ಸ್ನಾನ ಮಾಡಲು ಸರಿಯಾದ ಸಮಯ ಯಾವುದು ಗೊತ್ತೆ..? ಬೆಳಿಗ್ಗೆ ಅಂದುಕೊಂಡಿದ್ದರೆ ನೀವು ಮೂರ್ಖರು..

Right time to bath : ಪ್ರಪಂಚದ ಅನೇಕ ದೇಶಗಳಲ್ಲಿ, ಬೆಳಿಗ್ಗೆ ಸ್ನಾನ ಮಾಡುವ ಬದಲು ರಾತ್ರಿಯಲ್ಲಿ ಸ್ನಾನ ಮಾಡುವ ಅಭ್ಯಾಸವಿದೆ. ಸ್ನಾನ ಮಾಡಲು ಉತ್ತಮ ಸಮಯ ಯಾವುದು..? ಎನ್ನುವ ಸಂಶಯ ನಿಮ್ಮ ತಲೆಯಲ್ಲಿ ಇದ್ದರೆ.. ಅದಕ್ಕೆ ಸರಿಯಾದ ಉತ್ತರ ಇಲ್ಲಿದೆ ನೋಡಿ.. 

Written by - Krishna N K | Last Updated : Oct 23, 2024, 06:36 PM IST
    • ಕೆಲವರು ಬೆಳಿಗ್ಗೆ ಸ್ನಾನ ಮಾಡುವ ಬದಲು ರಾತ್ರಿಯಲ್ಲಿ ಸ್ನಾನ ಮಾಡುತ್ತಾರೆ.
    • ಸ್ನಾನ ಮಾಡಲು ಉತ್ತಮ ಸಮಯ ಯಾವುದು..?
    • ಯಾವಾಗ ಸ್ನಾನ ಮಾಡುವುದು ಒಳ್ಳೆಯದು.. ವಿಜ್ಞಾನಿಗಳು ಏನಂತಾರೆ..?
ಸ್ನಾನ ಮಾಡಲು ಸರಿಯಾದ ಸಮಯ ಯಾವುದು ಗೊತ್ತೆ..? ಬೆಳಿಗ್ಗೆ ಅಂದುಕೊಂಡಿದ್ದರೆ ನೀವು ಮೂರ್ಖರು.. title=

Health tips in Kannada : ಅನೇಕ ದೇಶಗಳ ಜನರು ಬೆಳಿಗ್ಗೆ ಸ್ನಾನ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಂಬುತ್ತಾರೆ.. ಅದಕ್ಕಾಗಿಯೇ ಅಂತಹ ದೇಶಗಳಲ್ಲಿ ಅವರು ಬೆಳಿಗ್ಗೆ ಬದಲು ರಾತ್ರಿಯಲ್ಲಿ ಸ್ನಾನ ಮಾಡುತ್ತಾರೆ. ಆದರೆ ಯಾವಾಗ ಸ್ನಾನ ಮಾಡುವುದು ಒಳ್ಳೆಯದು ಎಂಬುದರ ಬಗ್ಗೆ ವಿಜ್ಞಾನಿಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

ಜಪಾನ್‌ನಲ್ಲಿ ಹಲವು ವರ್ಷಗಳಿಂದ ರಾತ್ರಿ ಸ್ನಾನ ಮಾಡುವ ಪದ್ಧತಿ ಇದೆ. ರಾತ್ರಿ ಸ್ನಾನ ಮಾಡುವುದರಿಂದ ಹಗಲಿನಲ್ಲಿ ದೇಹದ ಮೇಲೆ ಅಂಟಿಕೊಂಡ ಕೊಳೆ ನಿವಾರಣೆಯಾಗುತ್ತದೆ ಎಂಬುವುದು ಅವರ ನಂಬಿಕೆ. ಅಷ್ಟೇ ಅಲ್ಲ, ಮಲದಲ್ಲಿ ಶೇಖರಣೆಯಾದ ವಿಷವನ್ನು ಹೊರಹಾಕುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಮಧುಮೇಹಕ್ಕೆ ಮನೆ ಮದ್ದು ಮಜ್ಜಿಗೆ.. ಈ ಪುಡಿಯನ್ನು ಬೆರೆಸಿ ಸೇವಿಸಿದ್ರೆ ಕೇವಲ 2 ನಿಮಿಷಕ್ಕೆ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್

ರಾತ್ರಿಯಲ್ಲಿ ಸ್ನಾನ ಮಾಡುವುದರಿಂದ ರಾತ್ರಿಯಲ್ಲಿ ಉತ್ತಮ ನಿದ್ರೆ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಜಪಾನಿಯರು ನಂಬುತ್ತಾರೆ. ಅವರು ರಾತ್ರಿ ಸ್ನಾನ ಮಾಡಲು ನಿಜವಾದ ಕಾರಣ ಇದೇ. ಅಲ್ಲದೆ, ರಾತ್ರಿಯ ಸ್ನಾನವು ಮನಸ್ಸು ಮತ್ತು ದೇಹವನ್ನು ಸಂಪೂರ್ಣವಾಗಿ ಶುದ್ಧಗೊಳಿಸುತ್ತದೆ ಎಂದು ಅವರ ನಂಬಿಕೆ.

ಸಾಮಾನ್ಯವಾಗಿ ಅವರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಾರೆ. ಆದರೆ ಮಲಗುವ ಮುನ್ನ ಸ್ನಾನ ಮಾಡುವುದರಿಂದ ದೇಹ ರಿಲ್ಯಾಕ್ಸ್ ಆಗುತ್ತದೆ. ಆಗ ಚೆನ್ನಾಗಿ ನಿದ್ರಿಸಬಹುದು. ದಕ್ಷಿಣ ಕೊರಿಯಾದ ಜನರು ಹೆಚ್ಚಾಗಿ ರಾತ್ರಿಯಲ್ಲಿ ಸ್ನಾನ ಮಾಡುತ್ತಾರೆ. ದಿನವಿಡೀ ದುಡಿದು ರಾತ್ರಿ ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತದೆಯಂತೆ.

ಇದನ್ನೂ ಓದಿ:ನಿಮಗೆ ಸಕ್ಕರೆ ಕಾಯಿಲೆ ಇದ್ದರೆ ರಾತ್ರಿ ಮಲಗುವ ಮುನ್ನ ಈ ಹಳದಿ ನೀರನ್ನು ಕುಡಿಯಿರಿ, ಸಕ್ಕರೆ ಪ್ರಮಾಣ ತಕ್ಷಣ ಕಡಿಮೆಯಾಗುತ್ತದೆ..!

ವಿಜ್ಞಾನ ಏನು ಹೇಳುತ್ತದೆ? : ಆರೋಗ್ಯ ತಜ್ಞರ ಪ್ರಕಾರ.. ರಾತ್ರಿ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನದ ಕೆಲಸದ ನಂತರ ಮಲಗುವ ಮುನ್ನ ಸ್ನಾನ ಮಾಡಿದರೆ ದೇಹಕ್ಕೆ ಚೈತನ್ಯ ಸಿಗುತ್ತದೆ. ರಾತ್ರಿ ಸ್ನಾನ ಮಾಡುವುದರಿಂದ ಆಯಾಸ ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News