Guru Margi 2022 Effect: ಮೂರು ದಿನಗಳ ನಂತರ ಗುರುವಿನ ನೇರ ಚಲನೆ ಆರಂಭ, ಈ ರಾಶಿಯವರಿಗೆ ಅದೃಷ್ಟವೋ, ಅದೃಷ್ಟ

Guru Margi 2022: ಜ್ಯೋತಿಷ್ಯ ಶಾಸ್ತ್ರದಲ್ಲಿ, ದೇವಗುರು ಬೃಹಸ್ಪತಿಯನ್ನು ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ. ಇದೀಗ ಬೃಹಸ್ಪತಿಯು ಇನ್ನು ಮೂರು ದಿನಗಳಲ್ಲಿ  ನವೆಂಬರ್ 24, 2022 ರಂದು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಗುರು ಗ್ರಹದ ನೇರ ಸಂಚಾರ ಆರಂಭವಾಗಲಿದೆ. ಗುರುವಿನ ನೇರ ಸಂಚಾರವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ಸಮಯವು ನಾಲ್ಕು ರಾಶಿಯವರಿಗೆ ಅತ್ಯಂತ ಮಂಗಳಕರ ಎಂದು ಸಾಬೀತುಪಡಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Nov 21, 2022, 12:37 PM IST
  • 24 ನವೆಂಬರ್ 2022 ರಿಂದ ಗುರುವಿನ ನೇರ ಚಲನೆ ಆರಂಭವಾಗಲಿದೆ.
  • ಇದು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮ ಬೀರುತ್ತದೆ.
  • ಅದರಲ್ಲೂ ಮೂರು ರಾಶಿಯ ಜನರಿಗೆ ಬಹಳ ಮಂಗಳಕರವೆಂದು ಸಾಬೀತುಪಡಿಸುತ್ತದೆ.
Guru Margi 2022 Effect: ಮೂರು ದಿನಗಳ ನಂತರ ಗುರುವಿನ ನೇರ ಚಲನೆ ಆರಂಭ, ಈ ರಾಶಿಯವರಿಗೆ ಅದೃಷ್ಟವೋ, ಅದೃಷ್ಟ  title=
Guru margi 2022

Guru Margi 2022: ನವಗ್ರಹಗಳಲ್ಲಿ ಗುರು ಗ್ರಹವನ್ನು ದೇವಗುರು ಎಂದು ಬಣ್ಣಿಸಲಾಗುತ್ತದೆ. ಜ್ಞಾನ, ಮದುವೆ, ಸಂಪತ್ತು, ಅದೃಷ್ಟದ ಅಂಶ ಎಂದು ಪರಿಗಣಿಸಲಾಗಿರುವ ಬೃಹಸ್ಪತಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಸುಖ-ಸಂತೋಷ, ನೆಮ್ಮದಿಯಿಂದ ಬದುಕುತ್ತಾನೆ. ಆತನ ಪ್ರತಿ ಕೆಲಸದಲ್ಲೂ ಅದೃಷ್ಟ ಕೈಹಿಡಿಯಲಿದೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 24 ನವೆಂಬರ್ 2022 ರಿಂದ ಗುರುವಿನ ನೇರ ಚಲನೆ ಆರಂಭವಾಗಲಿದೆ. ಇದು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮ ಬೀರುತ್ತದೆ. ಆದರೆ, ನಾಲ್ಕು ರಾಶಿಯ ಜನರು ಇದರ ಗರಿಷ್ಠ ಶುಭ ಫಲವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೃಹಸ್ಪತಿಯ ರಾಶಿ ಪರಿವರ್ತನೆಯ ಪರಿಣಾಮದಿಂದಾಗಿ ಈ ನಾಲ್ಕು ರಾಶಿಯವರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಅದೃಷ್ಟದ ಸಹಾಯದಿಂದ ನಿಮ್ಮ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿವೆ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. 

ಗುರು ಮಾರ್ಗಿ 2022 ಸಮಯ:
ನವೆಂಬರ್ 24ರ ಬೆಳಿಗ್ಗೆ 4.36 ಕ್ಕೆ ಗುರುವು ಮೀನರಾಶಿಯಲ್ಲಿ ಸಾಗಲಿದೆ. ಗುರುಗ್ರಹದ ನೇರ ಚಲನೆಯು ಯಾವ ರಾಶಿಚಕ್ರದ ಚಿಹ್ನೆಗಳಿಗೆ ಮಂಗಳಕರವೆಂದು ಸಾಬೀತುಪಡಿಸುತ್ತದೆ ಎಂಬುದನ್ನು ತಿಳಿಯೋಣ. 

