Astrology: ಹೆಣ್ಣು ಸಂಸಾರದ ಕಣ್ಣು. ಆಕೆ ಎಷ್ಟೇ ಕಠಿಣವಾಗಿ, ನಿಷ್ಟೂರವಾಗಿ ನಡೆದುಕೊಂಡರೂ ಸಹ ಅದರ ಹಿಂದಿನ ಉದ್ದೇಶ ಮನೆಯ, ಕುಟುಂಬದ ಒಳಿತೇ ಆಗಿರುತ್ತದೆ. ಸಾಮಾನ್ಯವಾಗಿ, ಸ್ತ್ರೀಯರನ್ನು ದೈಹಿಕವಾಗಿ ಬಲಹೀನಳು ಎಂದು ಬಿಂಬಿಸಲಾಗುತ್ತದೆ. ಆದರೆ, ಆಕೆ ಮಾನಸಿಕವಾಗಿ ಎಷ್ಟು ಬಲಶಾಲಿ ಎಂದರೆ ಎಂತಹದ್ದೇ ಸಂದರ್ಭದಲ್ಲಿ ಎದೆಗುಂದಡೆ ತನ್ನ ದೃಢ ನಿರ್ಧಾರ, ದೃಢ ಸಂಕಲ್ಪದೊಂದಿಗೆ ಮನೆ ಮಂದಿಯಲ್ಲೂ ಸ್ಫೂರ್ತಿಯೆಂಬ ಬೆಳಕು ಚೆಲ್ಲುವ ಚೈತನ್ಯ ಹೆಣ್ಣು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಯ ಹೆಣ್ಣು ಮಕ್ಕಳ ಗುಣ-ಸ್ವಭಾವವನ್ನು ವರ್ಣಿಸಲಾಗಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಂತಹ ದೊಡ್ಡ ವ್ಯಕ್ತಿಯೇ ಆದರೂ ಮೂರು ರಾಶಿಯ ಸ್ತ್ರೀಯರ ಮುಂದೆ ಅವರು ತಲೆಬಾಗಲೇ ಬೇಕಂತೆ. ಈ ಮೂರು ರಾಶಿಯ ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲಿ ಧೃತಿಗೆಡದೆ ಕೆಚ್ಚೆದೆಯಿಂದ ನಿಲ್ಲುತ್ತಾರೆ. ಅಷ್ಟೇ ಅಲ್ಲ, ವ್ಯವಹಾರದಲ್ಲಿ ಸದಾ ಬೇರೆಯವರಿಗಿಂತ ಹತ್ತು ಹೆಜ್ಜೆ ಮುಂದಿರುವ ಇವರನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Shani Margi: 2024ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡಲಿದ್ದಾನೆ ಶನಿ ದೇವ
ಜ್ಯೋತಿಷ್ಯದ ಪ್ರಕಾರ, ಈ ಮೂರು ರಾಶಿಯ ಮಹಿಳೆಯರು ಸುಲಭವಾಗಿ ಸೋಲೊಪ್ಪುವುದಿಲ್ಲ, ಬೇರೆಯವರ ಮುಂದೆ ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲವಂತೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಯೋಣ...
ಎಂತಹವರೇ ಆದರೂ ಈ 3 ರಾಶಿಯ ಹೆಣ್ಮಕ್ಕಳ ಮುಂದೆ ತಲೆ ಬಾಗುತ್ತಾರೆ!
