Bajaj Freedom 125 CNG Bike Launched In India : ಬಜಾಜ್ ಆಟೋ ವಿಶ್ವದ ಮೊದಲ ಸಿಎನ್ಜಿ ಚಾಲಿತ ಮೋಟಾರ್ಸೈಕಲ್, ಫ್ರೀಡಂ 125 ಅನ್ನು ಬಿಡುಗಡೆ ಮಾಡಿದೆ.ಈ 125 ಸಿಸಿ ಕಮ್ಯೂಟರ್ ಬೈಕ್ ಸಿಎನ್ಜಿ ಕಾರಿನಂತೆ ಪೆಟ್ರೋಲ್ ಮತ್ತು ಸಿಎನ್ಜಿ ಎರಡರಲ್ಲೂ ಚಲಿಸಬಹುದು.ಬಜಾಜ್ ಫ್ರೀಡಂ 125 ಬೆಲೆ 95,000 ರೂಪಾಯಿಯಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇಂದಿನಿಂದಲೇ ನೀವು ಈ ಬೈಕ್ ಅನ್ನು ಬುಕ್ ಮಾಡಬಹುದು.ಈ ಬೈಕ್ ಮೊದಲು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.ನಂತರ ಇದನ್ನು ಈಜಿಪ್ಟ್, ತಾಂಜಾನಿಯಾ, ಪೆರು,ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶದಂತಹ ದೇಶಗಳಿಗೂ ರಫ್ತು ಮಾಡಲಾಗುವುದು.
ಬಜಾಜ್ ಫ್ರೀಡಮ್ 125 ಡ್ಯುಯಲ್ ಇಂಧನ ಟ್ಯಾಂಕ್ಗಳು :
ಬಜಾಜ್ ಫ್ರೀಡಂ 125 ಅನ್ನು ತಮ್ಮ ಬೈಕ್ನ ವೆಚ್ಚವನ್ನು ಕಡಿಮೆ ಮಾಡಲು ಬಯಸುವ ಜನರಿಗಾಗಿ ಮಾಡಲಾಗಿದೆ.ಇದರಲ್ಲಿ ಸಣ್ಣ ಪೆಟ್ರೋಲ್ ಟ್ಯಾಂಕ್ ಕೂಡಾ ನೀಡಲಾಗಿದ್ದು, ಅಗತ್ಯವಿದ್ದಾಗ ಪೆಟ್ರೋಲ್ ಬಳಸಬಹುದು.ಬಲ ಹ್ಯಾಂಡಲ್ಬಾರ್ನಲ್ಲಿ ಸ್ವಿಚ್ ಇದ್ದು, ಅದನ್ನು ಒತ್ತುವ ಮೂಲಕ ಪೆಟ್ರೋಲ್ ಮತ್ತು ಸಿಎನ್ಜಿ ನಡುವೆ ಬದಲಾಯಿಸಬಹುದು.ಸಿಎನ್ಜಿ ಟ್ಯಾಂಕ್ ಅನ್ನು ಪೆಟ್ರೋಲ್ ಟ್ಯಾಂಕ್ನ ಕೆಳಗೆ ಇರಿಸಲಾಗಿದೆ.ಈ ಬೈಕ್ ನ ಸಿಎನ್ಜಿ ತುಂಬುವ ನಳಿಕೆಯು ಪೆಟ್ರೋಲ್ನ ನಳಿಕೆಗಿಂತ ಭಿನ್ನವಾಗಿದೆ. ಏಕೆಂದರೆ ಸಿಎನ್ಜಿಯನ್ನು ಹೆಚ್ಚಿನ ಒತ್ತಡದಲ್ಲಿ ಇರಿಸಬೇಕಾಗುತ್ತದೆ.ಪೆಟ್ರೋಲ್ ಟ್ಯಾಂಕ್ನ ಸಾಮರ್ಥ್ಯ 2 ಲೀಟರ್ ಆಗಿದ್ದು, ಸಿಎನ್ಜಿ ಟ್ಯಾಂಕ್ನಿಂದ 2 ಕೆಜಿ ಗ್ಯಾಸ್ ತುಂಬಿಸಬಹುದು.