ಮೂರು ದಿನಗಳಲ್ಲಿ ದೇವಗುರು ಬೃಹಸ್ಪತಿ ನೇರ ನಡೆ- ಕೆಲವು ರಾಶಿಯವರಿಗೆ ಬಂಪರ್ ಲಾಭ:-
ವೃಷಭ ರಾಶಿ:
ಗುರುಗ್ರಹದ ನೇರ ಸಂಚಾರವು ವೃಷಭ ರಾಶಿಯವರಿಗೆ ತುಂಬಾ ಶುಭವಾಗಲಿದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣವು ಪ್ರಯೋಜನಕಾರಿಯಾಗಲಿದೆ. ಹಣ ಪಡೆಯಲು ಹೊಸ ಮಾರ್ಗಗಳು ಕಂಡುಬರುತ್ತವೆ. ಹೂಡಿಕೆಯಿಂದ ಲಾಭವಾಗಲಿದೆ. ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳದ ಬಲವಾದ ಅವಕಾಶಗಳಿವೆ. ಹೊಸ ಕೆಲಸಕ್ಕಾಗಿ ಎಂದು ಕಾಯುತ್ತಿದ್ದವರಿಗೆ ಉದ್ಯೋಗ ಆಫರ್ ಬರಬಹುದು. ಹಿರಿಯ ಅಧಿಕಾರಿಗಳ ಸಹಕಾರ ದೊರೆಯಲಿದೆ. ಮದುವೆ ನಿಶ್ಚಯವಾಗಬಹುದು. 

ಇದನ್ನೂ ಓದಿ- Shukra Uday 2022: ಶುಕ್ರ ಉದಯ ಪರಿಣಾಮ, 3 ರಾಶಿಯವರಿಗೆ ಭಾಗ್ಯೋದಯ

ಕರ್ಕ ರಾಶಿ: ಕರ್ಕಾಟಕ ರಾಶಿಯವರಿಗೆ ಮಾರ್ಗಿ ಗುರು ಬಹಳಷ್ಟು ಲಾಭವನ್ನು ನೀಡುತ್ತಾನೆ. ಸಮಾಜದಲ್ಲಿ ನಿಮ್ಮ ಪ್ರಭಾವ, ಗೌರವ ಹೆಚ್ಚಾಗುತ್ತದೆ. ಅದೃಷ್ಟದ ಸಹಾಯದಿಂದ ಕೆಲಸವು ಪೂರ್ಣಗೊಳ್ಳುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳಿವೆ, ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನಗಳನ್ನು ನೀಡುತ್ತದೆ. ಜೀವನದಲ್ಲಿ ನೆಮ್ಮದಿಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಜೀವನ ಸಂಗಾತಿ ಚೆನ್ನಾಗಿರುತ್ತಾರೆ. 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಗುರುವಿನ ನೇರ ಚಲನೆಯು ವರದಾನವಾಗಿ ಪರಿಣಮಿಸಲಿದೆ. ಬಡ್ತಿ ಸಿಗುವ ಎಲ್ಲ ಸಾಧ್ಯತೆಗಳಿವೆ. ಅದೇ ಸಮಯದಲ್ಲಿ, ಉದ್ಯಮಿಗಳಿಗೆ ಸಾಕಷ್ಟು ಲಾಭವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ನಿಮಗೆ ದೊರೆಯಲಿದ್ದು ಅದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಅಂದರೆ, ಪ್ರತಿ ಕೆಲಸದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಇದು ಉತ್ತಮ ಸಮಯ.

ಇದನ್ನೂ ಓದಿ- Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ಮೀನ ರಾಶಿ: ಗುರುವು ಮೀನರಾಶಿಯಲ್ಲಿ ಸಂಚರಿಸುತ್ತಿದ್ದು, ಮೀನ ರಾಶಿಯ ಅಧಿಪತಿಯೂ ಹೌದು. ಅದಕ್ಕಾಗಿಯೇ ಮೀನ ರಾಶಿಯ ಜನರು ಗುರುಗ್ರಹದ ನೇರ ಚಲನೆಯಿಂದ ಗರಿಷ್ಠ ಲಾಭವನ್ನು ಪಡೆಯುತ್ತಾರೆ. ಅವರ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ. ಪ್ರತಿಯೊಂದು ಕ್ಷೇತ್ರದಲ್ಲೂ ಲಾಭ ಮತ್ತು ಸಂತೋಷದ ಅವಕಾಶಗಳಿರುತ್ತವೆ. ವಿವಾಹಕ್ಕಾಗಿ ಕಾಯುತ್ತಿರುವವರಿಗೆ ಈ ಸಮಯದಲ್ಲಿ ಕಂಕಣ ಬಲ ಕೂಡಿಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವೃತ್ತಿಜೀವನ ಉತ್ತಮವಾಗಿರಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News