ಈ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ದೇವಗುರು ಬೃಹಸ್ಪತಿ

Jupiter Transit: ಸದ್ಯ ಮೇಷ ರಾಶಿಯಲ್ಲಿರುವ ದೇವಗುರು ಬೃಹಸ್ಪತಿಯು ಶುಭ ಒಂಬತ್ತನೇ ದೃಷ್ಟಿಯನ್ನು ಹೊಂದಿದ್ದಾನೆ. ವಾಸ್ತವವಾಗಿ, ಧನು ರಾಶಿ ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು ದೇವಗುರು ಬೃಹಸ್ಪತಿ ಇದರ ಅಧಿಪತಿ ಗ್ರಹ.  ಈ ಸಂಯೋಜನೆಯಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jun 30, 2023, 08:21 AM IST
  • ಪ್ರಸ್ತುತ ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
  • ಧನು ರಾಶಿಯು ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು, ಅವರ ಅಧಿಪತಿ ದೇವಗುರು.
  • ಈ ಶುಭ ಸಂಯೋಜನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
ಈ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ದೇವಗುರು ಬೃಹಸ್ಪತಿ  title=

Jupiter in Aries Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ಕೂಡ ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಈ ಸಮಯದಲ್ಲಿ ಕೆಲವು ಶುಭ-ಅಶುಭ ಯೋಗಗಳು ಕೂಡ ನಿರ್ಮಾಣವಾಗುತ್ತವೆ. ಪ್ರಸ್ತುತ ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ಶುಭ ಒಂಭತ್ತನೇ ದೃಷ್ಟಿಯನ್ನು ಬೀರುತ್ತಿದ್ದಾನೆ. ಧನು ರಾಶಿಯು ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು, ಅವರ ಅಧಿಪತಿ ದೇವಗುರು. ಈ ಶುಭ ಸಂಯೋಜನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ಬಂಗಾರದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ. 

ಮೇಷ ರಾಶಿಯಲ್ಲಿ ಗುರು ಸಂಕ್ರಮಣ: ಮೂರು ರಾಶಿಯವರಿಗೆ ಭಾಗ್ಯೋದಯದ ಸಮಯ: 
ಮೇಷ ರಾಶಿ: 

ಸದ್ಯ ಸ್ವ ರಾಶಿಯಲ್ಲಿ ಗುರು ಸಂಕ್ರಮಣವಾಗಿದೆ. ಇದಲ್ಲದೆ, ದೇವಗುರು ಬೃಹಸ್ಪತಿಯ ಒಂಬತ್ತನೇ ದೃಷ್ಟಿಯು ಮೇಷ ರಾಶಿಯ ಜನರಿಗೆ ಬಂಗಾರದ ಸಮಯ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಧನು ರಾಶಿಯು ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು, ಇದನ್ನು ಅದೃಷ್ಟದ ಮನೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಸಮಯದಲ್ಲಿ, ಮೇಷ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದು, ಪ್ರಯಾಣದಿಂದ ಲಾಭವಾಗಲಿದೆ.  ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ.  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಯಶಸ್ಸು ನಿಮ್ಮದಾಗಲಿದೆ. 

ಇದನ್ನೂ ಓದಿ- Mangal Gochara: ಸೂರ್ಯನ ರಾಶಿಯಲ್ಲಿ ಮಂಗಳನ ಪ್ರವೇಶ ಈ 4 ರಾಶಿಯವರಿಗೆ ಅದೃಷ್ಟ

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಏಳನೇ ಮನೆಯಲ್ಲಿ ಗುರು ದೃಷ್ಟಿ ಬೀರುತ್ತಿದ್ದು, ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ-ಸಂತೋಷವನ್ನು ತರಲಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಬಂಪರ್ ಲಾಭವಾಗಲಿದೆ. ಇನ್ನೂ ವಿವಾಹವಾಗದ ಯುವ ಜನರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಆತ್ಮವಿಶ್ವಾಸದಿಂದ ಮಾಡಿದ ಯಾವುದೇ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. 

ಇದನ್ನೂ ಓದಿ- ಮಿಥುನ ರಾಶಿಗೆ ಬುಧ ಪ್ರವೇಶ: ಈ ರಾಶಿಯವರಿಗೆ ಧನಯೋಗ-ಸಂಪತ್ತು ಹರಿದುಬರುವುದು!

ಸಿಂಹ ರಾಶಿ: 
ದೇವಗುರು ಬೃಹಸ್ಪತಿಯ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೂ ಕೂಡ ಪ್ರತಿ ಕ್ಷೇತ್ರದಲ್ಲೂ ಉತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಹಾಗೂ ಗುರು ನಡುವೆ ಸ್ನೇಹ ಬಂಧನವಿದ್ದು ಈ ರಾಶಿಯವರಿಗೆ ಐದನೇ ಮನೆಯ ದೃಷ್ಟಿ ನೆಟ್ಟಿರುವ ಗುರುವು ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲಿದ್ದಾನೆ. ಉದ್ಯೋಗಿಗಳಿಗೆ ಬಡ್ತಿ ಪ್ರಯೋಜನವಾಗಲಿದೆ. ಒಟ್ಟಾರೆಯಾಗಿ ಇದು ನಿಮಗೆ ಬಂಗಾರದ ಸಮಯ ಎಂತಲೇ ಹೇಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News