Indian Cricket Team: ಭಾರತ ತಂಡ ಪ್ರಸ್ತುತ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದು, ರುತುರಾಜ್ ಗಾಯಕ್ವಾಡ್ ಉಪನಾಯಕರಾಗಿದ್ದಾರೆ. ಈ ನಡುವೆ ಬಿಸಿಸಿಐ ಮಾಜಿ ಆಯ್ಕೆಗಾರ ಕಿರಣ್ ಮೋರೆ ಹೇಳಿಕೆಯೊಂದನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಬಲ್ಲ ಟೀಂ ಇಂಡಿಯಾದ ಯುವ ಆಟಗಾರನನ್ನು ಹೆಸರಿಸಿದ್ದಾರೆ.
ಇದನ್ನೂ ಓದಿ: ಐರ್ಲೆಂಡ್ ವಿರುದ್ಧ Team India ಗೆಲ್ಲಲು ಕಾರಣ ಧೋನಿಯ ಅಪ್ಪಟ ಶಿಷ್ಯ ಈ ಆರಂಭಿಕ ಆಟಗಾರ!
ರುತುರಾಜ್ ಗಾಯಕ್ವಾಡ್ ಭಾರತದ ಮುಂದಿನ ನಾಯಕನಾಗಬಹುದು ಎಂದು ಬಿಸಿಸಿಐನ ಮಾಜಿ ಆಯ್ಕೆಗಾರ ಕಿರಣ್ ಮೋರೆ ಹೇಳಿದ್ದಾರೆ. ಜಿಯೋ ಸಿನಿಮಾ ಜೊತೆ ಮಾತನಾಡಿದ ಕಿರಣ್ ಮೋರೆ, “ನಾನು ಗಾಯಕ್ವಾಡ್ ಅವರ ಟೆಸ್ಟ್ ಪದಾರ್ಪಣೆಗಾಗಿ ಕಾಯುತ್ತಿದ್ದೇನೆ. ರುತುರಾಜ್ ಎಲ್ಲಾ ಸ್ವರೂಪಗಳನ್ನು ಆಡಬಲ್ಲರು, ಅವರ ಮೂಲಭೂತ ಅಂಶಗಳು ತುಂಬಾ ಚೆನ್ನಾಗಿವೆ. ಅವರು ಭಾರತದ ಭವಿಷ್ಯದ ನಾಯಕನೂ ಆಗಬಹುದು. ಅವರು ಅದ್ಭುತ ಮನೋಧರ್ಮವನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಎಂಎಸ್ ಧೋನಿ ಅಡಿಯಲ್ಲಿ ಆಡಿದವರು. ಆದ್ದರಿಂದ ಅವರು ತಂಡ ಮತ್ತು ಸನ್ನಿವೇಶಗಳನ್ನು ನಿಭಾಯಿಸುವ ಕುರಿತು ಕಲಿತಿದ್ದಾರೆ. ಅವರೊಬ್ಬ ಗುಣಮಟ್ಟದ ಆಟಗಾರ” ಎಂದಿದ್ದಾರೆ.
ಏಷ್ಯನ್ ಗೇಮ್ಸ್’ನಲ್ಲಿ ನಾಯಕತ್ವದ ಜವಾಬ್ದಾರಿ:
ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ ಆಡಲಿದೆ. ಏಷ್ಯನ್ ಗೇಮ್ಸ್ 2023 ರಲ್ಲಿ ಮಹಿಳಾ ತಂಡದೊಂದಿಗೆ ಪುರುಷರ ತಂಡಗಳು ಕೂಡ ಕ್ರಿಕೆಟ್ ಪಂದ್ಯಗಳನ್ನು ಆಡಲಿವೆ. ಇನ್ನು ಈ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಹಸ್ತಾಂತರಿಸಲಾಗಿದೆ. ಗಾಯಕ್ವಾಡ್ ನೇತೃತ್ವದ ಪುರುಷರ ತಂಡವು ಜೂನ್ 1 ರವರೆಗೆ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಕ್ವಾರ್ಟರ್ ಫೈನಲ್’ಗೆ ನೇರ ಪ್ರವೇಶ ಪಡೆದಿದೆ.
ಇದನ್ನೂ ಓದಿ: ಶ್ರಾವಣ ಸೋಮವಾರವೇ ಬಂದ ನಾಗರ ಪಂಚಮಿ: ಇಂದು ಈ ರಾಶಿಗೆ ಸಕಲ ಸಂಪತ್ತು ಕರುಣಿಸುವರು ಶಿವ-ನಾಗರ
ಟೀಂ ಇಂಡಿಯಾ ಪರ ಆಡಿದ ಪಂದ್ಯಗಳ ವಿವರ:
ರುತುರಾಜ್ ಗಾಯಕ್ವಾಡ್ ಇದುವರೆಗೆ ಭಾರತದ ಪರ 2 ODI ಮತ್ತು 10 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ODIಗಳಲ್ಲಿ 27 ರನ್ ಮತ್ತು T20 ನಲ್ಲಿ 19.25 ರ ಸರಾಸರಿಯಲ್ಲಿ 154 ರನ್ ಗಳಿಸಿದ್ದಾರೆ, ಇದರಲ್ಲಿ 1 ಅರ್ಧ ಶತಕವೂ ಸೇರಿದೆ. ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್’ನಲ್ಲಿ ಸ್ಥಿರವಾಗಿ ರನ್ ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು 4 ಅರ್ಧ ಶತಕಗಳ ಸಹಾಯದಿಂದ ಒಟ್ಟು 590 ರನ್ ಗಳಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.