ವಿಶೇಷ ದಿನದಂದು ಜನ್ಮಾಷ್ಟಮಿ ಆಚರಣೆ: ಶ್ರೀಕೃಷ್ಣ ಆರಾಧನೆ ಹೀಗೆ ಮಾಡಿ ಶುಭಪ್ರಾಪ್ತಿ ಖಂಡಿತ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣನನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ. ಇನ್ನು ಈ ಬಾರಿಯ ಜನ್ಮಾಷ್ಟಮಿಯು ಇನ್ನಷ್ಟು ವಿಶೇಷತೆಯನ್ನು ಹೊತ್ತು ತರಲಿದ್ದು, ಅದ್ದೂರಿಯಾಗಿ ಮಾಡಲಾಗುತ್ತಿದೆ. ಹೀಗಾಗಿ ಶುಭ ಮುಹೂರ್ತದ ಪ್ರಕಾರ ಪೂಜೆಯನ್ನು ಮಾಡಬೇಕು. ಈ ಬಾರಿ ಏನೆಲ್ಲಾ ವಿಶೇಷ ಕಾಕತಾಳೀಯಗಳು ಕಾಣಿಸಿಕೊಂಡಿವೆ ಎಂದು ತಿಳಿಯೋಣ. 

Written by - Bhavishya Shetty | Last Updated : Jul 12, 2022, 02:46 PM IST
  • ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ
  • ಶ್ರೀಕೃಷ್ಣನು ಭಾದ್ರಪದ ಮತ್ತು ರೋಹಿಣಿ ನಕ್ಷತ್ರದ ಅಷ್ಟಮಿ ದಿನಾಂಕದಂದು ಜನಿಸಿದ್ದಾನೆ
  • ಜನ್ಮಾಷ್ಟಮಿ ಶುಭ ಸಮಯ ಮತ್ತು ವಿಶೇಷ ಕಾಕತಾಳೀಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ
ವಿಶೇಷ ದಿನದಂದು ಜನ್ಮಾಷ್ಟಮಿ ಆಚರಣೆ: ಶ್ರೀಕೃಷ್ಣ ಆರಾಧನೆ ಹೀಗೆ ಮಾಡಿ ಶುಭಪ್ರಾಪ್ತಿ ಖಂಡಿತ title=
Shri Krishna Janmashtami

ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯು ವಿಶೇಷ ದಿನದಲ್ಲಿಆಚರಿಸಲಾಗುತ್ತಿದೆ. ಇನ್ನು ಜನ್ಮಾಷ್ಟಮಿಯನ್ನು ಹಿಂದೂ ಧರ್ಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಭಕ್ತರು ಉಪವಾಸವಿದ್ದು ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿ ಹಬ್ಬವು ಆಗಸ್ಟ್ 18, ಗುರುವಾರದಂದು ಬರುತ್ತಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀಕೃಷ್ಣನು ಭಾದ್ರಪದ ಮತ್ತು ರೋಹಿಣಿ ನಕ್ಷತ್ರದ ಅಷ್ಟಮಿ ದಿನಾಂಕದಂದು ಜನಿಸಿದ್ದಾನೆ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣನನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ. ಇನ್ನು ಈ ಬಾರಿಯ ಜನ್ಮಾಷ್ಟಮಿಯು ಇನ್ನಷ್ಟು ವಿಶೇಷತೆಯನ್ನು ಹೊತ್ತು ತರಲಿದ್ದು, ಅದ್ದೂರಿಯಾಗಿ ಮಾಡಲಾಗುತ್ತಿದೆ. ಹೀಗಾಗಿ ಶುಭ ಮುಹೂರ್ತದ ಪ್ರಕಾರ ಪೂಜೆಯನ್ನು ಮಾಡಬೇಕು. ಈ ಬಾರಿ ಏನೆಲ್ಲಾ ವಿಶೇಷ ಕಾಕತಾಳೀಯಗಳು ಕಾಣಿಸಿಕೊಂಡಿವೆ ಎಂದು ತಿಳಿಯೋಣ. 

