ಫೆ. 13 ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು

ಫೆಬ್ರವರಿ 13ರವರೆಗೆ, ಸೂರ್ಯನು ಮಕರ ರಾಶಿಯಲ್ಲಿಯೇ ಇರಲಿದ್ದಾನೆ.   ಇದಾದ ನಂತರ ಸೂರ್ಯನು ಶನಿಯ ಮೂಲ ರಾಶಿಯಾದ ಕುಂಭವನ್ನು ಪ್ರವೇಶಿಸಲಿದ್ದಾನೆ.

Written by - Ranjitha R K | Last Updated : Jan 19, 2023, 04:20 PM IST
  • ಸೂರ್ಯ ಸಂಕ್ರಮಣ ಜ್ಯೋತಿಷ್ಯದಲ್ಲಿ ಬಹಳ ಮುಖ್ಯ
  • ಫೆಬ್ರವರಿ 13ರವರೆಗೆ ಮಕರ ರಾಶಿಯಲ್ಲಿಯೇ ಇರಲಿದ್ದಾನೆ ಆದಿತ್ಯ
  • ಫೆಬ್ರವರಿ 13 ರವರೆಗೆ ಈ ರಾಶಿಯವರಿಗೆ ಶುಭ
ಫೆ. 13 ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು  title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯ ಸಂಕ್ರಮಣ  ನಭೋ ಮಂಡಲದಲ್ಲಿ ಘಟಿಸುವ ಬಹು ದೊಡ್ಡ ಬದಲಾವಣೆಯಾಗಿದೆ. ಇದು ಎಲ್ಲಾ 12 ರಾಶಿಯವರ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಜನವರಿ 14, 2023 ರಂದು, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಶನಿಯ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ.  ಫೆಬ್ರವರಿ 13ರವರೆಗೆ, ಸೂರ್ಯನು ಮಕರ ರಾಶಿಯಲ್ಲಿಯೇ ಇರಲಿದ್ದಾನೆ.   ಇದಾದ ನಂತರ ಸೂರ್ಯನು ಶನಿಯ ಮೂಲ ರಾಶಿಯಾದ ಕುಂಭವನ್ನು ಪ್ರವೇಶಿಸಲಿದ್ದಾನೆ. ಕುಂಭ ರಾಶಿಯಲ್ಲಿ ಸೂರ್ಯ ಸಂಕ್ರಮಣವಾಗುವವರೆಗೆ  ಮೂರು ರಾಶಿಯವರಿಗೆ ಶುಭವಾಗಿರುತ್ತದೆ. 

ಫೆಬ್ರವರಿ 13 ರವರೆಗೆ ಈ ರಾಶಿಯವರಿಗೆ ಶುಭ :
ಮೇಷ ರಾಶಿ : ಮೇಷ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಅನೇಕ ರೀತಿಯಲ್ಲಿ ಲಾಭವಾಗುವುದು. ವಿಶೇಷವಾಗಿ ವೃತ್ತಿಯ ವಿಷಯದಲ್ಲಿ, ಸೂರ್ಯನು ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಫೆಬ್ರವರಿ 13 ರವರೆಗಿನ ಸಮಯವು ಉದ್ಯೋಗ ವೃತ್ತಿ ಮತ್ತು ವ್ಯಾಪಾರ ವರ್ಗದವರಿಗೆ ಮಂಗಳಕರವಾಗಿರುತ್ತದೆ. ವ್ಯಾಪಾರ ವಿಸ್ತರಣೆಗೆ ಈ ಸಮಯ ಉತ್ತಮವಾಗಿದೆ.  ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.  

ಇದನ್ನೂ ಓದಿ : Surya Gochar 2023 : 2023 ರಲ್ಲಿ 12 ಬಾರಿ ಸೂರ್ಯ ಗೋಚರ : ಎಲ್ಲಾ ರಾಶಿಯವರ ಮೇಲೆ ಕೆಟ್ಟ ಪರಿಣಾಮ!

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಕೂಡಾ ಸೂರ್ಯ ಸಂಚಾರವು  ಶುಭವಾಗಿರುತ್ತದೆ. ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯನು ಮಕರ ರಾಶಿಯಲ್ಲಿರುವಾಗ ಸಿಂಹ ರಾಶಿಯವರು ತಮ್ಮ ಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಸಿಗುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಕುಟುಂಬದಲ್ಲಿಯೂ ಸಂತೋಷ ಇರುತ್ತದೆ. 

ಮೀನ ರಾಶಿ : ಸೂರ್ಯನ ರಾಶಿಯಲ್ಲಿ ಆಗುವ ಬದಲಾವಣೆಯು ಮೀನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಗುರು ಮತ್ತು ಸೂರ್ಯ ಮೀನ ರಾಶಿಯ ಅಧಿಪತಿ ಗ್ರಹಗಳು. ಈ ಹಿನ್ನೆಲೆಯಲ್ಲಿ ಸೂರ್ಯನು ಮೀನ ರಾಶಿಯವರ ಮೇಲೆ ವಿಶೇಷ ಆಶೀರ್ವಾದ ಇಟ್ಟಿರುತ್ತಾನೆ. ಫೆಬ್ರವರಿ 13 ರವರೆಗೆ ಸೂರ್ಯನು ಮೀನ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವನ್ನು ನೀಡುತ್ತಾನೆ. ಇವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವ್ಯಾಪಾರಸ್ಥರ ಆದಾಯದಲ್ಲಿ ಕೂಡಾ ಹೆಚ್ಚಳವಾಗಬಹುದು. 

ಇದನ್ನೂ ಓದಿ : ಶನಿ ಸಂಕ್ರಮಣದಿಂದ ರೂಪುಗೊಂಡ ಶಶ ಮಹಾಪುರುಷ ರಾಜಯೋಗ; ಈ ರಾಶಿಯವರಿಗೆ ಸುಖ-ಸಂಪತ್ತು, ಧನಪ್ರಾಪ್ತಿ!

 

( ಸೂಚನೆ :ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News