ಶನಿ ಕೋಪ ಶಮನಗೊಳಿಸಲು ಶ್ರಾವಣ ಮಾಸ ತುಂಬಾ ವಿಶೇಷ

ಆಷಾಢ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಷಾಢದ ನಂತರ ಶ್ರಾವಣ ಮಾಸ ಆರಂಭವಾಗುತ್ತದೆ. ಶ್ರಾವಣ ಮಾಸವನ್ನು ಪವಿತ್ರ ಮಾಸ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ಭಕ್ತರ ಸಮೂಹವೇ ಕಾಣಸಿಗುತ್ತದೆ. ಶ್ರಾವಣ ಶನಿವಾರಕ್ಕೂ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ಕೋಪವನ್ನು ತಣಿಸಬಹುದು ಎಂದು ಹೇಳಲಾಗುತ್ತದೆ.

Written by - Yashaswini V | Last Updated : Jul 14, 2022, 02:37 PM IST
  • ಶ್ರಾವಣ ಶನಿವಾರದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಶನಿಯ ಕೋಪದಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ.
  • ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ದೇವನು ಭಗವಾನ್ ಶಿವನ ಶಿಷ್ಯ.
  • ಶ್ರಾವಣ ಮಾಸದಲ್ಲಿ ಶನಿ ದೇವನನ್ನು ಪೂಜಿಸುವುದರಿಂದ ಶಿವನ ಆಶೀರ್ವಾದವೂ ದೊರೆಯುತ್ತದೆ ಎಂದು ನಂಬಲಾಗಿದೆ.
ಶನಿ ಕೋಪ ಶಮನಗೊಳಿಸಲು ಶ್ರಾವಣ ಮಾಸ ತುಂಬಾ ವಿಶೇಷ  title=
Shravana Shanivara

ಶನಿಯ ಕೋಪ ತಣಿಸಲು ಶ್ರಾವಣ ಮಾಸದ ಪರಿಹಾರಗಳು: ಶ್ರಾವಣ ಮಾಸವನ್ನು ಪವಿತ್ರ ಮಾಸ ಎಂದು ಪರಿಗಣಿಸಲಾಗಿದೆ. ಈ ತಿಂಗಳನ್ನು ಶಿವನ ನೆಚ್ಚಿನ ತಿಂಗಳು ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಶಿವನ ಆರಾಧನೆಯಿಂದ ಶಿವನ ಕೃಪೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಶನಿ ಕೋಪ ಶಮನಗೊಳಿಸಲು ಶ್ರಾವಣ ಮಾಸ ತುಂಬಾ ವಿಶೇಷ ಎಂದು ಹೇಳಲಾಗುತ್ತದೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ದೇವನು ಭಗವಾನ್ ಶಿವನ ಶಿಷ್ಯ. ಶ್ರಾವಣ ಮಾಸದಲ್ಲಿ ಶನಿ ದೇವನನ್ನು ಪೂಜಿಸುವುದರಿಂದ ಶಿವನ ಆಶೀರ್ವಾದವೂ ದೊರೆಯುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಶನಿದೇವನು ಶಿವನ ಭಕ್ತರಿಗೆ ತೊಂದರೆ ನೀಡುವುದಿಲ್ಲ ಎಂಬ ನಂಬಿಕೆ ಇದೆ. ಶನಿವಾರ ಶನಿದೇವನಿಗೆ ಮೀಸಲಾದ ದಿನ. ಶ್ರಾವಣ ಶನಿವಾರಕ್ಕೂ ವಿಶೇಷ ಮಹತ್ವವಿದೆ. ಶ್ರಾವಣ ಶನಿವಾರದಂದು ಉಪವಾಸ ಮಾಡುವುದರಿಂದ ಶನಿಯ ಕೋಪವನ್ನು ತಣಿಸಬಹುದು ಎಂಬುದು ನಂಬಿಕೆ. 