ಇದನ್ನೂ ಓದಿ: ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ಸರ್ಕಾರವಿದೆ : ಸಿಎಂ ಬೊಮ್ಮಾಯಿ ಭರವಸೆ

ಜನ್ಮಾಷ್ಟಮಿ ಶುಭ ಸಮಯ ಮತ್ತು ವಿಶೇಷ ಕಾಕತಾಳೀಯ:
ಈ ಬಾರಿ ಜನ್ಮಾಷ್ಟಮಿಯಂದು ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಶ್ರೀ ಕೃಷ್ಣನ ಆಶೀರ್ವಾದ ಪಡೆಯಿರಿ. ಮಂಗಳಕರ ಸಮಯದಲ್ಲಿ ಪೂಜಿಸುವ ಮೂಲಕ ಭಕ್ತರಿಗೆ ಕೃಷ್ಣ ಪರಮಾತ್ಮನು ಆಶೀರ್ವಾದವನ್ನು ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಬಾರಿ ಆಗಸ್ಟ್ 17ರ ರಾತ್ರಿ 8.56ರಿಂದ 18ರ ರಾತ್ರಿ 8.41ರವರೆಗೆ ಅದೃಷ್ಟ ಯೋಗವಿದೆ. ಇನ್ನು ಆಗಸ್ಟ್ 18 ರಂದು ಅಭಿಜಿತ್ ಮುಹೂರ್ತವು 12:05 ರಿಂದ 12:56 ನಿಮಿಷಗಳವರೆಗೆ ಇರುತ್ತದೆ. ಜೊತೆಗೆ ಧ್ರುವ ಮುಹೂರ್ತವು ಆಗಸ್ಟ್ 18 ರಂದು ರಾತ್ರಿ 8.41 ರಿಂದ ಆಗಸ್ಟ್ 19 ರಂದು ರಾತ್ರಿ 8:59 ರವರೆಗೆ ಇರುತ್ತದೆ. ಇವೆಲ್ಲವೂ ಜನ್ಮಾಷ್ಟಮಿಯ ದಿನದಂದೇ ಇರುವುದರಿಂದ ಶುಭ ಮುಹೂರ್ತಗಳು ರಾರಾಜಿಸುತ್ತಿವೆ. ಈ ಸಮಯದಲ್ಲಿ ದೇವರನ್ನು ಪೂಜಿಸುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

ಶ್ರೀ ಕೃಷ್ಣ ಆರಾಧನೆ ಹೀಗೆ ಮಾಡಿ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನನ್ನು ಭಕ್ತಿ ಪೂರ್ವಕವಾಗಿ ಪೂಜಿಸಬೇಕು. ಹೀಗೆ ಆರಾಧನೆ ಮಾಡಿದರೆ ಶ್ರೀ ಕೃಷ್ಣನ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ. ಇನ್ನು ಜನ್ಮಾಷ್ಟಮಿ ದಿನದಂದು ಶ್ರೀ ಕೃಷ್ಣನ ಮೂರ್ತಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅಷ್ಟಗಂಧ ಶ್ರೀಗಂಧದ ತಿಲಕ, ಅಕ್ಷತೆ ಮತ್ತು ವಸ್ತ್ರವನ್ನು ತೊಡಿಸಿ. ಬಳಿಕ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ಸಮರ್ಪಿಸಿ. ಈ ಸಂದರ್ಭದಲ್ಲಿ ಕೃಷ್ಣನಿಗೆ ಸೀಮಿತವಾಗಿರುವ ವಿಶೇಷ ಮಂತ್ರಗಳನ್ನು ಪಠಿಸಿ. 

ಇದನ್ನೂ ಓದಿ: Death mystery: ಸಾಯುವ ಎರಡು ವಾರ ಮೊದಲೇ ದೇಹ ನೀಡುತ್ತೆ ಈ ಸಂಕೇತ!

ಈ ದಿನದಂದು ಶ್ರೀಕೃಷ್ಣನಿಗೆ ಪ್ರಿಯವಾದ ವೈಜಂತಿ ಹೂವುಗಳನ್ನು ಅರ್ಪಿಸಿ. ಜೊತೆಗೆ ಪ್ರಸಾದದಲ್ಲಿ ಪಂಚಾಮೃತವನ್ನು ಸಹ ಸೇರಿಸಿ. ತುಳಸಿ ಎಲೆಗಳನ್ನು ಕೃಷ್ಣನಿಗೆ ಅರ್ಪಿಸಲು ಮರೆಯಬೇಡಿ. ಏಕೆಂದರೆ ವಿಷ್ಣು ಸ್ವರೂಪವಾದ ಕೃಷ್ಣನಿಗೆ ತುಳಸಿ ಪ್ರಿಯವಾದ ಸ್ವತ್ತು. ಈ ದಿನ ಶ್ರೀ ಕೃಷ್ಣನಿಗೆ ಸಾತ್ವಿಕ ಆಹಾರವನ್ನು ಮಾತ್ರ ಅರ್ಪಿಸಿ. ಹೀಗೆ ಪೂಜೆ ಮಾಡುವುದರಿಂದ ಶ್ರೀಕೃಷ್ಣ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಮೇಲೆ ತನ್ನ ಅನುಗ್ರಹವನ್ನು ಸುರಿಸುತ್ತಾನೆ ಎಂಬ ನಂಬಿಕೆಯಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News