Weekly Horoscope: ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಬಂಪರ್ ಧನಲಾಭ

Weekly Horoscope August 19th to August 25th: ಆಗಸ್ಟ್ 19ರಿಂದ ಆಗಸ್ಟ್ 25ರವರೆಗೆ ಈ ವಾರ ಶುಭಕರ ಯೋಗಗಳಲ್ಲಿ ಒಂದಾದ ತ್ರಿಗ್ರಾಹಿ ಯೋಗ ನಿರ್ಮಾಣವಾಗಿದೆ. ಈ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Aug 19, 2024, 07:35 AM IST
  • ವೃಷಭ ರಾಶಿಯವರಿಗೆ ಈ ವಾರ ಆರ್ಥಿಕ ಸಮೃದ್ಧಿಯನ್ನು ತರಲಿದೆ.
  • ಈ ವಾರ ಸಿಂಹ ರಾಶಿಯಲ್ಲಿಯೇ "ತ್ರಿಗ್ರಾಹಿ ಯೋಗ" ರಚನೆಯಾಗಿರುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ.
  • ಕನ್ಯಾ ರಾಶಿಯವರಿಗೆ ಈ ವಾರ ಕೆಲಸದ ಸ್ಥಳದಲ್ಲಿ ಪ್ರಗತಿ ಕಂಡು ಬರಲಿದೆ.
Weekly Horoscope: ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಬಂಪರ್ ಧನಲಾಭ  title=

Varabhavishya in Kannada From August 19th to August 25th: ಶ್ರಾವಣ ಮಾಸದ ಮೂರನೇ ವಾರದಲ್ಲಿ ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯಲ್ಲಿದ್ದಾನೆ. ಕಳೆದ ವಾರ ಸ್ವ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಶುಕ್ರ ಮತ್ತು ಬುಧರೊಟ್ಟಿಗೆ ಸೇರಿ ತ್ರಿಗ್ರಾಹಿ ಯೋಗ ನಿರ್ಮಾಣವಾಗಿದೆ. ಇದರ ಪ್ರಭಾದಿಂದಾಗಿ ಈ ವಾರ ಕೆಲವು ರಾಶಿಯ ಜನರಿಗೆ ವೃತ್ತಿ ವ್ಯವಹಾರದಲ್ಲಿ ಬಂಪರ್ ಲಾಭ ದೊರೆಯಲಿದ್ದರೆ, ಇನ್ನೂ ಕೆಲವು ರಾಶಿಯವರಿಗೆ ಹಣದ ಹರಿವು ಹೆಚ್ಚಾಗಿ ಖಜಾನೆ ತುಂಬಲಿದೆ. ಈ ವಾರ ನಿಮ್ಮ ಭವಿಷ್ಯ ಹೇಗಿದೆ. ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಶ್ರಾವಣ ಮಾಸದ ಮೂರನೇ ವಾರ ಮೇಷ ರಾಶಿಯ ಜನರು ತಮ್ಮ ವೃತ್ತಿ ಬದುಕಿನಲ್ಲಿ ಸುಧಾರಣೆಗಳನ್ನು ನೋಡುತ್ತಾರೆ ಮತ್ತು ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಈ ವಾರ ಪ್ರತಿ ಕೆಲಸದಲ್ಲೂ ನಿಮಗೆ ನಿಮ್ಮ ಕುಟುಂಬದಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಪ್ರಯಾಣವು ಯಶಸ್ವಿಯಾಗಲಿದ್ದು, ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿದರಲಿದೆ. ಹಣಕಾಸಿನ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಅದರಂತೆ ಈ ವಾರ ನಿಮ್ಮ ವೆಚ್ಚಗಳು ಕೂಡ ಹೆಚ್ಚಳವಾಗುವ ಸಂಭವವಿದೆ. ಹೆಚ್ಚು ಮನೆಯಿಂದ ಹೊರಗಿರುವವರು ಆರೋಗ್ಯದ ತೊಂದರೆಗಳನ್ನು ಅನುಭವಿಸಬೇಕಾಗಬಹುದು.  

