Rudraksha: ರುದ್ರಾಕ್ಷಿ ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು

Rudraksha Benefits: ಹಿಂದೂಗಳು ರುದ್ರಾಕ್ಷಿಯನ್ನು ದೈವಿಕವೆಂದು ಪರಿಗಣಿಸುತ್ತಾರೆ. ಇವುಗಳನ್ನು ಬಳಸಿ ಜಪವನ್ನೂ ಮಾಡುತ್ತಾರೆ. ಈ ರುದ್ರಾಕ್ಷಿ ಮಣಿಗಳು ನಮ್ಮ ಆರೋಗ್ಯದ ಮೇಲೆ ಸಹ ಉತ್ತಮ ಪರಿಣಾಮ ಬೀರುತ್ತವೆ.  

Written by - Chetana Devarmani | Last Updated : Jan 28, 2024, 05:58 PM IST
  • ರುದ್ರಾಕ್ಷಿಯನ್ನು ದೈವಿಕವೆಂದು ಪರಿಗಣಿಸುತ್ತಾರೆ
  • ರುದ್ರಾಕ್ಷಿಯನ್ನು ಧರಿಸುವುದರ ಆರೋಗ್ಯ ಪ್ರಯೋಜನ
  • ಕೋಪ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
Rudraksha: ರುದ್ರಾಕ್ಷಿ ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು title=

Rudraksha Benefits: ರುದ್ರಾಕ್ಷಿ ಧರಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ರುದ್ರಾಕ್ಷಿ ಶಿವನಿಗೆ ಸಂಬಂಧಿಸಿದೆ ಎಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಆಧ್ಯಾತ್ಮಿಕ ಜಾಗೃತಿ ಉಂಟಾಗುತ್ತದೆ. ಈ ರುದ್ರಾಕ್ಷಿ ಮಣಿಗಳು ನಮ್ಮ ಆರೋಗ್ಯದ ಮೇಲೆ ಸಹ ಉತ್ತಮ ಪರಿಣಾಮ ಬೀರುತ್ತವೆ.  

ರುದ್ರಾಕ್ಷಿ ಮಣಿಗಳನ್ನು ಧರಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇದು ಆತಂಕ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಈ ಮಣಿಗಳು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರುದ್ರಾಕ್ಷಿಯಿಂದ ಜಪ ಮಾಡುತ್ತ ಮಂತ್ರಗಳನ್ನು ಪಠಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ.

ಕೋಪ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಈ ಮಣಿಗಳು ತುಂಬಾ ಪ್ರಯೋಜನಕಾರಿ. ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ತುಂಬಾ ಪ್ರಯೋಜನವಾಗುತ್ತದೆ. ಇದಲ್ಲದೆ ವೇದಗಳಲ್ಲಿ ರುದ್ರಾಕ್ಷಿಗೆ ಹೆಚ್ಚಿನ ಮಹತ್ವವಿದೆ. ಇದು ಧನಾತ್ಮಕ ಶಕಿ ನೀಡುತ್ತದೆ. ನಕಾರಾತ್ಮಕತೆಯನ್ನು ದೂರವಿಡುತ್ತದೆ. 

ಇದನ್ನೂ ಓದಿ: Shukra Nakshatra Parivartan 2024: ಪೂರ್ವಾಷಾಢಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ, ಮಹಾಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿ ಯೋಗ!

ನಾವು ಸೇವಿಸಲಿರುವ ಆಹಾರ ಅಥವಾ ನೀರು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರುದ್ರಾಕ್ಷ ಮಣಿ ಸಹ ಸಹಾಯ ಮಾಡುತ್ತದೆ. ಏಕಮುಖಿ ರುದ್ರಾಕ್ಷಿ ಅತ್ಯಂತ ಶಕ್ತಿಶಾಲಿಯಾಗಿದೆ. ಅದನ್ನು ಧರಿಸಿದವರಲ್ಲಿ ಒಂಟಿತನದ ಭಾವನೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ತಜ್ಞರ ಸಲಹೆಯೊಂದಿಗೆ ಇದನ್ನು ಧರಿಸುವುದು ಉತ್ತಮ.

ಪಂಚಮುಖದ ರುದ್ರಾಕ್ಷವು ಸುರಕ್ಷಿತವಾಗಿದೆ. ಶಾಂತತೆಯನ್ನು ತರಲು ಹೆಸರುವಾಸಿಯಾದ ಈ ರುದ್ರಾಕ್ಷಿಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ನರಮಂಡಲವನ್ನು ಸಹ ಶಾಂತಗೊಳಿಸುತ್ತದೆ. ಚರ್ಮ ಸಂಬಂಧಿ ಕಾಯಿಲೆಗಳನ್ನು ನಿವಾರಿಸುವಲ್ಲಿ ರುದ್ರಾಕ್ಷಿ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ಗಾಯಗಳಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

ಇದನ್ನೂ ಓದಿ: ಲಕ್ಷ್ಮೀ ನಾರಾಯಣ ರಾಜಯೋಗ: ಇನ್ಮುಂದೆ ಎಲ್ಲೆಡೆಯೂ ಈ ರಾಶಿಯವರದ್ದೇ ರಾಜ್ಯಭಾರ.. ಸಾಕ್ಷಾತ್ ಮಹಾಲಕ್ಷ್ಮೀ ಪುತ್ರರ ಸ್ವರೂಪವೇ ಇವರು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News