ಮೇಷ ರಾಶಿ:
ಮೇಷ ರಾಶಿಯ ಹೆಣ್ಣು ಮಕ್ಕಳಿಗೆ ಮೂಗಿನ ತುದಿಯಲ್ಲಿಯೇ ಕೋಪವಿರುತ್ತದೆ. ಆದರೆ, ಈ ರಾಶಿಯ ಮಹಿಳೆಯರು ಸದಾ ಆತ್ಮವಿಶ್ವಾಸದಿಂದ ಮುಂದುವರೆಯುತ್ತಾರೆ. ಇವರ ಮನಸ್ಸಿನಲ್ಲಿ ನೂರೆಂಟು ನೋವಿದ್ದರೂ ಕೂಡ ಎದುರಿರುವ ವ್ಯಕ್ತಿಗೆ ಅವರ ದುಃಖ ಗೊತ್ತಾಗದಂತೆ ಮರೆಮಾಚುವ ಗುಣ ಇವರದ್ದು. ಇವರಲ್ಲಿ ನಾಯಕತ್ವದ ಗುಣವೂ ಇದ್ದು, ಯಾವುದೇ ಸವಾಲುಗಳನ್ನು ಹೆದರಿಸಲು ಹಿಂಜರಿಸುವುದಿಲ್ಲ. ಇವರ ಈ ಗುಣಕ್ಕೆ ಸಲಾಂ ಎನ್ನದವರೇ ಇಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Budh Vakri 2023: ಅಕ್ಟೋಬರ್ 1ರವರೆಗೆ ಈ ರಾಶಿಯವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ನೋಡಲು ಕಟುವಾಗಿ ಕಂಡರೂ ತುಂಬಾ ಆಶಾವಾದಿಗಳು. ನೋವೆಲ್ಲಾ ತನಗಿರಲಿ ಬೇರೆಯವರಿಗೆ ಸಾಧ್ಯವಾದಷ್ಟು ಖುಷಿ ನೀಡಬೇಕು ಎನ್ನುವ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳು ಸುಳ್ಳು, ಕಪಟ, ಮೋಸ ಮಾಡುವವರನ್ನು ಎಂದಿಗೂ ಕ್ಷಮಿಸುವುದಿಲ್ಲ. ತುಂಬಾ ಬುದ್ದಿವಂತರಾಗಿರುವ ಇವರು ಯಾವುದೇ ಸಂದರ್ಭದಲ್ಲೂ ಯಾರ ಮುಂದೆಯೂ ತಲೆತಗ್ಗಿಸುವುದಿಲ್ಲ. ಬರುವುದೆಲ್ಲವ ಬರಲಿ ಎಂದು ಮುಂದೆ ಸಾಗುವ ಇವರಿಗೆ ಜೀವನದಲ್ಲಿ ಸೋಲು ಎಂಬುದೇ ಇಲ್ಲ. ಇವರ ಮಧುರ ಮಾತು, ಜಾಣ್ಮೆ, ಕಠಿಣ ಸಂದರ್ಭಗಳನ್ನು ನಿಭಾಯಿಸುವ ಕಲೆಗೆ ಎಂತಹ ವ್ಯಕ್ತಿಯನ್ನೇ ಆದರೂ ತಲೆಬಾಗುವಂತೆ ಮಾಡುವ ಶಕ್ತಿ ಇದೆಯಂತೆ.
ಮಕರ ರಾಶಿ:
ಮಕರ ರಾಶಿಯ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸದಾ ತುಂಬಾ ಗಂಭೀರವಾಗಿ ಕಾಣಿಸಿಕೊಳ್ಳುತ್ತಾರೆ. ಕಡಿಮೆ ಮಾತನಾಡುವ ಇವರು ಸದಾ ಶಾಂತ ಸ್ವಭಾವದರಾಗಿರುತ್ತಾರೆ. ಹಾಗಾಗಿಯೇ, ಇವರಿಗೆ ಸ್ನೇಹಿತರ ಬಳಗ ಹೆಚ್ಚು ಎನ್ನಲಾಗುತ್ತದೆ. ಆದರೆ, ಭಿನ್ನವಾಗಿ ಯೋಚಿಸುವ ಇವರು ಕಷ್ಟದ ಸಂದರ್ಭದಲ್ಲಿ ಬೇರೆಯವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಮಕರ ರಾಶಿಯ ಹೆಣ್ಣು ಮಕ್ಕಳ ಈ ಸ್ವಭಾವ ಬೇರೆಯವರನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.