NZ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ವಿರಾಟ್ ಕೊಹ್ಲಿ ಬದಲು ಈ ಆಟಗಾರ ವಹಿಸಲಿದ್ದಾರೆ ತಂಡದ ಸಾರಥ್ಯ

ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ನಾಯಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. 

Written by - Ranjitha R K | Last Updated : Nov 12, 2021, 01:28 PM IST
  • ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪಟ್ಟಿ ಪ್ರಕಟ
  • ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
  • ತಂಡದ ಸಾರಥ್ಯ ಅಜಿಂಕ್ಯ ರಹಾನೆ ಹೆಗಲಿಗೆ
NZ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ವಿರಾಟ್ ಕೊಹ್ಲಿ ಬದಲು ಈ ಆಟಗಾರ ವಹಿಸಲಿದ್ದಾರೆ ತಂಡದ ಸಾರಥ್ಯ  title=
ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪಟ್ಟಿ ಪ್ರಕಟ (file photo)

ನವದೆಹಲಿ : ನವೆಂಬರ್ 25ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ (New Zealand test ) ಸರಣಿಗೆ ಟೀಂ ಇಂಡಿಯಾ (Team India) ಆಟಗಾರರ ಪಟ್ಟಿ ಪ್ರಕಟವಾಗಿದೆ. 16 ಆಟಗಾರರ ಈ ತಂಡದಲ್ಲಿ ಕೆಲವು ಹೊಸ ಹಾಗೂ ಅನುಭವಿ ಆಟಗಾರರಿಗೆ ಸ್ಥಾನ ನೀಡಲಾಗಿದೆ. ತಂಡದ  ನಾಯಕ ವಿರಾಟ್ ಕೊಹ್ಲಿ (Virat Kohli) ಮೊದಲ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಬ್ಬ ಅನುಭವಿ ಆಟಗಾರ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. 

ಮೊದಲ ಟೆಸ್ಟ್‌ನಿಂದ ಕೊಹ್ಲಿ ಹೊರಕ್ಕೆ  :
ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ನಾಯಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಕೊಹ್ಲಿ ಬದಲಿಗೆ ಅಜಿಂಕ್ಯ ರಹಾನೆ (Ajinkya Rahane) ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದರೆ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯದಿಂದ ಮತ್ತೆ ತಂಡಕ್ಕೆ ವಾಪಸಾಗಲಿದ್ದಾರೆ. ರೋಹಿತ್ ಶರ್ಮಾ (Rohith Sharma) ಈ ಸರಣಿಯಿಂದ ಹೊರಗುಳಿಯಲಿದ್ದಾರೆ.  ರೋಹಿತ್ ಹೊರತಾಗಿ ಇನ್ನೂ ಅನೇಕ ಆಟಗಾರರು ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಈ ಪಟ್ಟಿಯಲ್ಲಿ ರಿಷಬ್ ಪಂತ್ (Rishab Pant) ಮತ್ತು ಜಸ್ಪ್ರೀತ್ ಬುಮ್ರಾ ಹೆಸರುಗಳೂ ಕೇಳಿ ಬಂದಿವೆ.   

ಇದನ್ನೂ ಓದಿ : T20 World Cup: ಪಾಕಿಸ್ತಾನದ ಕನಸು ಭಗ್ನ, ಫೈನಲ್‌ನಲ್ಲಿ ಸೆಣಸಲಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್

ಹೊಸಬರಿಗೆ ಅವಕಾಶ :
ಇದೇ ವೇಳೆ ಕೆಲ ಹೊಸ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಇದೀಗ ತಂಡಕ್ಕೆ ಆಯ್ಕೆಯಾದವರಲ್ಲಿ, ಭಾರತಕ್ಕಾಗಿ ಮೊದಲ ಬಾರಿಗೆ ಟೆಸ್ಟ್ ಆಡುವ ಅನೇಕ ಆಟಗಾರರಿದ್ದಾರೆ. ಅವರಲ್ಲಿ, ಯುವ ಬ್ಯಾಟ್ಸ್‌ಮನ್‌ಗಳಾದ ಕೆಎಸ್ ಭರತ್ (KS Bharat), ಶ್ರೇಯಸ್ ಅಯ್ಯರ್ ಮತ್ತು ಪ್ರಸಿದ್ಧ ಕೃಷ್ಣ ಅವರ ಹೆಸರುಗಳು ಬರುತ್ತಿವೆ. ಇನ್ನು ಜಯಂತ್ ಯಾದವ್‌ಗೆ ಸುದೀರ್ಘ ಸಮಯದ ನಂತರ ಮತ್ತೊಮ್ಮೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಶುಭಮನ್ ಗಿಲ್ ಕೂಡ  ಮತ್ತೊಮ್ಮೆ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. 

 

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ :
ಅಜಿಂಕ್ಯ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪನಾಯಕ), ಕೆಎಲ್ ರಾಹುಲ್ (KL Rahul) , ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ರಿದ್ಧಿಮಾನ್ ಸಹಾ (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ಆರ್ ಅಶ್ವಿನ್ (R Ashwin), ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.

ಇದನ್ನೂ ಓದಿ : ICC T20 World Cup 2021: ಅಬ್ಬರಿಸಿದ ಮ್ಯಾಥ್ಯೂ ವಾಡೆ, ಫೈನಲ್ ಗೆ ಲಗ್ಗೆ ಇಟ್ಟ ಆಸೀಸ್ ಪಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News