ದಿನಭವಿಷ್ಯ 21-11-2023: ಈ ರಾಶಿಯವರಿಗೆ ಇಂದು ಮಕ್ಕಳಿಂದ ಶುಭ ಸುದ್ದಿ

Today Horoscope 21st November 2023: ಮಂಗಳವಾರದ ಈ ಶುಭ ದಿನದಂದು ಕೆಲವು ರಾಶಿಯವರ ಮೇಲೆ ಹನುಮಂತನ ವಿಶೇಷ ಕೃಪೆ ಇರಲಿದೆ. ಇಂದು ಹನುಮಂತನ ಕೃಪಾ ಕಟಾಕ್ಷದಿಂದ ಈ ರಾಶಿಯವರು ಜೀವನದಲ್ಲಿ ಸುಖ-ಸಮೃದ್ಧಿಯನ್ನು ಕಾಣುವರು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Nov 21, 2023, 06:56 AM IST
  • ವೃಷಭ ರಾಶಿಯವರಿಗೆ ನಿಮ್ಮ ಮನೆಯ ಹಿರಿಯರು, ಸಹೋದರ ವರ್ಗದವರಿಂದ ಸಹಕಾರ ದೊರೆಯಲಿದೆ.
  • ಸಿಂಹ ರಾಶಿಯವರಿಗೆ ನಿಮ್ಮ ಯಾವುದೇ ಕೆಲಸದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರೆಯಲಿದೆ
  • ವೃಶ್ಚಿಕ ರಾಶಿಯವರು ಇಂದು ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ಎತ್ತರವನ್ನು ಮುಟ್ಟುವಿರಿ.
ದಿನಭವಿಷ್ಯ 21-11-2023:  ಈ ರಾಶಿಯವರಿಗೆ ಇಂದು ಮಕ್ಕಳಿಂದ ಶುಭ ಸುದ್ದಿ  title=

ದಿನಭವಿಷ್ಯ :  ನವೆಂಬರ್ 21, 2023ರ ಮಂಗಳವಾರವು ಕೆಲವು ರಾಶಿಯವರಿಗೆ ಅದೃಷ್ಟದ ದಿನ ಎಂದು ಸಾಬೀತುಪಡಿಸಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯೋಣ... 

ಮೇಷ ರಾಶಿ:  
ಮೇಷ ರಾಶಿಯವರಿಗೆ ಇಂದು ಆತ್ಮವಿಶ್ವಾಸದಿಂದ ಕೂಡಿದ ದಿನ. ನೀವು ತಾಳ್ಮೆಯಿಂದ ಮುಂದುವರೆದರೆ ಶೈಕ್ಷಣಿಕ ಕೆಲಸಕಾರ್ಯಗಳಲ್ಲಿ ಸುಧಾರಣೆಯನ್ನು ಕಾಣಬಹುದು. ವಿದೇಶ ಪ್ರವಾಸಕ್ಕೆ ಯೋಜಿಸಲು ಇಂದು ಅತ್ಯುತ್ತಮ ದಿನ. ಮಕ್ಕಳಿಂದ ಶುಭ ಸುದ್ದಿ ಸಾಧ್ಯತೆಯಿದೆ. 

ವೃಷಭ ರಾಶಿ:  
ವೃಷಭ ರಾಶಿಯವರಿಗೆ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆತು ಆರ್ಥಿಕವಾಗಿ ಪ್ರಗತಿಯನ್ನು ಕಾಣುವಿರಿ. ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಇಂದು ಒಳ್ಳೆಯ ದಿನ. ನಿಮ್ಮ ಮನೆಯ ಹಿರಿಯರು, ಸಹೋದರ ವರ್ಗದವರಿಂದ ಸಹಕಾರ ದೊರೆಯಲಿದೆ. 

ಮಿಥುನ ರಾಶಿ:   
ಮಿಥುನ ರಾಶಿಯವರು ಇಂದು ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೂ, ಕುಟುಂಬದಲ್ಲಿ ತಾಳ್ಮೆಯಿಂದ ವರ್ತಿಸಿ, ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡಬಹುದು. ಸ್ನೇಹಿತರೊಂದಿಗೆ ಅನಾವಶ್ಯಕ ವಾದ ತಪ್ಪಿಸಿ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಏಕಾಗ್ರತೆಯಿಂದ ಕೆಲಸ ಮಾಡುವುದು ಅವಶ್ಯಕ. ಯಾವುದೇ ಕೆಲಸದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಶುಭ ಫಲ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವೂ ದೊರೆಯಲಿದೆ. 

