Vastu Tips: ಮುಂಜಾನೆ ಎದ್ದು ಈ ಕೆಲಸಗಳನ್ನು ಮಾಡಿದ್ರೆ ಬಿಟ್ಟೂ ಬಿಡದಂತೆ ಕಾಡುತ್ತೆ ದಾರಿದ್ರ್ಯ

Vastu Tips: ವಾಸ್ತು ಶಾಸ್ತ್ರದಲ್ಲಿ ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಸಲಹೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿತ್ಯ ಮುಂಜಾನೆ ನಾವು ಎದ್ದ ಬಳಿಕ ಮಾಡುವ ಕೆಲವು ಕೆಲಸಗಳು ಮನೆಯಲ್ಲಿ ದಾರಿದ್ರ್ಯವನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Mar 31, 2023, 02:06 PM IST
  • ವಾಸ್ತು ಶಾಸ್ತ್ರದ ಪ್ರಕಾರ, ಮುಂಜಾನೆ ಮಾಡುವ ಕೆಲವು ತಪ್ಪುಗಳಿಂದಾಗಿ ವ್ಯಕ್ತಿಯು ಜೀವನದಲ್ಲಿ ಆರ್ಥಿಕವಾಗಿ ಏಳ್ಗೆಯಾಗಲು ಸಾಧ್ಯವಾಗುವುದಿಲ್ಲ.
  • ಮಾತ್ರವಲ್ಲ, ಅಂತಹ ಮನೆಯಲ್ಲಿ ದಾರಿದ್ರ್ಯ ಎಂಬುದು ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ.
  • ಇದನ್ನು ತಪ್ಪಿಸಲು ಬೆಳಿಗ್ಗೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ.
Vastu Tips: ಮುಂಜಾನೆ ಎದ್ದು ಈ ಕೆಲಸಗಳನ್ನು ಮಾಡಿದ್ರೆ ಬಿಟ್ಟೂ ಬಿಡದಂತೆ ಕಾಡುತ್ತೆ ದಾರಿದ್ರ್ಯ  title=
Vastu Tips

Vastu Tips For Home: ಈ ಯುಗದಲ್ಲಿ ಎಲ್ಲದಕ್ಕೂ ಹಣವೇ ಮುಖ್ಯ. ಹಾಗಾಗಿಯೇ, ಹಣ ಸಂಪಾದನೆಗಾಗಿ ಕಷ್ಟಪಟ್ಟು ದುಡಿಯುವುದರ ಹೊರತಾಗಿಯೂ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯನ್ನು ಮೆಚ್ಚಿಸಲು ಜನರು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ಸಹ ಲಕ್ಷ್ಮಿಯನ್ನು ಆಕರ್ಷಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಆದರಂತೆ, ಮುಂಜಾನೆ ಎದ್ದು ಮಾಡುವ ಕೆಲವು ಕೆಲಸಗಳಿಂದ ಮನೆಯಲ್ಲಿ ಲಕ್ಷ್ಮಿಮುನಿಸಿಗೆ ಕಾರಣವಾಗಬಹುದು. ಇದರಿಂದ ಮಾತೆ ಲಕ್ಷ್ಮಿ ಮನೆಯಿಂದ ಹೊರಹೋಗಬಹುದು ಎಂತಲೂ ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಮುಂಜಾನೆ ಮಾಡುವ ಕೆಲವು ತಪ್ಪುಗಳಿಂದಾಗಿ ವ್ಯಕ್ತಿಯು ಜೀವನದಲ್ಲಿ ಆರ್ಥಿಕವಾಗಿ ಏಳ್ಗೆಯಾಗಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಅಂತಹ ಮನೆಯಲ್ಲಿ ದಾರಿದ್ರ್ಯ ಎಂಬುದು ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು  ಬೆಳಿಗ್ಗೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮುಂಜಾನೆ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ತಿಳಿಯೋಣ... 

ಇದನ್ನೂ ಓದಿ- ವಾಸ್ತು ಮಾತ್ರವಲ್ಲ ವಿಜ್ಞಾನವೂ ಹೇಳುತ್ತದೆ ಈ ದಿಕ್ಕಿಗೆ ತಲೆ ಹಾಕಿ ಮಲಗಬಾರದಂತೆ !

ವಾಸ್ತು ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಲೇಬಾರದು: 
* ಸೂರ್ಯೋದಯದ ನಂತರ ಮಲಗುವುದು:

ವಾಸ್ತು ಪ್ರಕಾರ, ಸೂರ್ಯೋದಯದ ನಂತರ ಮಲಗುವುದರಿಂದ ವ್ಯಕ್ತಿ ಹಲವು ಕಾಯಿಲೆಗಳಿಗೆ ಬಲಿಯಾಗಬಹುದು. ಮಾತ್ರವಲ್ಲ, ಇದು ಲಕ್ಷ್ಮೀದೇವಿಯ ಕೋಪಕ್ಕೂ ಕಾರಣವಾಗಬಹುದು. 

* ಮುಸರೆ ಪಾತ್ರೆ:
ಕೆಲವರು ರಾತ್ರಿ ವೇಳೆ ಪಾತ್ರೆಗಳನ್ನು ತೊಳೆಯುವುದೇ ಇಲ್ಲ. ಮುಂಜಾನೆ ಎದ್ದ ಬಳಿಕ ಈ ಕೆಲಸವನ್ನು ಮಾಡುತ್ತಾರೆ. ಆದರೆ, ರಾತ್ರಿ ವೇಳೆ ಎಂಜಲು ಪಾತ್ರೆಗಳನ್ನು ಬಿಟ್ಟು ಮಲಗುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ. ಇದರೊಂದಿಗೆ ಹಣಕ್ಕೆ ಸಂಬಂಧಿಸಿದ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಮಾತ್ರವಲ್ಲ, ಅಡುಗೆ ಮನೆ ಸ್ವಚ್ಛವಾಗಿಲ್ಲದ ಮನೆಯಲ್ಲಿ ತಾಯಿ ಲಕ್ಷ್ಮಿ ಕ್ಷಣ ಮಾತ್ರವೂ ನೆಲೆಸಲು ಇಷ್ಟಪಡುವುದಿಲ್ಲ. 

ಇದನ್ನೂ ಓದಿ- ಹಣದ ವಿಷಯದಲ್ಲಿ ಮಾಡುವ ಈ ತಪ್ಪುಗಳಿಂದ ಲಕ್ಷ್ಮಿದೇವಿ ಕೋಪಿಸಿಕೊಳ್ಳಬಹುದು!

* ಕೆಟ್ಟ ಮಾತು:
ನಾವು ಒಳ್ಳೆಯದನ್ನು ಮಾತನಾಡುತ್ತಿದ್ದರೆ ಒಳ್ಳೆಯದೇ ಆಗುತ್ತದೆ. ಕೆಟ್ಟದ್ದನ್ನು ಮಾತನಾಡುತ್ತಿದ್ದರೆ ಕೆಟ್ಟದ್ದೆ ಆಗುತ್ತದೆ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಅಂತೆಯೇ, ಬೆಳಿಗ್ಗೆ ಎದ್ದ ತಕ್ಷಣ ಯಾರಿಗೂ ಕೆಟ್ಟ ಮಾತುಗಳನ್ನಾಡಬೇಡಿ. ಹೀಗೆ ಮಾಡುವುದರಿಂದ ಇಡೀ ದಿನ ನಿಮಗೆ ನೆಗೆಟಿವ್ ಆಗಿಯೇ ಇರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News