ದಿನಭವಿಷ್ಯ 24-10-2024: ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ: ಈ ರಾಶಿಯವರಿಗೆ ರಾಜವೈಭೋಗ

Today Horoscope 24th October 2024: ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 24, 2024, 07:43 AM IST
  • ಅಷ್ಟಮಿ ತಿಥಿಯ ಈ ದಿನ ಗುರುವಾರ
  • ಪುನರ್ವಸು ನಕ್ಷತ್ರ, ಸಾಧ್ಯ ಯೋಗ, ಬಾಲವ ಕರಣ.
  • ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ
ದಿನಭವಿಷ್ಯ 24-10-2024:   ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ: ಈ ರಾಶಿಯವರಿಗೆ ರಾಜವೈಭೋಗ  title=

Guruvara Dina Bhavishya In Kannada:  ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ, ಬಾಲವ ಕರಣ. ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ವೈಯಕ್ತಿಕ ಜೀವನದಲ್ಲಿ ಒಂದು ನಿರ್ದಿಷ್ಟ ಅಧ್ಯಾಯ ಕೊನೆಗೊಳ್ಳುವ ಸಮಯ. ಜಟಿಲ ಸಮಸ್ಯೆಗಳು ಸರಾಗವಾಗಿ ಬಗೆಹರಿಯಲಿವೆ. ನೀವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ, ಅದರ ಪ್ರತಿಫಲವೂ ಒಳ್ಳೆಯದೇ ಆಗಿರಲಿದೆ. ಫಿಟ್‌ನೆಸ್ ವಿಷಯದಲ್ಲಿ ಗಮನವಹಿಸಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಭಾವನಾತ್ಮಕ ವಿಷಯಗಳು ಸಂತೋಷವನ್ನು ತರಲಿವೆ. ದೂರದ ಊರಿನಲ್ಲಿರುವವರಿಗೆ ಶುಭ ಸುದ್ದಿ ನಿರೀಕ್ಷಿಸಬಹುದು. ದೈನಂದಿನ ಜೀವನದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಉತ್ತಮ. ರೊಮ್ಯಾಂಟಿಕ್ ಮೂಡ್ ನಲ್ಲಿರುತ್ತೀರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಬೇರೆಯವರ ಮಾತಿಗೆ ತಲೆಕೆಡಿಕೊಳ್ಳಬೇಡಿ. ನಿಮ್ಮ ಕೆಲಸದತ್ತ ನಿಗಾವಹಿಸಿ. ಸಾಧ್ಯವಾದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಕುಟುಂಬದೊಂದಿಗೆ ಪ್ರತ್ಯೇಕವಾಗಿ ಸುಂದರ ಸಮಯವನ್ನು ಕಳೆಯುವಿರಿ. ವಿದೇಶ ಪ್ರವಾಸ ಸಾಧ್ಯತೆ ಇದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಆಸ್ತಿ ವಿಷಯಗಳಲ್ಲಿ ಕಾನೂನು ಪ್ರಕ್ರಿಯೆಗಳಿಗೆ ಮುಂದಾಗದೆ ಕುಳಿತು ಮಾತನಾಡುವ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಪ್ರಬಲವಾದ ದಿನ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. 

