SuperMan ಅವತಾರದಲ್ಲಿ ಕಾಣಿಸಿಕೊಂಡ David Warner

ಡೇವಿಡ್ ವಾರ್ನರ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಸೂಪರ್‌ಮ್ಯಾನ್‌ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Written by - Yashaswini V | Last Updated : Dec 28, 2020, 09:40 AM IST
  • ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್
  • ಸೂಪರ್‌ಮ್ಯಾನ್ ಆಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್
  • ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ವಾರ್ನರ್ ಆಡುವ ಬಗ್ಗೆ ಸಸ್ಪೆನ್ಸ್
SuperMan ಅವತಾರದಲ್ಲಿ ಕಾಣಿಸಿಕೊಂಡ David Warner title=
David Warner in Superman avatar (Image courtesy: insta/davidwarner)

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಭಾಗವಹಿಸಿಲ್ಲ. ಅದೇ ಸಮಯದಲ್ಲಿ ಜನವರಿ 7 ರಿಂದ ಪ್ರಾರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ಅವರು ಆಡುವ ಬಗ್ಗೆ ಇನ್ನೂ ಕೂಡ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ.

ಈ ಮಧ್ಯೆ ಡೇವಿಡ್ ವಾರ್ನರ್ (David Warner) ತಮ್ಮ ಅಭಿಮಾನಿಗಳನ್ನು ರಂಜಿಸಲು ಕಳೆದ ಕೆಲವು ದಿನಗಳಿಂದ ಮೊಬೈಲ್ ಆ್ಯಪ್ ಮೂಲಕ ಚಲನಚಿತ್ರಗಳ ಸೂಪರ್‌ಸ್ಟಾರ್‌ಗಳ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಈ ಆರಂಭಿಕ ಆಟಗಾರ ಪ್ರಸಿದ್ಧ ಸರಣಿ ಸ್ನೇಹಿತರ (F.R.I.E.N.D.S) ದೃಶ್ಯವನ್ನು ಮರುಸೃಷ್ಟಿಸಿದ್ದಾರೆ.

ಇದನ್ನೂ ಓದಿ: ತೆಲುಗು ನಟ ಮಹೇಶ್ ಬಾಬು ಹಾಡಿಗೆ ಸ್ಟೆಪ್ ಹಾಕಿದ ಡೇವಿಡ್ ವಾರ್ನರ್ ...!

ಡೇವಿಡ್ ವಾರ್ನರ್  ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಫೆಂಡ್ಸ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ಒಬ್ಬರಾದ ಜೋಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ವಾರ್ನರ್ ಸೂಪರ್‌ಮ್ಯಾನ್‌ನ (SuperMan) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವಾರ್ನರ್ ತಮ್ಮ ಅಭಿಮಾನಿಗಳಿಗೆ ಮೆರ್ರಿ ಕ್ರಿಸ್‌ಮಸ್ (Merry Christmas) ಶುಭ ಹಾರೈಸಿದ್ದಾರೆ.

ವೀಡಿಯೊವನ್ನು ಹಂಚಿಕೊಂಡ ಅವರು ಅದರಲ್ಲಿ 'ಯಾರಿಗೂ ಅರ್ಥವಾಗದಂತಹದನ್ನು ನಾನು ಕಂಡುಕೊಂಡಿದ್ದೇನೆ' ಎಂಬ ಶೀರ್ಷಿಕೆ ನೀಡಿದ್ದಾರೆ. ವಾರ್ನರ್ ಅವರ ಅಭಿಮಾನಿಗಳು ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ: Ashesನ ಪ್ರತಿಸ್ಪರ್ಧಿಗಳಾದ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್ ಐಪಿಎಲ್‌ನ ಅತ್ಯುತ್ತಮ ಪಾಟ್ನರ್ಸ್
 
ಆಸ್ಟ್ರೇಲಿಯಾ (Australia) ತಂಡದ ಪ್ರಸಿದ್ಧ ಓಪನರ್ ಡೇವಿಡ್ ವಾರ್ನರ್ ಅವರ ತೊಡೆಸಂದು ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾರಣದಿಂದಾಗಿ ಅವರು ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಆಡುತ್ತಾರೆಯೇ ಎಂಬ ಬಗ್ಗೆ ಇನ್ನೂ ಕೂಡ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News