ಇದನ್ನೂ ಓದಿ- Surya Gochar 2022: ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ- ಈ ರಾಶಿಯವರಿಗೆ ಧನ ಹಾನಿ

ಶ್ರಾವಣ ಶನಿವಾರದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಶನಿಯ ಕೋಪದಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ. ಅದಕ್ಕಾಗಿ ಈ ಕೆಳಗಿನ ನಿಯಮಗಳು ತುಂಬಾ ಪ್ರಯೋಜನಕಾಗಿ ಎನ್ನಲಾಗಿದೆ...
*  ಶನಿದೇವನ ಆಶೀರ್ವಾದ ಪಡೆಯಲು, ಶ್ರಾವಣ ಶನಿವಾರದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮತ್ತು ನಂತರ ಶಿವನನ್ನು ಆರಾಧಿಸಿ. 
* ಸಂಜೆ ಶನಿದೇವನ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಮನೆಯ ಹತ್ತಿರ ಶನಿದೇವರ ದೇವಾಲಯವಿಲ್ಲದಿದ್ದರೆ, ಅರಳಿ ಮರದ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬಹುದು.
* ದೀಪವನ್ನು ಬೆಳಗಿದ ನಂತರ ಶನಿದೇವನ ಪಂಚಾಕ್ಷರ ಮಂತ್ರವನ್ನು ಪಠಿಸುವುದರಿಂದ ಪ್ರಯೋಜನವಾಗುತ್ತದೆ. ಈ ಜಪ ನಂತರ ಓಂ ಪ್ರಾಂ ಪ್ರಿಂ ಪ್ರಾಣ್ ಸಃ ಶನಿಶ್ಚರಾಯ ನಮಃ. ಶನಿ ದೇವನನ್ನು ಪೂಜಿಸಿದ ನಂತರ, ಶಿವನ ತಾಂಡವ ಸ್ತೋತ್ರವನ್ನು ಪಠಿಸಿ. ಇದರ ನಂತರ, ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿಗಾಗಿ ಶನಿ ದೇವನನ್ನು ಪ್ರಾರ್ಥಿಸಿ.
* ಪ್ರತಿ ಶ್ರಾವಣ ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಿ. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಬಯಸಿದ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Rakshabandhan 2022: ರಕ್ಷಾಬಂಧನದ ದಿನ ರಾಖಿ ಕಟ್ಟುವಾಗ ಸಹೋದರಿಯರು ಇದನ್ನು ನೆನಪಿನಲ್ಲಿಡಿ

ಶನಿವಾರದ ವಿಶೇಷ ಪರಿಹಾರಗಳು:
>> ಇದಲ್ಲದೆ ನಿಮ್ಮ ಹಣ ಎಲ್ಲಾದರೂ ಸಿಲುಕಿದ್ದರೆ ಅಂತಹ ಹಣವನ್ನು ಮರಳಿ ಪಡೆಯಲು ಕಬ್ಬಿಣದ ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಮಧ್ಯದ ಬೆರಳನ್ನು ಹಾಕಿ 'ಓಂ ಪ್ರಾಂ ಪ್ರಿಂ ಪ್ರೌನ್ ಸಶ ಶನಿಶ್ಚರಾಯ ನಮಃ' ಎಂಬ  ಶನಿದೇವನ ಮಂತ್ರವನ್ನು ಪಠಿಸಿ. ಇದರ ನಂತರ ಈ ಬಟ್ಟಲನ್ನು ದಾನ ಮಾಡಿ.  ಪ್ರತಿ ಶ್ರಾವಣ ಶನಿವಾರದಂದು ಈ ಪರಿಹಾರವನ್ನು ಮಾಡಿ. 

>> ಶನಿಯ ಪ್ರಭಾವದಿಂದ ನೀವು ತೊಂದರೆಗೀಡಾಗಿದ್ದರೆಶ್ರಾವಣ ಶನಿವಾರದಂದು ಸಾಸಿವೆ ಎಣ್ಣೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಅಲ್ಲದೆ, ಶನಿವಾರದ ಉಪವಾಸವನ್ನು ಮಾಡಿ. ಯಾವುದಾದರು ಒಂದು ಸಮಯದಲ್ಲಿ ಮಾತ್ರ ಆಹಾರ ಸೇವಿಸಿ.

>> ಉದ್ಯೋಗದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಶ್ರಾವಣ ಶನಿವಾರದಂದು ಅರಳಿ ಮರಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ. ಈ ಸಮಯದಲ್ಲಿ ಕಾಂಡಕ್ಕೆ ಕಪ್ಪು ದಾರವನ್ನು ಕಟ್ಟಬೇಕು. ಅಲ್ಲದೆ, ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಈ ಪರಿಹಾರದಿಂದ ಉದ್ಯೋಗದಲ್ಲಿನ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News