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರಿಗೆ ಈ ವಾರ ಆರ್ಥಿಕ ಸಮೃದ್ಧಿಯನ್ನು ತರಲಿದೆ. ಹಬ್ಬಗಳಿಗಾಗಿ ಶಾಪಿಂಗ್‌ನಲ್ಲಿ ನಿರತರಾಗುವಿರಿ. ವ್ಯವಹಾರ ಸಂಬಂಧಿತ ಪ್ರಯಾಣಗಳಲ್ಲಿ ಯಶಸ್ಸನ್ನು ಸಾಧಿಸಲಾಗುತ್ತದೆ ಮತ್ತು ಶುಭ  ಸಮಾಚಾರಗಳನ್ನು ಕೇಳುವಿರಿ. ಈ ವಾರಾಂತ್ಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಪಾರ್ಟಿ ಮೂಡ್‌ನಲ್ಲಿರುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಸಂತೋಷದ ಸುದ್ದಿಗಳನ್ನು ಸ್ವೀಕರಿಸುವಿರಿ. ಕುಟುಂಬದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ನೀವು ಸ್ವಲ್ಪ ಪ್ರಯತ್ನ ಮಾಡಿದರೂ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಬಹುದು. ಯಾವುದೇ ವಿಚಾರದಲ್ಲಿ ಅಹಂಕಾರವನ್ನು ತಪ್ಪಿಸುವುದರಿಂದ ಏಳ್ಗೆಯನ್ನು ಕಾಣುವಿರಿ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ವಾರವು ಅತ್ಯುತ್ತಮವಾಗಿದೆ. ನಿಮ್ಮ ವೃತ್ತಿ ವ್ಯವಹಾರದಲ್ಲಿ ತಂದೆಯ ಸಹಕಾರದಿಂದ ಪ್ರಗತಿಯನ್ನು ಕಾಣುವಿರಿ. ಸಂಪತ್ತು ಹೆಚ್ಚಳಕ್ಕೆ ಶುಭ ಅವಕಾಶಗಳಿವೆ. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದಿಂದ ಬೆಂಬಲ ಇರುತ್ತದೆ. ನೀವು ದೀರ್ಘ ಸಮಯದಿಂದ ವೃತ್ತಿ ಸಂಬಂಧಿತ ಕ್ಷೇತ್ರದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಆದಾಗ್ಯೂ, ಪಾಲುದಾರಿಕೆ ವ್ಯವಹಾರ ಮಾಡುವವರು ಈ ವಾರ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ, ತೊಂದರೆಗಳು ಉಲ್ಬಣಿಸಬಹುದು. ಈ ವಾರ ನೀವು ಯಾವುದೇ ಪ್ರವಾಸವನ್ನು ಯೋಜಿಸಿದ್ದರೆ ಇದನ್ನು ಮುಂದೂಡುವುದು ಒಳ್ಳೆಯದು.  

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯವರಿಗೆ ಎಲ್ಲಾ ಆಯಾಮಗಳಿಂದಲೂ ಇದು ಲಾಭದಾಯಕ ವಾರ. ನಿಮ್ಮ ಯೋಜನೆಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ ಮತ್ತು ಕೆಲಸದ ಸ್ಥಳದಲ್ಲಿ ಕೆಲವು ಪ್ರಮುಖ ಕೆಲಸವನ್ನು ನಿಮಗೆ ನಿಯೋಜಿಸಬಹುದು. ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಇರುತ್ತದೆ. ಹೂಡಿಕೆಗಳಿಂದ ಭವಿಷ್ಯದಲ್ಲಿ ಲಾಭವನ್ನು ಗಳಿಸಬಹುದು. ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಬಂಪರ್ ಲಾಭವನ್ನು ಗಳಿಸುವಿರಿ. ವ್ಯವಹಾರ ಸಂಬಂಧಿತ ಪ್ರಯಾಣಗಳಿಂದ ಶುಭ ಫಲಗಳನ್ನು ಕಾಣುವಿರಿ. ಪ್ರೀತಿಪಾತ್ರರ ಜೊತೆ ಪ್ರಯಾಣವು ಆಹ್ಲಾದಕರವಾಗಿರುತ್ತದೆ.  

ಇದನ್ನೂ ಓದಿ- ಒಂಬತ್ತು ದಶಕಗಳ ಬಳಿಕ ರಕ್ಷಾಬಂಧನದಲ್ಲಿ ಶನಿ-ಚಂದ್ರರ ಸಂಯೋಗದಿಂದ ರಾಜಯೋಗ: ನಾಲ್ಕು ರಾಶಿಯವರಿಗೆ ಜಾಕ್‌ಪಾಟ್  