ಇದನ್ನೂ ಓದಿ- ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ! 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಉದ್ಯೋಗಸ್ಥರು ಇಂದು ಉತ್ತಮ ಸಾಧನೆ ಮಾಡುವರು. ಆರೋಗ್ಯದ ದೃಷ್ಟಿಯಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ನೀವು ಕೈ ಹಾಕುವ ಹೊಸ ಕೆಲಸ ಕಾರ್ಯಗಳಲ್ಲಿ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಇಮೇಜ್ ಹೆಚ್ಚಾಗಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವೃತ್ತಿ ವ್ಯವಹಾರ ನಿಮಿತ್ತ ಇಂದು ನೀವು ಪ್ರಯಾಣ ಕೈಗೊಳ್ಳಬೇಕಾಗಬಹುದು. ಹೊಸ ಮನೆ ನಿರ್ಮಿಸುವ ನಿಮ್ಮ ಕನಸಿಗೆ ಅಡಿಪಾಯ ಹಾಕುವ ಸಕಾಲ. ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಸಂತೋಷದ ವಾತಾವರಣವನ್ನು ಅನುಭವಿಸಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆ ಮಾಡುವಿರಿ. ಆಪ್ತರಿಂದ ವಿಶೇಷ ಉಡುಗೊರೆ ಲಭ್ಯವಾಗಲಿದೆ. ಕುಟುಂಬಸ್ಥರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಹೊಸ ಆಸ್ತಿ ಖರೀದಿರುವ ನಿಮ್ಮ ಮನಸ್ಸಿನ ಲೆಕ್ಕಾಚಾರಕ್ಕೆ ಬೆಂಬಲ ದೊರೆಯಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. ವೃತ್ತಿಪರರು ಇಂದು ಆರಾಮದಾಯಕವಾಗಿ ಸುರಕ್ಷಿತವಾಗಿರುತ್ತೀರಿ. ಹಣಕಾಸಿನ ವಿಚಾರಗಳು ಬಗೆಹರಿಯಲಿವೆ. ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರಿ. ಪ್ರತಿ ಕೆಲಸದಲ್ಲಿ ಕುಟುಂಬಸ್ಥರ ಬೆಂಬಲ ಪಡೆಯುವಿರಿ. 

ಇದನ್ನೂ ಓದಿ- ಬೆಳ್ಳಿ ಉಂಗುರ ಧರಿಸಿದರಷ್ಟೇ ಈ ರಾಶಿಯವರಿಗೆ ಜೀವನದಲ್ಲಿ ಪ್ರಗತಿ, ಧನಲಾಭ, ಭಾರೀ ಅದೃಷ್ಟ

ಧನು ರಾಶಿಯವರ ಭವಿಷ್ಯ (Sagittarius Horoscope):  
ಉದ್ಯೋಗ ರಂಗದಲ್ಲಿ ನೀವು ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಎಂತಹುದೇ ಸಂದರ್ಭದಲ್ಲಿ ನಿಮ್ಮ ಸ್ವಾಭಿಮಾನವನ್ನು ಬಿಟ್ಟುಕೊಡಬೇಡಿ. ಹಣಕಾಸಿನ ಮೂಲಗಳು ಹೆಚ್ಚಾಗುವವು. ಆರೋಗ್ಯ ಸುಧಾರಿಸಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಆರೋಗ್ಯದ ದೃಷ್ಟಿಯಿಂದ ಜಂಕ್ ಫುಡ್ ಗಳಿಂದ ದೂರ ಉಳಿದರೆ ಒಳಿತು. ಪ್ರಸ್ತುತ, ನಿಮ್ಮ ಸಣ್ಣ ತಪ್ಪು ಕೂಡ ಕುಟುಂಬದವರ ದೃಷ್ಟಿಯಲ್ಲಿ ಭಾರೀ ದೊಡ್ಡದಾಗಿ ಕಾಣಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಪ್ರವಾಸಕ್ಕಾಗಿ ಯೋಜಿಸುತ್ತಿರುವವರಿಗೆ ಮೋಜಿನ ದಿನ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಶೈಕ್ಷಣಿಕ ಗುರಿ ಸಾಧಿಸಲು ಮನಸ್ಸು ಬೇರೆಡೆ ಚಂಚಲಗೊಳ್ಳದಂತೆ ನಿಗಾವಹಿಸಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ಆದರೂ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ವ್ಯಾಪಾರ ಸಂಬಂಧಿತ ಪ್ರವಾಸವು ಲಾಭದಾಯಕವಾಗಿರಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯಕ್ಕೆ ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಆಸ್ತಿಯಿಂದ ಲಾಭವಾಗಲಿದೆ. ಸಣ್ಣ ಪ್ರಯಾಣವು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News