MS Dhoni ಬಳಿಕ ಈ ಆಟಗಾರರಾಗಲಿದ್ದಾರೆ CSK ತಂಡದ ಮುಂದಿನ ನಾಯಕ

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ಐಪಿಎಲ್ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಂತರ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 4 ಐಪಿಎಲ್ ಟ್ರೋಫಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದು, ಮುಂಬೈ ಇಂಡಿಯನ್ಸ್  5 ಬಾರಿ ಐಪಿಎಲ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ.

Written by - Ranjitha R K | Last Updated : Jan 3, 2022, 03:22 PM IST
  • ಐಪಿಎಲ್ ನ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಒಂದು
  • ಧೋನಿ ನಂತರ ನಾಯಕತ್ವಕ್ಕೆ ಇಬ್ಬರು ಆಟಗಾರರ ಸ್ಪರ್ಧೆ
  • ಯಾರಾಗಲಿದ್ದಾರೆ ಸಿಎಸ್ ಕೆ ಮುಂದಿನ ನಾಯಕ
 MS Dhoni ಬಳಿಕ ಈ ಆಟಗಾರರಾಗಲಿದ್ದಾರೆ CSK ತಂಡದ ಮುಂದಿನ ನಾಯಕ  title=
ಐಪಿಎಲ್ ನ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಒಂದು (file photo)

ನವದೆಹಲಿ:  ಐಪಿಎಲ್ 2022 ರ ಮೆಗಾ ಹರಾಜು (IPL 2022 Mega Auction) ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈ ವರ್ಷ ಐಪಿಎಲ್ (IPL) 10 ತಂಡಗಳನ್ನು ಹೊಂದಿರುತ್ತದೆ. ಲಕ್ನೋ ಮತ್ತು ಅಹಮದಾಬಾದ್‌ ಎಂಬ ಎರಡು ಹೊಸ ತಂಡಗಳು  ಕೂಡಾ ಕಣದಲ್ಲಿರಲಿವೆ. ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ಐಪಿಎಲ್ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಂತರ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 4 ಐಪಿಎಲ್ ಟ್ರೋಫಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದು, ಮುಂಬೈ ಇಂಡಿಯನ್ಸ್ (Mumbai Indians) 5 ಬಾರಿ ಐಪಿಎಲ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಪಿಎಲ್ 2021 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದೀಗ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಐಪಿಎಲ್‌ನಿಂದಲೂ ನಿವೃತ್ತಿ ಹೊಂದುವ ನಿರೀಕ್ಷೆಯಿದೆ. ಧೋನಿ ನಿವೃತ್ತಿಯ ನಂತರ, ಚೆನ್ನೈ ಸೂಪರ್ ಕಿಂಗ್ಸ್‌ನ ಮುಂದಿನ ನಾಯಕರಾಗಲು 2 ಆಟಗಾರರೂ ಸ್ಪರ್ಧೆಯಲ್ಲಿದ್ದಾರೆ.  

1. ಋತುರಾಜ್ ಗಾಯಕ್ವಾಡ್ :
 ಋತುರಾಜ್ ಗಾಯಕ್ವಾಡ್ (Ruturaj Gaikwad) ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.  ಋತುರಾಜ್ ಗಾಯಕ್ವಾಡ್ 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ (CSK) ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಧೋನಿ ನಂತರ ಈ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ನಾಯಕನ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ 2021 ರಲ್ಲಿ (IPL 2021) ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ  ಋತುರಾಜ್ ಗಾಯಕ್ವಾಡ್ ಅವರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕತ್ವವನ್ನು ನೀಡಲಾಯಿತು.  ಋತುರಾಜ್ ಈ ಋತುವಿನ ಐಪಿಎಲ್‌ನಲ್ಲಿ (IPL) ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು.

ಇದನ್ನೂ ಓದಿ : ಮತ್ತೊಂದು ಪಂದ್ಯದಿಂದ Virat Kohli ಹೊರಕ್ಕೆ, ಟೀಂ ಇಂಡಿಯಾದ 34ನೇ ಟೆಸ್ಟ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ KL Rahul

2. ರವೀಂದ್ರ ಜಡೇಜಾ :
ಎಂಎಸ್ ಧೋನಿ (MS Dhoni) ನಿವೃತ್ತಿಯ ನಂತರ ಸಿಎಸ್‌ಕೆ ನಾಯಕತ್ವಕ್ಕೆ ರವೀಂದ್ರ ಜಡೇಜಾ (Ravindra Jadeja) ದೊಡ್ಡ ಸ್ಪರ್ಧಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸ್ವತಃ ಧೋನಿ ಕೂಡ ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK Captain)  ತಂಡದ ನಾಯಕರಾಗಲು ರವೀಂದ್ರ ಜಡೇಜಾ ಪ್ರಬಲ ಸ್ಪರ್ಧಿ ಎಂದೇ ಹೇಳಬಹುದು. ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ,  ಮುಂದಿನ ದಿನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಬಹುದು. ಅತ್ಯುತ್ತಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಪರಿಣತಿ ಹೊಂದಿರುವ ರವೀಂದ್ರ ಜಡೇಜಾ ಸಿಎಸ್‌ಕೆಯಲ್ಲಿ ಧೋನಿಯ ಉತ್ತರಾಧಿಕಾರಿಯಾಗುವಲ್ಲಿ ಮುಂಚೂಣಿಯಲ್ಲಿದ್ದಾರೆ. 

ಇದನ್ನೂ ಓದಿ : ಟೀಂ ಇಂಡಿಯಾದ ಈ ಆಟಗಾರನಿಗೆ ಭಾರೀ ಅನ್ಯಾಯ, ಒಂದೇ ಸರಣಿಯ ಮೂಲಕ ತಂಡದಿಂದಲೇ ಕೈ ಬಿಟ್ಟ ಆಯ್ಕೆ ಮಂಡಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News