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಈ ವಾರ ಸಿಂಹ ರಾಶಿಯಲ್ಲಿಯೇ "ತ್ರಿಗ್ರಾಹಿ ಯೋಗ" ರಚನೆಯಾಗಿರುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಶುಭ ಫಲಗಳನ್ನು ಪಡೆಯುವಿರಿ. ಯೋಜಿತ ಕೆಲಸಗಳಲ್ಲಿ ನಿರೀಕ್ಷಿತ ಫಲಗಳನ್ನು ಪಡೆಯುವಿರಿ, ಹೂಡಿಕೆಗಳಿಂದ ಲಾಭವನ್ನು ಪಡೆಯುತ್ತೀರಿ. ಯಾವುದೇ ಹೂಡಿಕೆಯ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ವಿಚಾರಗಳಲ್ಲಿ ಸುಧಾರಣೆ ಕಂಡು ಬರಲಿದೆ.  ಪ್ರಮುಖ ಕೆಲಸಗಳಲ್ಲಿ ಯಾವುದೇ ರೀತಿಯ ಅಜಾಗೂರಕತೆಯನ್ನು ತಪ್ಪಿಸಿ. ಆದಾಗ್ಯೂ, ವಾರಾಂತ್ಯವು ನಿಮಗೆ ಶುಭ ಸುದ್ದಿಯನ್ನು ನೀಡಲಿದೆ.  

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯವರಿಗೆ ಈ ವಾರ ಕೆಲಸದ ಸ್ಥಳದಲ್ಲಿ ಪ್ರಗತಿ ಕಂಡು ಬರಲಿದೆ. ವೃತ್ತಿ ರಂಗದಲ್ಲಿ ನಿಮ್ಮ ಯೋಜನೆಗಳಲ್ಲಿ ಯಶಸ್ಸನ್ನು ಕಾಣುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ. ಆರ್ಥಿಕ ವಿಷಯಗಳಲ್ಲಿ ತಾಯಿಯ ಸಹಾಯದಿಂದ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುವಿರಿ. ಈ ವಾರ ನೀವು ಬಹಳ ಸಮಯದಿಂದ ಯೋಜಿಸುತ್ತಿದ್ದ ಪ್ರಯಾಣ ಕೈಗೊಳ್ಳಲು ಸಾಧಯ್ವಾಗುತ್ತದೆ. ಪ್ರವಾಸಗಳು ಸಿಹಿ ನೆನಪುಗಳಿಂದ ತುಂಬಿರುತ್ತವೆ. ಆದಾಗ್ಯೂ, ಮಹತ್ತರ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರವನ್ನು ಮುಂದೂಡಿದರೆ ಉತ್ತಮ. ವಾರದ ಕೊನೆಯಲ್ಲಿ, ಸಂತೋಷ ಮತ್ತು ಸಮೃದ್ಧಿಗಾಗಿ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ.

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯವರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ಕೆಲವು ಹೊಸ ಯೋಜನೆಗಳ ಕಡೆಗೆ ನಿಮ್ಮ ಒಲವು ಹೆಚ್ಚಾಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನು ಕಾಣುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತುಗಳೇ ನಿಮ್ಮ ಪ್ರಮುಖ ಬಂಡವಾಳವಾಗಿದ್ದು ಎಲ್ಲರನ್ನೂ ನಿಮ್ಮತ್ತ ಆಕರ್ಷಿಸುವಿರಿ. ಈ ವಾರ ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಪ್ರಯಾಣದ ಮೂಲಕ ಮಧ್ಯಮ ಯಶಸ್ಸನ್ನು ಸಾಧಿಸುವಿರಿ.  ವಾರಾಂತ್ಯದಲ್ಲಿ ಪ್ರೀತಿಪಾತ್ರರ ಜೊತೆಗೆ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ.  

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯವರಿಗೆ "ತ್ರಿಗ್ರಾಹಿ ಯೋಗ"ದ ಫಲವಾಗಿ ಆರ್ಥಿಕ ವಿಷಯಗಳು ಶುಭಕರಾಗಿರಲಿವೆ. ಹಣಕಾಸಿನ ಲಾಭಕ್ಕಾಗಿ ಬಲವಾದ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ. ಕೆಲಸದ ಸ್ಥಳದಲ್ಲಿ ಪ್ರಗತಿ ಇರುತ್ತದೆ ಮತ್ತು ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ. ಸಂತೋಷ ಮತ್ತು ಸಾಮರಸ್ಯದ ಜೀವನವನ್ನು ಅನುಭವಿಸುವಿರಿ. ದಂಪತಿಗಳ ಮಧ್ಯೆ ಪ್ರೀತಿ ಬಲಗೊಳ್ಳುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯ ಇರುತ್ತದೆ. ನೀವು ಪ್ರಯಾಣದ ಮೂಲಕ ಯಶಸ್ಸನ್ನು ಸಾಧಿಸುವಿರಿ ಮತ್ತು ಭಾವನಾತ್ಮಕವಾಗಿ ಸಂತೋಷವಾಗಿರುತ್ತೀರಿ.ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಮೋಜು-ಮಸ್ತಿಯನ್ನು ಆನಂದಿಸಬಹುದು. 

