president of KPCC: ರಾಜ್ಯದಲ್ಲಿ ನಿರೀಕ್ಷೆಯಂತೆ ಲೋಕಸಭಾ ಚುನಾವಣೆಯು ಮುಗಿದಿದ್ದು, ಇದೀಗ ಮತ್ತೆ ಡಿಸಿಎಂ ವಿಸ್ತೀರ್ಣ ಕೂಗು ಬಲವಾಗಿ ಕೇಳಿಬರುತ್ತಿದೆ. ಜಾತಿವಾರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವಂತೆ ಚರ್ಚೆಗಳ ನಡುವೆ ಅಥಣಿ ಶಾಸಕ ಲಕ್ಷ್ಮಣ ಸವದಿಯವರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಒಲಿಯುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ..
Lakshman Savadi entry to Film Industry: ಈಗಾಗಲೇ ಸಾಕಷ್ಟು ಜನ ರಾಜಕಾರಣಿಗಳು ಸಿನಿ ರಂಗಕ್ಕೆ ಕಾಲಿಟ್ಟಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಅಥಿತಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆ ಪಟ್ಟಿಗೆ ಈಗ ಮತ್ತೊಂದು ಹೆಸರು ಸೇರ್ಪೆಡೆಯಾಗಿದೆ.
ಅಥಣಿ ಕಾಗವಾಡ ವಿಧಾನಸಭೆ ಸೋಲು ಸ್ವಾಗತ ಬಯಸಿದ ರಮೇಶ್ ಜಾರಕಿಹೊಳಿ. ಅಥಣಿಯಲ್ಲಿ ಮಾದ್ಯಮಗಳಿಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ. ಅಥಣಿ ಇವತ್ತಿನ ಬೇಟಿ ಮತ್ತೆ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡುತ್ತೇವೆ. ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗೆ ಬಿಜೆಪಿ ತೈಯಾರಿ ಮಾಡುತ್ತಿದ್ದೇವೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ನಾವು. ಅಥಣಿಯಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ. ನಾವು ಸೋಲನ್ನು ಸ್ವೀಕಾರ ಮಾಡುತ್ತೇವೆ. ನಾವು ನೂತನ ಶಾಸಕ ಸವದಿಗೆ ಅಭಿನಂದನೆ ಸಲ್ಲಿಸುತ್ತೇನೆ ಸವದಿ ಅಭಿವೃದ್ಧಿ ಗೋಸ್ಕರ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದಾರೆ. ಅವರು ಅಭಿವೃದ್ಧಿ ಮಾಡಲಿ ನಾವು ಸಹಕಾರ ಕೊಡುತ್ತೇವೆ.
ಬೆಳಗಾವಿ ಬಂಡಾಯ ಬೆಂಕಿಯಲ್ಲಿ ಕಮಲ ಕಮರುತ್ತಾ..?
ಅಥಣಿ ಅಗ್ನಿಜ್ವಾಲೆಯಿಂದ ಕೈ ಬಿಸಿ ಮಾಡಿಕೊಳ್ಳುತ್ತಾ..?
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಲಕ್ಷ್ಮಣ್ ಸವದಿ ರಾಜೀನಾಮೆ
ಅಧಿಕೃತವಾಗಿ ಘೋಷಣೆ ಮಾಡಿದ ಮಾಜಿ ಡಿಸಿಎಂ
ಮೋದಿಯವರ ಟಕ್ಕರ್ ಆಗಲಿ, ಅಮಿತ್ ಶಾ ಟಕ್ಕರ್ ಆಗಲಿ ನಮ್ಮತ್ರ ನಡೆಯೊಲ್ಲ. ಕರ್ನಾಟಕದ ಜನ ಬುದ್ದಿವಂತರಿದ್ದಾರೆ. ರಾಮನಗರ ಜಿಲ್ಲೆಯ ಜನ ಎಲ್ಲರನ್ನೂ ನೋಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ ಆರ್.ಅಶೋಕ್ ರನ್ನ ಕನಕಪುರ ಅಭ್ಯರ್ಥಿ ಮಾಡಿದೆ. ಏನಾಗುತ್ತೋ ನೋಡೊಣ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಪಕ್ಷದ ಮೇಲೆ ಈ ಮೂವರು ನಾಯಕರು ಹರಿಹಾಯ್ದಿದ್ದಾರೆ. ಇದರ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಒಂದು ವೇಳೆ ಗಾಲಿ ಜನಾರ್ಧನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಈ ಮೂವರು ದಿಗ್ಗಜರು ಸೇರಿದಂತೆ ಅಸಮಾಧಾನಿತ ಬಿಜೆಪಿ ನಾಯಕರು ಸಾಥ್ ನೀಡಿದ್ರೆ, ಈ ಭಾಗದಲ್ಲಿ ಬಿಜೆಪಿ ಗೆಲ್ಲುವು ಕಷ್ಟಕರವಾಗಲಿದೆ.
189 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸಿದೆ. ಅಲ್ಲದೆ, ಈ ಬಾಗಿ ಬರೋಬ್ಬರಿ 52 ಹೊಸ ಮುಖಗಳಿಗೆ ಕಮಲ ಪಾಳಯ ಮಣೆ ಹಾಕಿದೆ. ಇದರ ನಡುವೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನ ತುಂಬಿದ್ದ ದಿಗ್ಗಜ ನಾಯಕರಿಗೆ ಟಿಕೆಟ್ ನೀಡದೇ ಹೈಕಮಾಂಡ್ ಶಾಕ್ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.