Argentina vs France FIFA World Cup 2022 final : ವ್ಯರ್ಥವಾದ ಎಂಬಪ್ಪೆ ಹ್ಯಾಟ್ರಿಕ್ ಶ್ರಮ, ಅರ್ಜೆಂಟೈನಾಗೆ ವಿಶ್ವ ಚಾಂಪಿಯನ್ ಪಟ್ಟ

 

Written by - Zee Kannada News Desk | Last Updated : Dec 19, 2022, 12:16 AM IST
  • ಒಟ್ಟಾರೆಯಾಗಿ ಮೆಸ್ಸಿ ಗಳಿಸಿದ ಎರಡು ಗೋಲ್ ಗಳಿಂದ ಅರ್ಜೆಂಟೈನಾ ತಂಡವು 3 ಗೋಲ್ ಗಳಿಂದ ಸುಸ್ಥಿತಿಯಲ್ಲಿತ್ತು.
  • ಎಂಬಪ್ಪೆ ಫ್ರಾನ್ಸ್ ತಂಡದ ಪರವಾಗಿ ಮೂರು ಗೋಲ್ ಗಳಿಸುವ ಮೂಲಕ ಪಂದ್ಯದ ಚಿತ್ರವನ್ನೇ ಬದಲಿಸಿದರು.
  • ಅಂತಿಮವಾಗಿ ಅರ್ಜೆಂಟೈನಾ ತಂಡವು 4-2 ಅಂತರದಲ್ಲಿ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
Argentina vs France FIFA World Cup 2022 final : ವ್ಯರ್ಥವಾದ ಎಂಬಪ್ಪೆ ಹ್ಯಾಟ್ರಿಕ್ ಶ್ರಮ, ಅರ್ಜೆಂಟೈನಾಗೆ ವಿಶ್ವ ಚಾಂಪಿಯನ್ ಪಟ್ಟ  title=
Photo Courtsey: Twitter

ಕತಾರ್: ಇಲ್ಲಿನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೈನಾ ತಂಡವು ಫ್ರಾನ್ಸ್ ವಿರುದ್ಧ ಪೆನಾಲ್ಟಿ ನಲ್ಲಿ 4-2 ಅಂತರದಿಂದ ಗೆಲ್ಲುವ ಮೂಲಕ ವಿಶ್ವಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಇದನ್ನೂ ಓದಿ : Viral Video: ಮನೆ ಮಾಲೀಕರೊಂದಿಗೆ ಡೋರ್ ಹಾಕಿ ಆಟ ಆಡಿದ ಬೆಕ್ಕು...!

ಪಂದ್ಯದ ಆರಂಭದಲ್ಲಿ ಅರ್ಜೆಂಟೈನಾ ಪರವಾಗಿ ಮೆಸ್ಸಿ ಹಾಗೂ ಏಂಜಲ್ ಡಿ ಮಾರಿಯಾ ತಲಾ ಒಂದೊಂದು ಗೋಲ್ ಬಾರಿಸುವ ಮೂಲಕ ತಂಡವನ್ನು 2-0 ಅಂತರಿಂದ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.ಒಂದು ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದ ಅರ್ಜೆಂಟೈನಾ ತಂಡವು ಸುಲಭವಾಗಿ ಗೆಲ್ಲಬಹುದು ಎಂದು ಭಾವಿಸಲಾಗಿತ್ತು.ಒಟ್ಟಾರೆಯಾಗಿ ಮೆಸ್ಸಿ ಗಳಿಸಿದ ಎರಡು ಗೋಲ್ ಗಳಿಂದ ಅರ್ಜೆಂಟೈನಾ ತಂಡವು 3 ಗೋಲ್ ಗಳಿಂದ ಸುಸ್ಥಿತಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ತಮ್ಮ ಕಾಲ್ಜೆಚಕ ತೋರಿಸಿದ ಫ್ರಾನ್ಸ್ ತಂಡದ ನಾಯಕ ಕ್ಯಾಲಿಯನ್ ಎಂಬಪ್ಪೆ ಫ್ರಾನ್ಸ್ ತಂಡದ ಪರವಾಗಿ ಮೂರು ಗೋಲ್ ಗಳಿಸುವ ಮೂಲಕ ಪಂದ್ಯದ ಚಿತ್ರವನ್ನೇ ಬದಲಿಸಿದರು.

ಇದನ್ನೂ ಓದಿ : Winter Session : ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ; ವಿಪಕ್ಷ ದಾರಿ ತಪ್ಪಿಸಿದ ಬಿಜೆಪಿ ಸರ್ಕಾರ?

ಅಂತಿಮವಾಗಿ 3-3 ಅಂತರದಲ್ಲಿ ಟೈ ಆಗಿರುವ ಪಂದ್ಯಕ್ಕೆ ಪೆನಾಲ್ಟಿ ಮೂಲಕ ಫಲಿತಾಂಶವನ್ನು ಎದುರು ನೋಡಲಾಯಿತು.ಈ ಸಂದರ್ಭದಲ್ಲಿ ಅರ್ಜೆಂಟಿನಾ ತಂಡವು ನಾಲ್ಕು ಗೋಲ್ ಗಳನ್ನು ಗಳಿಸಿ ಭರ್ಜರಿ ಮುನ್ನಡೆ ಪಡೆದರೆ ಅಂತಿಮವಾಗಿ ಫ್ರಾನ್ಸ್ ತಂಡವು ಎರಡು ಗೋಲ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.ಅಂತಿಮವಾಗಿ ಅರ್ಜೆಂಟೈನಾ ತಂಡವು 4-2 ಅಂತರದಲ್ಲಿ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇದರಿಂದಾಗಿ ವಿಶ್ವಕಪ್ ನಂತರ ಫುಟ್ಬಾಲ್ ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಮೆಸ್ಸಿಗೆ ಈಗ ಫೈನಲ್ ಪಂದ್ಯದಲ್ಲಿ ತಮ್ಮ ತಂಡ  ಚಾಂಪಿಯನ್ ಪಟ್ಟವನ್ನುಅಲಂಕರಿಸಿರುವುದರಿಂದಾಗಿ ಅವರಿಗೆ ಈಗ ಗೌರವ ಪೂರ್ಣ ವಿದಾಯ ಸಿಕ್ಕಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News