ಇದನ್ನೂ ಓದಿ- Lucky Zodiacs: 2024ರ ಅದೃಷ್ಟದ ರಾಶಿಗಳಿವು, ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ

ಸಿಂಹ ರಾಶಿ:   
ಸಿಂಹ ರಾಶಿಯವರು ಇಂದು ಜೀವನದಲ್ಲಿ ಪ್ರಮುಖವಾದ ಏನನ್ನಾದರೂ ಸಾಧಿಸುವಿರಿ. ಉದ್ಯೋಗ ಕ್ಷೇತ್ರವು ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಯಾವುದೇ ಕೆಲಸದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರೆಯಲಿದೆ, ಅಧಿಕಾರಿಗಳಿಂದ ಮನ್ನಣೆಗೆ ಪಾತ್ರರಾಗುವಿರಿ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇದು ಆತ್ಮವಿಶ್ವಾಸದಿಂದ ತುಂಬಿದ ದಿನ. ನಿಮ್ಮ ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳಿಗೆ ಇಂದು ಪರಿಹಾರ ಕಾಣಬಹುದು. ಸಾಕಾರಾತ್ಮಕ ಚಿಂತನೆಯಿಂದ ಮುಂದುವರೆಯುವುದರಿಂದ ಯಶಸ್ಸು, ಪ್ರಗತಿಯನ್ನು ಕಾಣಬಹುದು. 

ತುಲಾ ರಾಶಿ:  
ತುಲಾ ರಾಶಿಯವರು ಇಂದು ರೊಮ್ಯಾಂಟಿಕ್ ಸಂಜೆಯನ್ನು ಆನಂದಿಸುವಿರಿ. ಪ್ರೀತಿ ಪ್ರೇಮದಲ್ಲಿರುವವರು ಕೆಲವು ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಮನಸ್ಸಿಗೆ ಮುದ ನೀಡುತ್ತದೆ. ಉದ್ಯೋಗ ರಂಗದಲ್ಲಿಯೂ ನಿರೀಕ್ಷಿತ ಫಲಿತಾಂಶ ಪಡೆಯಬಹುದು. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಇಂದು ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ಎತ್ತರವನ್ನು ಮುಟ್ಟುವಿರಿ. ದೀರ್ಘಕಾಲಿನ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಲು ಇಂದು ಅತ್ಯುತ್ತಮ ದಿನ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಅನುಭವಿಸುವಿರಿ. ಆರೋಗ್ಯವೂ ಉತ್ತಮವಾಗಿರಲಿದೆ. 

ಇದನ್ನೂ ಓದಿ- Vastu Tips: ಮನೆಯಲ್ಲಿರುವ ಈ ಗಿಡಗಳು ದುರಾದೃಷ್ಟದ ಜೊತೆಗೆ ಕುಟುಂಬದ ಸಂತಸವನ್ನೇ ಕಸಿಯುತ್ತವೆ!

ಧನು ರಾಶಿ:  
ಧನು ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಇಂದು ಅತ್ಯುತ್ತಮ ದಿನ. ಅನಿರೀಕ್ಷಿತ ಸಂಪರ್ಕಗಳು ಭವಿಷ್ಯದಲ್ಲಿ ಒಳ್ಳೆಯ ಲಾಭವನ್ನು ತಂದುಕೊಡುವ ನಿರೀಕ್ಷೆಯಿದೆ. ಸಾಲಗಳಿಂದ ಮುಕ್ತಿ ದೊರೆತು ಕೌಟುಂಬಿಕ ಆನಂದವನ್ನು ಅನುಭವಿಸುವಿರಿ. ಹೊಸ ಭೂಮಿ ಖರೀದಿಗೆ ಶುಭ ದಿನ. 

ಮಕರ ರಾಶಿ:  
ಮಕರ ರಾಶಿಯವರಿಗೆ ಪ್ರೀತಿಯ ಜೀವನ ಉತ್ತಮವಾಗಿರಲಿದೆ. ಹೂಡಿಕೆಯಿಂದ ಲಾಭವನ್ನು ಕಾಣುವಿರಿ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ಹಾರಿಸಬೇಕು. ಇಲ್ಲದಿದ್ದರೆ, ಸವಾಲುಗಳನ್ನು ಎದುರಿಸಬೇಕಾಗಬಹುದು. 

ಕುಂಭ ರಾಶಿ:  
ಕುಂಭ ರಾಶಿಯವರಿಗೆ ಹನುಮಂತ ಕೃಪೆ ಇದ್ದು ನಿಮ್ಮ ಅದೃಷ್ಟವೇ ಬದಲಾಗುವ ಸಮಯ. ಕೆಲವು ಪ್ರಮುಖ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಸುಧೀನ. ಆರೋಗ್ಯವೂ ಉತ್ತಮವಾಗಿರುತ್ತದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು. 

ಮೀನ ರಾಶಿ:  
ಮೀನ ರಾಶಿಯವರು ಇಂದು ಸಂಬಂಧಗಳಲ್ಲಿ ಏರಿಳಿತವನ್ನು ಕಾಣಬಹುದು. ಅತಿಯಾದ ಮಾತು ನಿಮ್ಮನ್ನು ದುಃಖಕ್ಕೆ ದೂಡಬಹುದು. ಹಾಗಾಗಿ, ಜಾಗರೂಕರಾಗಿರಿ. ನಿಮ್ಮ ಭಾವನೆಗಳನ್ನು ಬೇರೆಯವರ ಮುಂದೆ ವ್ಯಕ್ತಪಡಿಸುವ ಮೊದಲು ಅವರೊಂದಿಗೆ ಯಾವ ವಿಷಯಗಳನ್ನು ಹಂಚಿಕೊಳ್ಳಬೇಕು ಎಂಬುದನ್ನು ಒಮ್ಮೆ ಯೋಚಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News