ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್..! ಪಂದ್ಯದಿಂದ ಹೊರಗುಳಿಯಲಿದ್ದಾರೆ ನಂಬರ್‌ ಒನ್‌ ಆಟಗಾರ

Suryakumar Yadav injury update IPL 2024: ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಭಾರೀ ಸಂಕಷ್ಟದಲ್ಲಿದೆ.. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.. 

Written by - Savita M B | Last Updated : Mar 12, 2024, 01:11 PM IST
  • ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ
  • ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತನ್ನ ನೂತನ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಆರನೇ ಬಾರಿ ಗೆಲ್ಲುವ ಭರವಸೆಯಲ್ಲಿದೆ.
ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್..! ಪಂದ್ಯದಿಂದ ಹೊರಗುಳಿಯಲಿದ್ದಾರೆ ನಂಬರ್‌ ಒನ್‌ ಆಟಗಾರ title=

Mumbai Indians matches without Suryakumar Yadav: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತನ್ನ ನೂತನ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಆರನೇ ಬಾರಿ ಗೆಲ್ಲುವ ಭರವಸೆಯಲ್ಲಿದೆ. ಆದ್ರೆ.. ಐಪಿಎಲ್ ಆರಂಭಕ್ಕೂ ಮುನ್ನವೇ ತಂಡಕ್ಕೆ ಬಿಗ್ ಶಾಕ್ ಕಾದಿದೆ... ಟಿ20 ಕ್ರಿಕೆಟ್‌ನ ನಂಬರ್ ಒನ್ ಆಟಗಾರ ಹಾಗೂ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ವರದಿಗಳಿವೆ.

ಸೂರ್ಯಕುಮಾರ್ ಯಾದವ್ ಕ್ರೀಡಾ ಹರ್ನಿಯಾದಿಂದ ಬಳಲುತ್ತಿದ್ದು.. ಅದಕ್ಕಾಗಿ ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಫಿಟ್‌ ಆಗುತ್ತಿದ್ದಾರೆ.. ಆದರೆ, ಅವರು ಐಪಿಎಲ್‌ಗೆ ಫಿಟ್ ಆಗುತ್ತಾರೋ ಇಲ್ಲವೋ ಎಂಬ ಅನುಮಾನ ಇದೀಗ ಉಧ್ಭವವಾಗಿದೆ..

ಇದನ್ನೂ ಓದಿ-ಭಾರತದ ಸ್ಟಾರ್ ಕ್ರಿಕೆಟಿಗ ಎಂ.ಎಸ್. ಧೋನಿ ಅಕ್ಕ ಯಾರು ಗೊತ್ತಾ? ಪ್ರತಿ ಹಂತದಲ್ಲೂ ಮಾಹಿಗೆ ಸಪೋರ್ಟ್‌ ಮಾಡಿದ ಚೆಲುವೆ ಈಕೆ!

ಕೆಲವು ವರದಿಗಳ ಪ್ರಕಾರ "ಅವರು ಖಂಡಿತವಾಗಿಯೂ ಐಪಿಎಲ್‌ಗೆ ರೀ ಎಂಟ್ರಿ ಕೊಡುತ್ತಾರೆ. NCA ಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡವು ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎರಡು ಪಂದ್ಯಗಳನ್ನು ಆಡಲು ಅನುಮತಿ ನೀಡುತ್ತದೆಯೇ? ಅಥವಾ ಇಲ್ಲವೇ? ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ’ ಎನ್ನಲಾಗಿದೆ..

ಇದನ್ನೂ ಓದಿ-Rishab Pant: ರಿಷಬ್ ಪಂತ್ ಕಂಬ್ಯಾಕ್’ಗೆ ಅಸ್ತು ಎಂದ NCA… ಮೈದಾನಕ್ಕಿಳಿಯುವ ದಿನ ತಿಳಿಸಿದ ಬಿಸಿಸಿಐ

ಇದೆಲ್ಲದರ ಮಧ್ಯೆ ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 24 ರಂದು ಗುಜರಾತ್ ಜೈಂಟ್ಸ್ ವಿರುದ್ಧ ಐಪಿಎಲ್ 2024 ಸೀಸನ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ತನ್ನ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಮಾರ್ಚ್ 27 ರಂದು ಹೈದರಾಬಾದ್ ಎದುರಾಳಿಯಾಗಿ ಆಡಲಿದೆ.. 

ಇತ್ತೀಚಿನ ಸಂದರ್ಶನವೊಂದರಲ್ಲಿ, ಸೂರ್ಯ ತನ್ನ ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನಗಳಿಲ್ಲ.. ಕೆಲ ವಾರಗಳ ಹಿಂದೆ ಹರ್ನಿಯಾ ಸರ್ಜರಿ ಆಗಿದ್ದು ನಿಜ, ಕಾಲಿಗೆ ಯಾವುದೇ ತೊಂದರೆ ಇಲ್ಲ..  ಸದ್ಯ ಸಂಪೂರ್ಣ ಫಿಟ್ ಆಗಲು ಪ್ರಯತ್ನಿಸುತ್ತಿದ್ದೇನೆ.. ಅತಿ ಶೀಘ್ರದಲ್ಲಿ ಮೈದಾನದಲ್ಲಿರುವ ಎಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News