ತನಗಿಂತಲೂ 28 ವರ್ಷ ಚಿಕ್ಕವಳನ್ನು ಮದುವೆಯಾದ ಭಾರತ ತಂಡದ ಮಾಜಿ ಆಟಗಾರ...ಹನಿಮೂನ್ ಪ್ಲಾನ್ ಬಗ್ಗೆ ಹೇಳಿದ್ದೇನು?

ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅರುಣ್ ಲಾಲ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ 66 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು, ಅಚ್ಚರಿ ಎಂದರೆ ಅವರು ತಮಗಿಂತ 28 ವರ್ಷ ಚಿಕ್ಕವರಾಗಿರುವ ಬುಲ್ಬುಲ್ ಸಹಾ ಅವರನ್ನು ಮದುವೆಯಾಗಿದ್ದರು.

Written by - Zee Kannada News Desk | Last Updated : Jun 9, 2022, 06:18 PM IST
  • ಇದಾದ ನಂತರ ಅವರಿಗೆ ತಮ್ಮ ಹನಿಮೂನ್ ಕುರಿತಾದ ಪ್ಲಾನ್ ಬಗ್ಗೆ ಕೇಳಿದ್ದಕ್ಕೆ ನಗುತ್ತಾ ಉತ್ತರಿಸಿದ ಅವರು"ರಣಜಿ ಟ್ರೋಫಿ ನಮ್ಮ ಹನಿಮೂನ್" ಎಂದು ಅವರು ಹೇಳಿದ್ದಾರೆ.
ತನಗಿಂತಲೂ 28 ವರ್ಷ ಚಿಕ್ಕವಳನ್ನು ಮದುವೆಯಾದ ಭಾರತ ತಂಡದ ಮಾಜಿ ಆಟಗಾರ...ಹನಿಮೂನ್ ಪ್ಲಾನ್ ಬಗ್ಗೆ ಹೇಳಿದ್ದೇನು?  title=

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅರುಣ್ ಲಾಲ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ 66 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು, ಅಚ್ಚರಿ ಎಂದರೆ ಅವರು ತಮಗಿಂತ 28 ವರ್ಷ ಚಿಕ್ಕವರಾಗಿರುವ ಬುಲ್ಬುಲ್ ಸಹಾ ಅವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ : President Election 2022 : ಇಂದು ಮಧ್ಯಾಹ್ನ 3 ಗಂಟೆಗೆ 'ರಾಷ್ಟ್ರಪತಿ ಚುನಾವಣೆ' ದಿನಾಂಕ ಘೋಷಣೆ!

ಮದುವೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಜೀವನದಲ್ಲಿ ಮತ್ತೊಂದು ವಿಶೇಷ ಕ್ಷಣವಾಗಿದೆ. ನಾನು ಬುಲ್ಬುಲ್ ಅನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ನಾವು ನಮ್ಮ ಜೀವನದುದ್ದಕ್ಕೂ ಸಂತೋಷದ ಜೋಡಿಯಾಗಿರುತ್ತೇವೆ" ಎಂದು ಅರುಣ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಇದಾದ ನಂತರ ಅವರಿಗೆ ತಮ್ಮ ಹನಿಮೂನ್ ಕುರಿತಾದ ಪ್ಲಾನ್ ಬಗ್ಗೆ ಕೇಳಿದ್ದಕ್ಕೆ ನಗುತ್ತಾ ಉತ್ತರಿಸಿದ ಅವರು"ರಣಜಿ ಟ್ರೋಫಿ ನಮ್ಮ ಹನಿಮೂನ್" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ

ಜೂನ್ 4 ರಿಂದ 8 ರವರೆಗೆ ಬೆಂಗಳೂರಿನ ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಾರ್ಖಂಡ್ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್‌ಗೆ ತಯಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸದ್ಯ ಬಂಗಾಳ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಅರುಣ್ ಲಾಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.ಈಗ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಬಂಗಾಳ ತಂಡವನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಅವರ ಪತ್ನಿ ಬುಲ್‌ಬುಲ್ ಕೂಡ ಸ್ಟ್ಯಾಂಡ್‌ನಲ್ಲಿ ಸಾಥ್ ನೀಡುತ್ತಾರೆ.

ಅರುಣ್ ಲಾಲ್ ಅವರು 1982 ಮತ್ತು 1989 ರ ನಡುವೆ ಟೀಮ್ ಇಂಡಿಯಾ ಪರವಾಗಿ 16 ಟೆಸ್ಟ್ ಮತ್ತು 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News