1st Six in Cricket History: ಇಂದಿನ ಯುಗದಲ್ಲಿ ಇನ್ ಸ್ಟಂಟ್ ಕ್ರಿಕೆಟ್ ಚಾಲ್ತಿಯಲ್ಲಿದ್ದು, ಇದಕ್ಕೆ ಪ್ರಮುಖ ಕಾರಣ ಬೌಂಡರಿ, ಸಿಕ್ಸರ್’ಗಳ ಮಳೆ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದವರು ಯಾರು ಗೊತ್ತಾ? ಈ ವಿಚಾರದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇಲ್ಲಿವಾದರೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
ಇದನ್ನೂ ಓದಿ: ಬರೋಬ್ಬರಿ 60 ಕಂಪನಿಗಳಿಗೆ ಕೋಟಿ ಕೋಟಿ ವಂಚನೆ: ಭಾರತದ ಈ ಸ್ಟಾರ್ ಕ್ರಿಕೆಟಿಗ ಅರೆಸ್ಟ್!
ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತುಕೊಂಡೇ ಕ್ರಿಕೆಟ್ ನೋಡಲು ಕಾರಣ, ಅಲ್ಲಿ ಕಾಣಿಸುವ ವೇಗದ ಬೌಂಡರಿ ಮತ್ತು ಸಿಕ್ಸರ್’ಗಳು. ತ್ವರಿತ ಕ್ರಿಕೆಟ್’ನ ಈ ಯುಗದಲ್ಲಿ, ಅಭಿಮಾನಿಗಳು ಪೂರ್ಣವಾಗಿ ಇವುಗಳನ್ನೆಲ್ಲಾ ಎಂಜಾಯ್ ಮಾಡುತ್ತಾರೆ.
ಇಂದು ಕ್ರಿಕೆಟ್ ಕ್ರೇಜ್ ಯಾವ ರೀತಿ ಎಂದರೆ ವಿಶ್ವದ ಮೂಲೆ ಮೂಲೆಯಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಪ್ರೇಕ್ಷಕರು ಇವೆಲ್ಲವನ್ನೂ ಎಂಜಾಯ್ ಮಾಡುವ ಉದ್ದೇಶದಿಂದಲೇ ಕ್ರೀಡಾಂಗಣಕ್ಕೆ ಬರುತ್ತಾರೆ.
ಇನ್ನು ವಿಶ್ವ ಕ್ರಿಕೆಟ್’ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ಆಟಗಾರ ಯಾರೆಂದು ಗೊತ್ತಾ? ಈ ವಿಶೇಷ ಸಾಧನೆ ಮಾಡಿದ ಖ್ಯಾತಿ ಆಸ್ಟ್ರೇಲಿಯಾದ ಆಟಗಾರನಬ ಹೆಸರಿನಲ್ಲಿ ದಾಖಲಾಗಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೋ ಡಾರ್ಲಿಂಗ್ ಮೊದಲು ಈ ಸಾಧನೆ ಮಾಡಿದ್ದಾರೆ. ಡಾರ್ಲಿಂಗ್ 1898 ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಈ ಸಾಧನೆ ಮಾಡಿದರು.
ಆಗ ಸಿಕ್ಸರ್ ಹೊಡೆಯುವ ನಿಯಮವೇ ಬೇರೆ ಇತ್ತು. ವಾಸ್ತವವಾಗಿ ಇಂದಿನಂತೆ, ಚೆಂಡನ್ನು ಬೌಂಡರಿ ಗೆರೆಯಿಂದ ಹೊರಗೆ ಕಳುಹಿಸಿದರೆ 6 ರನ್ ಬರುತ್ತಿರಲಿಲ್ಲ. ಹಾಗಿದ್ದಾಗ ಕೇವಲ 5 ರನ್’ಗಳು ಸಿಗುತ್ತಿತ್ತು. ಒಂದು ವೇಳೆ ಸ್ಟೇಡಿಯಂ ದಾಟಿದರೆ ಮಾತ್ರ 6 ರನ್ ಗಳಿಸಲಾಗುತ್ತಿತ್ತು.
ಇದನ್ನೂ ಓದಿ: ಪಬ್ಲಿಕ್’ನಲ್ಲಿ ತಂದೆಗೆ ಎದುರುತ್ತರ ನೀಡಿದ ಟೀಂ ಇಂಡಿಯಾದ ಆಟಗಾರ: ಕೋಪಗೊಂಡ ಸಹೋದರಿ ಏನಂದ್ರು ಗೊತ್ತಾ?
ಕ್ರೀಡಾಂಗಣ ದಾಟಿ ಬಾಲ್ ಹೊರಬಿದ್ದರೆ ಬ್ಯಾಟ್ಸ್‌ಮನ್ ಖಾತೆಗೆ 6 ರನ್‌ಗಳು ಸೇರ್ಪಡೆಗೊಳ್ಳುತ್ತಿತ್ತು. ಇದಕ್ಕಾಗಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಶ್ರಮಪಡಬೇಕಾಗಿರುತ್ತಿತ್ತತು. ಆದರೆ, ಡಾರ್ಲಿಂಗ್ 14 ನವೆಂಬರ್ 1898 ರಂದು ಇದನ್ನು ಸಾಧಿಸಿದರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.