Video Viral: ಮದುವೆಯಾಗಿದ್ರೂ ಸಹ ಏರ್ಪೋರ್ಟ್’ನಲ್ಲಿ ಅಭಿಮಾನಿಗೆ ಲವ್ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ…! ವಿಡಿಯೋ ನೋಡಿ

Rohit Sharma proposes Video: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರಿಗೆ ಗುಲಾಬಿ ಹೂವನ್ನು ನೀಡಿ ‘ನೀನು ನನ್ನನ್ನು ಮದುವೆಯಾಗು’ ಎಂದು ಹೇಳಿರುವುದು ಕೇಳಿಬಂದಿದೆ.

Written by - Bhavishya Shetty | Last Updated : Mar 19, 2023, 08:03 PM IST
    • ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋತಿದೆ
    • ಭಾರತ ತಂಡ ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು.
    • ಇದಾದ ಬಳಿಕ ಆಸ್ಟ್ರೇಲಿಯಾ 11 ಓವರ್‌ಗಳಲ್ಲಿ ಗುರಿ ತಲುಪಿತು.
Video Viral: ಮದುವೆಯಾಗಿದ್ರೂ ಸಹ ಏರ್ಪೋರ್ಟ್’ನಲ್ಲಿ ಅಭಿಮಾನಿಗೆ ಲವ್ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ…! ವಿಡಿಯೋ ನೋಡಿ title=
Rohit Sharma Love Propose

Rohit Sharma propose Video: ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಸೋಲಿಸಿದೆ. ವಿಶಾಖಪಟ್ಟಣದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ಆಸ್ಟ್ರೇಲಿಯಾ 11 ಓವರ್‌ಗಳಲ್ಲಿ ಗುರಿ ತಲುಪಿತು. ಈ ನಡುವೆ ರೋಹಿತ್ ಶರ್ಮಾ ಅವರ ವಿಡಿಯೋವೊಂದು ವೈರಲ್ ಆಗಿದೆ.

ಇದನ್ನೂ ಓದಿ: Hardik Pandya-Virat Kohli: ಮೈದಾನದಲ್ಲಿಯೇ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿದ್ರಾ ಹಾರ್ದಿಕ್! ಈ ವಿಡಿಯೋ ನೋಡಿದ್ರೆ ಹಾಗೆ ಅನ್ಸುತ್ತೆ

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋತಿದೆ. ಇದು ಬಾಲ್‌’ನಲ್ಲಿ ಭಾರತಕ್ಕೆ ಏಕದಿನ ಮಾದರಿಯಲ್ಲಿ ಅತಿ ದೊಡ್ಡ ಸೋಲು. ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ವೈಯಕ್ತಿಕ ಕಾರಣಗಳಿಂದ ಮೊದಲ ಏಕದಿನ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಮರಳಿದ್ದಾರೆ. ಆದರೆ ಕಳಪೆ ಬ್ಯಾಟಿಂಗ್ ಕಾರಣದಿಂದ ಭಾರತ ತಂಡ 117 ರನ್ ಗಳಿಸಿ ಆಲೌಟ್ ಆಯಿತು. ನಂತರ ಮಿಚೆಲ್ ಮಾರ್ಷ್ ಅಜೇಯ 66 ಮತ್ತು ಟ್ರಾವಿಸ್ ಹೆಡ್ ಅಜೇಯ 51 ರನ್ ಗಳಿಸಿ, ಜೊತೆಯಾಗಿ ತಂಡಕ್ಕೆ 11 ಓವರ್‌ಗಳಲ್ಲಿ ಜಯ ತಂದುಕೊಟ್ಟರು.

ಈ ನಡುವೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರೋಹಿತ್ ತಮ್ಮ ಅಭಿಮಾನಿಯೊಬ್ಬರಿಗೆ ಏರ್ ಪೋರ್ಟ್’ನಲ್ಲಿ ಮದುವೆಯಾಗು ಎಂದಿದ್ದಾರೆ.

ಕ್ಯಾಪ್ಟನ್ ರೋಹಿತ್ ಶರ್ಮಾ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಮೊಬೈಲ್’ನಲ್ಲಿ ವಿಡಿಯೋ ಸೆರೆಹಿಡಿಯುತ್ತಿದ್ದರು. ಆಗ ತಮ್ಮ ಕೈಯಲ್ಲಿದ್ದ ಗುಲಾಬಿ ಹೂವನ್ನು ರೋಹಿತ್ ಶರ್ಮಾ ಆ ಅಭಿಮಾನಿಗೆ ಕೊಟ್ಟು ‘ನೀನು ನನ್ನನ್ನು ಮದುವೆಯಾಗು’ ಎಂದು ತಮಾಷೆ ಮಾಡಿದ್ದಾರೆ. ಈ ಮಾತನ್ನು ಕೇಳಿದ ಅಭಿಮಾನಿ ಶಾಕ್ ಆಗಿದ್ದಷ್ಟೇ ಅಲ್ಲ, ಜೋರಾಗಿ ನಗಲು ಪ್ರಾರಂಭಿಸಿದ್ದಾರೆ.

ವಿಡಿಯೋ ನೋಡಿ:

 

ಇದನ್ನೂ ಓದಿ: IND vs AUS: 2ನೇ ಏಕದಿನದಲ್ಲಿ ಬ್ಯಾಟಿಂಗ್ ವೈಫಲ್ಯ: ಆಸೀಸ್ ವಿರುದ್ಧ ಹೀನಾಯ ಸೋಲುಂಡ ಟೀಂ ಇಂಡಿಯಾ!

ವೇಗಿ ಮಿಚೆಲ್ ಸ್ಟಾರ್ಕ್ ವಿಶಾಖಪಟ್ಟಣಂನಲ್ಲಿ ತಮ್ಮ ಬೌಲಿಂಗ್ ಮೂಲಕ ಅಬ್ಬರಿಸಿದ್ದಾರೆ. 8 ಓವರ್ ಗಳಲ್ಲಿ 53 ರನ್ ನೀಡಿ 5 ವಿಕೆಟ್ ಪಡೆದ್ದಾರೆ. ಮತ್ತೊಂದೆಡೆ ಸೀನ್ ಅಬಾಟ್ ಅವರ ಹೆಸರಿನಲ್ಲಿ 3 ವಿಕೆಟ್ ಪಡೆದಿದ್ದಾರೆ. ನಾಥನ್ ಎಲ್ಲಿಸ್ 2 ವಿಕೆಟ್ ಕಬಳಿಸಿದ್ದಾರೆ. ಮಾರ್ಷ್ 36 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿ ಭಾರತದ ಭರವಸೆಯನ್ನು ನುಚ್ಚುನೂರು ಮಾಡಿದ್ದಾರೆ. ಇನ್ನು ಸ್ಟಾರ್ಕ್ ಅವರು ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿ ಹೊರ ಹೊಮ್ಮಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News