Maha Shivratri 2023: ಈ ಬಾರಿ ಶಿವರಾತ್ರಿಯಂದು ರೂಪಗೊಳ್ಳುತ್ತಿದೆ ಈ ಅಪರೂಪದ ಕಾಕತಾಳೀಯ

Maha Shivratri 2023 Date: ದೇವಾದಿದೇವ ಮಹಾದೇವನ ಉಪಾಸನೆಯ ಮಹಾ ಪರ್ವ ಮಹಾಶಿವರಾತ್ರಿಗಾಗಿ ಜನರು ಅತ್ಯಂತ ಆತುರತೆಯಿಂದ ಕಾಯುತ್ತಿರುತ್ತಾರೆ. ಈ ದಿನ ಶಿವನಿಗಾಗಿ ಉಪವಾಸ ಕೈಗೊಂಡು ವಿಧಿವಿಧಾನದ ಮೂಲಕ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.  

Written by - Nitin Tabib | Last Updated : Jan 13, 2023, 09:32 PM IST
  • ಈ ಬಾರಿ ಚತುರ್ದಶಿ ತಿಥಿ ಶನಿವಾರ ರಾತ್ರಿ 8:02 ರಿಂದ ಮರುದಿನ ಅಂದರೆ
  • 19ನೇ ಫೆಬ್ರವರಿ, ಭಾನುವಾರ, ಸಂಜೆ 4:18 ರವರೆಗೆ ಇರಲಿದೆ.
  • ಮತ್ತೊಂದೆಡೆ, ನಿಶಿತಾ ಕಾಲದಲ್ಲಿ, ಪೂಜೆಯ ಶುಭ ಮುಹೂರ್ತ ರಾತ್ರಿ 12:09 ರಿಂದ 1:00 ರವರೆಗೆ ಇರುತ್ತದೆ.
Maha Shivratri 2023: ಈ ಬಾರಿ ಶಿವರಾತ್ರಿಯಂದು ರೂಪಗೊಳ್ಳುತ್ತಿದೆ ಈ ಅಪರೂಪದ ಕಾಕತಾಳೀಯ title=
Mahashivaratri 2023

Mahashivratri Significance: ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಈ ದಿನ ಶಿವ ಮತ್ತು ತಾಯಿ ಪಾರ್ವತಿಯನ್ನು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಸುಖ, ಸಮೃದ್ಧಿ, ಅದೃಷ್ಟ ಮತ್ತು ಮದುವೆಗಾಗಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ ಮತ್ತು ಸಂಪೂರ್ಣ ಭಕ್ತಿಭಾವದಿಂದ ಶಿವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಶಿವನನ್ನು ಎಲ್ಲಾ ಎಲ್ಲಾ ವಿಧಿ-ವಿಧಾನಗಳ ಮೂಲಕ ಪೂಜಿಸುವ ಜನರ ಮೇಲೆ ಶಿವ ತನ್ನ ವಿಶೇಷ ಅನುಗ್ರಹವನ್ನು ತೋರುತ್ತಾನೆ ಎಂಬುದು ಧಾರ್ಮಿಕ ನಂಬಿಕೆ .

ಅಪರೂಪದ ಕಾಕತಾಳೀಯ ನಿರ್ಮಾಣ
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಮಹಾಶಿವರಾತ್ರಿಯಂದು ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಈ ವರ್ಷ ಮಹಾಶಿವರಾತ್ರಿ ಜೊತೆಗೆ ಪ್ರದೋಷ ವ್ರತವೂ ಇದೆ. ಆದರೆ, ಈ ಪ್ರದೋಷ ವ್ರತ ಶನಿವಾರದ ದಿನವಾದ್ದರಿಂದ ಇದನ್ನು ಶನಿ ಪ್ರದೋಷ ವ್ರತ ಎಂದೂ ಕರೆಯುತ್ತಾರೆ. ಸಂತಾನ ಪ್ರಾಪ್ತಿಗಾಗಿ ಶನಿ ಪ್ರದೋಷ ವ್ರತವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೀಗಿರುವಾಗ ಈ ದಿನ ಶಿವರಾತ್ರಿ ಹಾಗೂ ಪ್ರದೋಷ ವ್ರತ ಒಟ್ಟಿಗೆ ಆಚರಿಸಿ ಸಂತಾನ ಪ್ರಾಪ್ತಿ ಪಡೆಯುವ ಒಂದು ಅಪರೂಪದ ಕಾಕತಾಳೀಯವಾಗಿದೆ.

ತಿಥಿ 
ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಬಾರಿ ಈ ದಿನಾಂಕವು ಶನಿವಾರ, 18 ಫೆಬ್ರವರಿ 2023 ರಂದು ಬೀಳುತ್ತಿದೆ. ಕಾಕತಾಳೀಯವೆಂಬಂತೆ ಈ ದಿನ ಪ್ರದೋಷ ವ್ರತವನ್ನೂ ಆಚರಿಸಲಾಗುತ್ತಿದೆ.

ಇದನ್ನೂ ಓದಿ-Shani Dev Upay: ಶನಿ ಮುನಿಸಿಕೊಂಡರೆ ಜೀವನವೇ ನರಕಾಗುತ್ತದೆ, ಈ ಉಪಾಯ ಅನುಸರಿಸಿ

ಮಹೂರ್ತ
ಈ ಬಾರಿ ಚತುರ್ದಶಿ ತಿಥಿ ಶನಿವಾರ ರಾತ್ರಿ 8:02 ರಿಂದ ಮರುದಿನ ಅಂದರೆ 19ನೇ ಫೆಬ್ರವರಿ, ಭಾನುವಾರ, ಸಂಜೆ 4:18 ರವರೆಗೆ ಇರಲಿದೆ. ಮತ್ತೊಂದೆಡೆ, ನಿಶಿತಾ ಕಾಲದಲ್ಲಿ, ಪೂಜೆಯ ಶುಭ ಮುಹೂರ್ತ ರಾತ್ರಿ 12:09 ರಿಂದ 1:00 ರವರೆಗೆ ಇರುತ್ತದೆ. ಮತ್ತೊಂದೆಡೆ, ಫೆಬ್ರವರಿ 18 ರಂದು ಉಪವಾಸ ಕೈಗೊಳ್ಳುವ  ಭಕ್ತರು ಮಾರನೆಯ ದಿನ ಫೆಬ್ರವರಿ 19 ರಂದು ಉಪವಾಸವನ್ನು ಬಿಡಬಹುದು. ಫೆಬ್ರವರಿ 19 ರಂದು ಬೆಳಗ್ಗೆ 6.59 ರಿಂದ ಮಧ್ಯಾಹ್ನ 3.24 ರವರೆಗೆ ಉಪವಾಸವನ್ನು ಬಿಡಲು ಶುಭ ಮುಹೂರ್ತವಿರುತ್ತದೆ.

ಇದನ್ನೂ ಓದಿ-Sankranti 2023: ಮಕರ ಸಂಕ್ರಾಂತಿಯಿಂದ ಯಾವ ರಾಶಿಗಳ ಜನರ ಜೀವನದಲ್ಲಿ ಏನು ಬದಲಾವಣೆಗಳಾಗಲಿವೆ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News