ಇದನ್ನೂ ಓದಿ : Shocking!ಅತಿಯಾದ ಕೆಲಸದ ಒತ್ತಡದಿಂದ ಬೇಸರ !ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ರೋಬೋಟ್ !
ಬಜಾಜ್ ಫ್ರೀಡಂ 125 ಇಂಧನ ದಕ್ಷತೆ :
ಫ್ರೀಡಂ 125 ಒಮ್ಮೆ ಸಿಎನ್ಜಿ ತುಂಬಿದರೆ 213 ಕಿಲೋಮೀಟರ್ಗಳವರೆಗೆ ಮತ್ತು ಪೆಟ್ರೋಲ್ ಟ್ಯಾಂಕ್ನಲ್ಲಿ ಹೆಚ್ಚುವರಿಯಾಗಿ 117 ಕಿಲೋಮೀಟರ್ಗಳು ಅಂದರೆ ಒಟ್ಟು 330 ಕಿಲೋಮೀಟರ್ಗಳವರೆಗೆ ಓಡಿಸಬಹುದು ಎಂದು ಬಜಾಜ್ ಹೇಳಿಕೊಂಡಿದೆ. ಸಿಎನ್ಜಿಯಲ್ಲಿ ಚಲಿಸುವಾಗ ಅದರ ಮೈಲೇಜ್ ಪ್ರತಿ ಕಿಲೋಗ್ರಾಂಗೆ 102 ಕಿಲೋಮೀಟರ್, ಮತ್ತು ಪೆಟ್ರೋಲ್ನಲ್ಲಿ ಓಡುವಾಗ ಅದು ಲೀಟರ್ಗೆ 64 ಕಿಲೋಮೀಟರ್ ಆಗಿರುತ್ತದೆ.
ಬಜಾಜ್ ಫ್ರೀಡಮ್ 125 ವಿಶೇಷಣಗಳು :
ಬಜಾಜ್ ಫ್ರೀಡಂ 125 ಒಂದೇ 125 ಸಿಸಿ ಎಂಜಿನ್ ಅನ್ನು ಹೊಂದಿದೆ. ಇದು ಏರ್ ಕೂಲ್ಡ್ ಆಗಿದೆ.ಈ ಎಂಜಿನ್ 9.4 bhp ಪವರ್ ಮತ್ತು 9.7 Nm ಟಾರ್ಕ್ ನೀಡುತ್ತದೆ.ಈ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಹೊಂದಿದೆ. ಬ್ರೇಕಿಂಗ್ಗಾಗಿ,ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ.ಈ ಬೈಕ್ 17 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ.
ಇದನ್ನೂ ಓದಿ :Online Fraud ಆದರೆ ಸಿಗುವುದು 10 ಸಾವಿರ ರೂಪಾಯಿ ! ಏನು ಹೇಳುತ್ತದೆ ಈ ಯೋಜನೆ ?
ಬಜಾಜ್ ಫ್ರೀಡಂ 125 ರ ನೋಟವು ರೆಟ್ರೊ ಮತ್ತು ಆಧುನಿಕ ಮಿಶ್ರಣವಾಗಿದೆ.ಇದು ರೌಂಡ್ ಹೆಡ್ಲ್ಯಾಂಪ್ಗಳನ್ನು ಹೊಂದಿದ್ದು, ಡೇ ಟೈಮ್ ರನ್ನಿಂಗ್ ದೀಪಗಳು (DRL) ಲಭ್ಯವಿದೆ. ಆಸನವು ಸಮತಟ್ಟಾಗಿದ್ದು, ಹ್ಯಾಂಡಲ್ಬಾರ್ ಅಗಲವಾಗಿದೆ. ಫ್ರೀಡಂ 125 ಯಾವುದೇ ನೇರ ಸ್ಪರ್ಧೆಯನ್ನು ಹೊಂದಿಲ್ಲವಾದರೂ, ಇದು ಮಾರುಕಟ್ಟೆಯಲ್ಲಿ ಇತರ 125 ಸಿಸಿ ಬೈಕ್ಗಳೊಂದಿಗೆ ಸ್ಪರ್ಧಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.