ಮುಂಬೈನ ಶೆಯಸ್ ಐಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಮಧ್ಯೆ ತೀವ್ರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಈ ಹಿಂದಿನ ಸರಣಿಯಲ್ಲಿ ಸೂರ್ಯ ಕುಮಾರ್ ಯಾದವ್ ಅವರು ತಮ್ಮ ಕಡಕ್ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಕೂಡ ಕಳೆದ ಕೆಲ ಸಮಯದಿಂದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆತ ಪ್ರದರ್ಶಿಸಿದ್ದಾರೆ. ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೇಗಿ ಭುವನೇಶ್ವರ್ ಕುಮಾರ್, ಬೌಲಿಂಗ್ ವಿಭಾಗದ ಸಾರಥ್ಯ ವಹಿಸುವ ಸಾಧ್ಯತೆ ಇದೆ. ಅವರ ಜೊತೆಗೆ ಶಾರ್ದೂಲ್ ಠಾಕೂರ್ ಗೆ ಹೊಸ ಬೌಲ್ ನ ಜವಾಬ್ದಾರಿ ನೀಡುವ ಸಾದ್ಯತೆ ಇದೆ. ಟಿ-20 ಸರಣಿಯಲ್ಲಿ ಶಾರ್ದೂಲ್ ಒಟ್ಟು 8 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ-Ind Vs Eng: ODI ಸರಣಿಗೂ ಮುನ್ನ England ತಂಡಕ್ಕೆ ಭಾರಿ ಹಿನ್ನಡೆ!

ಮೊಹಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣಾ ಕೂಡ ತಂಡದಲ್ಲಿದ್ದಾರೆ. ಈಗಾಗಲೇ ನಾಯಕ Virat Kohli ಕೃಷ್ಣಾ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಆಡಿದ ಒಟ್ಟು 7 ಪಂದ್ಯಗಳಲ್ಲಿ ಒಟ್ಟು 14 ವಿಕೆಟ್ ಕಬಳಿಸಿದ್ದಾರೆ. ಸ್ಪಿನ್ ವಿಭಾಗದಲ್ಲಿ ಯುಜವೆಂದ್ರ ಚಾಹಲ್ ಹಾಗೂ ವಾಶಿಂಗ್ಟನ್ ಸುಂದರ್ ಗೆ, ಕುನಾಲ್ ಪಾಂಡ್ಯಾ ಹಾಗೂ ಕುಲದೀಪ್ ಯಾದವ್ ಅವರಿಗಿಂತ ಹೆಚ್ಚು ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇದೆ. ಸದ್ಯ ಹಾರ್ದಿಕ್ ಪಾಂಡ್ಯಾ ಫಿಟ್ ಆಗಿದ್ದು ಅವರಿಗೆ ತಂಡದ ಐದನೇ ಬೌಲರ್ ಪಾತ್ರ ನೀಡುವ ಸಾಧ್ಯತೆ ಇದೆ. ಆದರೆ, ಅವರಿಗೆ ಎಷ್ಟು ಓವರ್ ಬೌಲಿಂಗ್ ಅವಕಾಶ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ. 

ಇದನ್ನೂ ಓದಿ-India vs England, 5th T20I: ಭಾರತದ ತಂಡಕ್ಕೆ 3-2 ರಿಂದ ಸರಣಿ ಗೆಲುವು

ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕಾಗಿ ಭಾರತದ ಸಂಭಾವ್ಯ ಪ್ಲೆಯಿಂಗ್ 11 ಈ ರೀತಿಯಾಗಿರುವ ಸಾಧ್ಯತೆ ಇದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಶ್ರೇಯಸ್ ಐಯ್ಯರ್ /ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಂದ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಲ್ ರಾಹುಲ್, ವಾಶಿಂಗ್ಟನ್ ಸುಂದರ್, ಯುಜವೆಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್.

ಇದನ್ನೂ ಓದಿ-Ind vs Eng: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಭಾರತದ ತಂಡ ಘೋಷಣೆ, ಯಾರಿಗೆ ಅವಕಾಶ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News