ಇದನ್ನೂ ಓದಿ- ಶನಿಯ ನಕ್ಷತ್ರ ಸಂಕ್ರಮಣ: ಈ 3 ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯಾಗಲಿದೆ!

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರಿಗೆ ಶ್ರಾವಣ ಮಾಸದ ಮೂರನೇ ವಾರ ಲಾಭದಾಯಕ ಎಂತಲೇ ಹೇಳಬಹುದು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದ್ದು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಈ ವಾರ ಅನುಕೂಲಕರವಾಗಿದೆ ಮತ್ತು ಆರ್ಥಿಕ ಲಾಭಕ್ಕಾಗಿ ಮಂಗಳಕರ ಅವಕಾಶಗಳು ಉದ್ಭವಿಸುತ್ತವೆ. ಪಿತೃ ಸಮಾನರಿಂದ ಸಹಾಯ ದೊರೆಯಲಿದ್ದು ಹಣದ ಹೊಳೆಯೇ ಹರಿಯಲಿದೆ. ಸ್ತ್ರೀ ಸಹಾಯದಿಂದ ನೀವು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ. ಪ್ರಯಾಣವು ಸಂತೋಷದಿಂದ ಕೂಡಿರಲಿದ್ದು ಲಾಭದಾಯಕವೂ ಆಗಿರಲಿದೆ. ಕುಟುಂಬದಲ್ಲಿ ಅಹಂಕಾರದ ಸಂಘರ್ಷಗಳನ್ನು ತಪ್ಪಿಸುವುದು ಉತ್ತಮ.  

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ವಾರವು ಕೀರ್ತಿ, ಗೌರವವನ್ನು ಹೆಚ್ಚಿಸಲಿದೆ. ವೃತ್ತಿ ಬದುಕಿನಲ್ಲಿ ಕೆಲವು ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ಆದಾಗ್ಯೂ, ಕಚೇರಿಯಲ್ಲಿ ಯಾರೊಂದಿಗಾದರೂ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಇದರಿಂದ ಒತ್ತಡಗಳು ಹೆಚ್ಚಾಗಲಿವೆ. ಆದಾಗ್ಯೂ, ಕೌಟುಂಬಿಕ ವಿಚಾರಗಳು ನಿಮಗೆ ಸುಖ-ಸಂತೋಷದಿಂದ ಕೂಡಿರಲಿವೆ.  ವಾರದ ಕೊನೆಯಲ್ಲಿ, ನಿಮ್ಮ ಪ್ರೀತಿಪಾತ್ರರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದೀರಿ. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಹೊಸ ಎತ್ತರವನ್ನು ಏರುವಿರಿ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯ ಜನರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ. ಯಾವುದೇ ಹೊಸ ಯೋಜನೆಯು ನಿಮಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ಕೀರ್ತಿ, ಗೌರವ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ ಮತ್ತು ಈ ವಾರ ನೀವು ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ. ಪ್ರತಿ ವಿಚಾರದಲ್ಲೂ ಕುಟುಂಬದಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಜೀವನದಲ್ಲಿ ಸಂತೋಷವಾಗಿರುತ್ತೀರಿ. ಸ್ವಂತ ಬಿಸಿನೆಸ್ ಮಾಡುವವರು ಪ್ರಯಾಣದಿಂದ ಶುಭ ಫಲಿತಾಂಶಗಳನ್ನು ಕಾಣುವಿರಿ.  

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ಕುಟುಂಬಸ್ಥರು ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಕುಟುಂಬದ ಸಹವಾಸದಲ್ಲಿ ಆಹ್ಲಾದಕರ ಸಮಯವನ್ನು ಕಳೆಯುತ್ತಾರೆ. ಪ್ರೀತಿಯ ಜೀವನದಲ್ಲಿ ಸಂತೋಷವು ಹೆಚ್ಚಾಗಲಿದೆ. ವಿವಾಹಿತರು ನಿಮ್ಮ ಸಂಗಾತಿಯೊಂದಿಗೆ ನೀವು ಶಾಪಿಂಗ್ ಮೂಡ್‌ನಲ್ಲಿರುತ್ತೀರಿ. ನೀವು ಉದ್ಯೋಗ ಬದಲಾವಣೆಗಾಗಿ ಯೋಚಿಸುತ್ತಿದ್ದರೆ "ತ್ರಿಗಾಹಿ ಯೋಗ"ವು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಜೊತೆಗೆ ಖರ್ಚುಗಳು ಕೂಡ ಅಧಿಕವಾಗಲಿದೆ.  ಪಾಲುದಾರಿಕೆ ವ್ಯವಹಾರದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News