ಈ ರಾಶಿಯವರಿಗೆ ಸಾಕು ಸಾಕು ಎನ್ನುವಷ್ಟು ಧನ ಕರುಣಿಸಲಿದ್ದಾನೆ ಸೂರ್ಯ

Surya Gochar 2023 Effect:ಸೂರ್ಯನು ಮಾರ್ಚ್ 15 ರಂದು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದನ್ನು ಮೀನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನ ಈ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ  ಜೀವನದ ಮೇಲೆ ಶುಭ ಮತ್ತು ಅಶುಭ ರೂಪದಲ್ಲಿ ಗೋಚರಿಸುತ್ತದೆ. 

Written by - Ranjitha R K | Last Updated : Mar 2, 2023, 03:36 PM IST
  • ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ.
  • ಮಾರ್ಚ್ 15 ರಂದು ಮೀನ ರಾಶಿಗೆ ಸೂರ್ಯನ ಪ್ರವೇಶ
  • ಸೂರ್ಯನ ರಾಶಿ ಬದಲಾವಣೆಯಿಂದ ಮೂರು ರಾಶಿಯವರಿಗೆ ವಿಶೇಷ ಲಾಭ
ಈ ರಾಶಿಯವರಿಗೆ ಸಾಕು ಸಾಕು ಎನ್ನುವಷ್ಟು ಧನ ಕರುಣಿಸಲಿದ್ದಾನೆ ಸೂರ್ಯ title=

Surya Gochar 2023 Effect : ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು ಮಾರ್ಚ್ 15 ರಂದು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದನ್ನು ಮೀನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನ ಈ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ  ಜೀವನದ ಮೇಲೆ ಶುಭ ಮತ್ತು ಅಶುಭ ರೂಪದಲ್ಲಿ ಗೋಚರಿಸುತ್ತದೆ. ಅದರಲ್ಲೂ ಮೂರು ರಾಶಿಯವರಿಗೆ ವಿಶೇಷ ಲಾಭವಾಗಲಿದೆ. 

ಕರ್ಕಾಟಕ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೀನ ರಾಶಿಗೆ ಸೂರ್ಯನ ಪ್ರವೇಶವು ಈ ರಾಶಿಯವರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಪೂರ್ಣವಾಗದೆ ಉಳಿದುಕೊಂಡಿರುವ ಕೆಲಸಗಳು ಈ ಅವಧಿಯಲ್ಲಿ ದಡ ಸೇರಲಿವೆ. ಈ ಅವಧಿಯಲ್ಲಿ, ಕರ್ಕ ರಾಶಿಯವರ ಅದೃಷ್ಟ ಬೆಳಗಲಿದೆ. ಕೆಲಸ ಮತ್ತು ವ್ಯವಹಾರದ ಸಲುವಾಗಿ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. 

ಇದನ್ನೂ ಓದಿ : Mars Transit 2023: ಮಂಗಳ ಸಂಕ್ರಮಣದಿಂದ ಈ ರಾಶಿಯ ಜನರು ಇನ್ಮುಂದೆ ಎಂತಹದ್ದೇ ಕೆಲಸಕ್ಕೆ ಮಾಡಿದರೂ ಅಲ್ಲಿ ಯಶಸ್ಸು ಖಂಡಿತ!

ಮಿಥುನ ರಾಶಿ 
ಮಿಥುನ ರಾಶಿಯವರಿಗೆ ಕೂಡಾ ಸೂರ್ಯನ ಸಂಚಾರ ಅನುಕೂಲಕರವಾಗಿರುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು, ಈ ಅವಧಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕೆಲಸ ಮಾಡುವ ಜನರು ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಲಾಭವಾಗಲಿದೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಯೂ ಇದೆ.

ವೃಷಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯವರು ಈ ಅವಧಿಯಲ್ಲಿ ವಿಶೇಷ ಲಾಭಗಳನ್ನು ಪಡೆಯಲಿದ್ದಾರೆ. ಈ ರಾಶಿಯ ಜನರಿಗೆ ಸೂರ್ಯನ ಸಂಚಾರ  ಬಹಳ ಮಂಗಳಕರವಾಗಿ ಪರಿಣಮಿಸಲಿದೆ. ಈ ಸಮಯದಲ್ಲಿ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ, ವ್ಯಕ್ತಿಯ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. 

ಇದನ್ನೂ ಓದಿ :  Astro Tips: ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ, ಮನೆಗೆ ಬಡತನ & ದಾರಿದ್ರ್ಯ ಕಾಡುತ್ತೆ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News