ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹ ಉದಯಿಸಿದಾಗ ಅಥವಾ ಅಸ್ತಮಿಸಿದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಬೀರುತ್ತದೆ. ಶನಿಯು ಫೆಬ್ರವರಿ 11 ರಂದು ಕುಂಭ ರಾಶಿಯಲ್ಲಿ ಅಸ್ತಮಿಸಿದ್ದು, ಮಾರ್ಚ್ 18 ರಂದು ಮತ್ತೆ ಉದಯಿಸಲಿದೆ. ಶನಿಯ ಉದಯದ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ.
ವೈದಿಕ ಗ್ರಂಥಗಳಲ್ಲಿ ಶನಿದೇವನನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಶನಿಯು ವ್ಯಕ್ತಿಯ ಕರ್ಮಗಳ ಮೇಲ ಸದಾ ಕಣ್ಣಿಟ್ಟಿರುತ್ತಾನೆ. ಮಾತ್ರವಲ್ಲ ವ್ಯಕ್ತಿಯ ಕರ್ಮದ ಆಧಾರದ ಮೇಲೇ ಫಲ ನೀಡುತ್ತಾನೆ. ಕುಂಭ ರಾಶಿಯಲ್ಲಿ ಶನಿಯು ಉದಯಿಸುವುದರಿಂದ ಕೆಲವು ರಾಶಿಯವರಿಗೆ ಅಶುಭ ಫಲ ದೊರೆತರೆ, ಇನ್ನು ಕೆಲವರಿಗೆ ಶುಭ ಫಲವೇ ಸಿಗುತ್ತದೆ.
ಇದನ್ನೂ ಓದಿ : Magh Purnima Remedies: ಸಕಲ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಮಾಘ ಹುಣ್ಣಿಮೆಯಂದು ಪುಣ್ಯ ಸ್ನಾನದ ಬಳಿಕ ತಪ್ಪದೇ ಮಾಡಿ ಈ ಕೆಲಸ
ಮಕರ ರಾಶಿ :
ಕುಂಭ ರಾಶಿಯಲ್ಲಿ ಶನಿದೇವನ ಉದಯವು ಮಕರ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ನಿಮ್ಮ ರಾಶಿಯಲ್ಲಿ ಶನಿದೇವನು ಹಣದ ಮನೆಯಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಕಾಲಕಾಲಕ್ಕೆ ಅನಿರೀಕ್ಷಿತ ಹಣ ನಿಮ್ಮ ಜೀವನದಲ್ಲಿ ಹರಿದು ಬರುತ್ತದೆ.ಈ ಅವಧಿಯಲ್ಲಿ ಎಲ್ಲಾ ಆಸೆಗಳು ಈಡೇರುತ್ತವೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ವಾಹನ ಅಥವಾ ಆಸ್ತಿ ಖರೀದಿ ಸುಲಭವಾಗುತ್ತದೆ.
ಕುಂಭ ರಾಶಿ :
ಮಾರ್ಚ್ 18 ರಂದು ಕುಂಭ ರಾಶಿಯಲ್ಲಿ ಶನಿಯ ಉದಯದೊಂದಿಗೆ ಈ ರಾಶಿಯವರ ಜೀವನದ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಈ ಸಮಯವು ಈ ರಾಶಿಯ ಜನರಿಗೆ ಅನುಕೂಲಕರವಾಗಿರುತ್ತದೆ.ಕುಂಭ ರಾಶಿಯ ಲಘ್ನದ ಮನೆಯಲ್ಲಿ ಶನಿಯು ಉದಯಿಸಲಿದ್ದಾನೆ. ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ. ಶನಿದೇವನ ಸಂಚಾರದಿಂದಾಗಿ ನಿಮ್ಮ ಜಾತಕದಲ್ಲಿ ಶಸ ಮಹಾಪುರುಷ ಯೋಗವು ರೂಪುಗೊಳ್ಳುತ್ತಿದೆ.ಇದು ವೃತ್ತಿಜೀವನದಲ್ಲಿ ಪ್ರಗತಿಗೆ ದಾರಿ ಮಾಡಿ ಕೊಡುತ್ತದೆ.
ಇದನ್ನೂ ಓದಿ : Surya Shani Yuti: ಕುಂಭ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ ಸೂರ್ಯ-ಶನಿ, ನಿಮ್ಮ ಮೇಲೆ ಏನು ಪರಿಣಾಮ
ವೃಷಭ ರಾಶಿ :
ಶನಿದೇವನ ಉದಯದಿಂದಾಗಿ, ವೃಷಭ ರಾಶಿಯ ಜನರು ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಹೂಡಿಕೆಯಲ್ಲಿ ಉತ್ತಮ ಲಾಭವಾಗುವುದು. ವ್ಯವಹಾರದಲ್ಲಿಯೂ ಉತ್ತಮ ಯಶಸ್ಸು ಪ್ರಾಪ್ತಿಯಾಗುವುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.