Kangana Ranaut : ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ ಸಂಸದೆ ಕಂಗನಾ ರಣಾವತ್..!

Kangana Ranaut in Modi oath ceremoney : ನರೇಂದ್ರ ಮೋದಿಯವರು ಮೂರನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕಂಗನಾ ರನೌತ್ ರಾಜಕುಮಾರಿಯಂತೆ ರೆಡಿಯಾಗಿ ಬಂದಿದ್ದರು.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Jun 9, 2024, 08:32 PM IST
    • ನರೇಂದ್ರ ಮೋದಿಯವರು ಮೂರನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ
    • ಕಾರ್ಯಕ್ರಮಕ್ಕೆ ಕಂಗನಾ ರನೌತ್ ರಾಜಕುಮಾರಿಯಂತೆ ರೆಡಿಯಾಗಿ ಬಂದಿದ್ದರು..
    • ಕಂಗನಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
Kangana Ranaut : ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ ಸಂಸದೆ ಕಂಗನಾ ರಣಾವತ್..! title=

PM Narendra modi Oath ceremoney : ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ದೇಶದ ಗಣ್ಯರ ಜೊತೆಗೆ ನಾಯಕರು, ನಟರು ಕೂಡ ಭಾಗವಹಿಸಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟಿ ಮತ್ತು ಬಿಜೆಪಿ ನೂತನ ಸಂಸದೆ ಕಂಗನಾ ರನೌತ್ ಕೂಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಂಗನಾ ರಾಜಕುಮಾರಿಯಂತೆ ಕಂಗೊಳಿಸಿದ್ದು, ಫೋಟೋ ವೈರಲ್‌ ಆಗಿವೆ.

ಈ ವಿಶೇಷ ಕ್ಷಣಕ್ಕೆ ಕಂಗನಾ ರನೌತ್ ರಾಜಕುಮಾರಿಯಂತೆ ರೆಡಿಯಾಗಿ ಬಂದಿದ್ದರು. ಸಮಾರಂಭದ ಕೇಂದ್ರ ಬಿಂದುವಿನಂತೆ ಬಿಟೌನ್‌ ಕ್ವೀನ್‌ ಕಂಗೊಳಿಸುತ್ತಿದ್ದರು. ಬಿಳಿ ಬಣ್ಣದ ಸೀರೆಯಲ್ಲಿ, ಮುತ್ತಿನ ನೆಕ್ಲೇಸ್‌ ಧರಿಸಿ ಕಂಗನಾ ಕಾಂತಿಯುತವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..

ಇದನ್ನೂ ಓದಿ:ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆಯಲ್ಲಿ ಮಿಂಚಿದ ಶಾರುಖ್‌..! ವಿಡಿಯೋ ವೈರಲ್‌

ಸ್ವತಃ ವಿಡಿಯೋ ಹಂಚಿಕೊಂಡಿರುವ ಕಂಗನಾ 'ಪ್ರಮಾಣ ದಿನದಂದು ನನ್ನ ನೋಟ' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಕಂಗನಾ ರನೌತ್ ಹಲವು ವರ್ಷಗಳ ಹಿಂದೆ ಬಾಲಿವುಡ್ ಉದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ಅವರು ಕ್ರಮೇಣ ತಮ್ಮ ಕೆಲಸದ ಮೂಲಕ ಉದ್ಯಮ ಮತ್ತು ಅಭಿಮಾನಿಗಳ ನಡುವೆ ತಮ್ಮ ಸ್ಥಾನವನ್ನು ಪಡೆದರು. 

ಭಾರತೀಯ ಜನತಾ ಪಕ್ಷದಿಂದ ತನ್ನ ತವರು ಮಂಡಿಯಿಂದ ಕಂಗನಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಭರ್ಜರಿ ಗೆಲುವು ಸಾಧಿಸಿದ್ದಾರೆ. ನಟಿಯಿಂದ ಸಂಸದೆಯಾಗಿ ಪ್ರಯಾಣವನ್ನ ಮುಂದುವರೆಸಿರುವ ಕಂಗನಾ ಇಂದಿರಾ ಗಾಂಧಿ ಜೀವನ ಕಥೆ ಆಧಾರಿತ ʼಎಮರ್ಜೆನ್ಸಿʼ ಸಿನಿಮಾ ಪೂರ್ಣಗೊಳಿಸುತ್ತಾರಾ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News