ಮಹಿಳೆಯರು ಗೌರಿ ಪೂಜೆ ಮಾಡುವುದರಿಂದ ಗೌರಿ ಅವರನ್ನು ವಿಶೇಷವಾಗಿ ಹರಸುತ್ತಾಳೆಯಂತೆ.
ಬೆಂಗಳೂರು : ಗೌರಿ ಹಬ್ಬವನ್ನು ಗಣೇಶ ಚತುರ್ಥಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಗೌರಿ ಮತ್ತು ಗಣೇಶ ಎರಡೂ ಹಬ್ಬಕ್ಕೂ ವಿಶೇಷ ಮನ್ನಣೆ ಇದೆ. ಇದನ್ನು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಾಳೆ ಗೌರಿ ಹಬ್ಬ.ಮಹಿಳೆಯರ ನೆಚ್ಚಿನ ಹಬ್ಬ ಇದು. ಈ ಹಬ್ಬ ವಿವಾಹಿತ ಮತ್ತು ಅವಿವಾಹಿತ ಹೀಗೆ ಎರಡೂ ವರ್ಗದ ಮಹಿಳೆಯರಿಗೆ ವಿಶೇಷವಾಗಿರುತ್ತದೆ.
ಮಹಿಳೆಯರು ಗೌರಿ ಪೂಜೆ ಮಾಡುವುದರಿಂದ ಗೌರಿ ಅವರನ್ನು ವಿಶೇಷವಾಗಿ ಹರಸುತ್ತಾಳೆಯಂತೆ. ವಯಸ್ಸು ಮೀರಿದರೂ ಮದುವೆಯಾಗದ ಹೆಣ್ಣು ಮಕ್ಕಳು ಗೌರಿ ಪೂಜೆ ಮಾಡಿದರೆ ಶೀಘ್ರದಲ್ಲೇ ವಿವಾಹ ಭಾಗ್ಯ ಒಲಿದು ಬರುತ್ತದೆ ಎನ್ನುವುದು ನಂಬಿಕೆ.
ಇನ್ನು ವಿವಾಹಿತ ಮಹಿಳೆ ಈ ಪೂಜೆ ಮಾಡಿದರೆ ಆಕೆಯ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಆದರೆ ಗೌರಿ ಪೂಜೆಯನ್ನು ಹೇಗೆ ಬೇಕೋ ಹಾಗೆ ಮಾಡುವುದಲ್ಲ.ಅದಕ್ಕೂ ಒಂದು ನಿಯಮ ಅನ್ನುವುದು ಇದೆ. ಅದನ್ನು ಪಾಲಿಸಿಕೊಂಡು ಪೂಜೆ ಮಾಡಿದರೆ ಮಾತ್ರ ಗೌರಿ ಒಲಿಯುತ್ತಾಳೆ
ಗೌರಿ ಪೂಜೆ ಮಾಡುವಾಗ ೧೬ ಬಗೆಯ ಹೂವನ್ನು ಅರ್ಪಿಸಬೇಕು, ೧೬ ಎಳೆಯ ದಾರದ ಪೂಜೆ ಮಾಡಬೇಕು. ೧೬ ಬಗೆಯ ನೈವೆದಯ ಅರ್ಪಿಸಬೇಕು. ಆರತಿ ಮಾಡುವಾಗಲೂ ೧೬ ಬತ್ತಿ ಬಳಸಿ ಆರತಿ ಮಾಡಬೇಕು ಎಂದು ಹೇಳಲಾಗುತ್ತದೆ.
ಹಾಗೆಯೇ ಒಮ್ಮೆ ಗೌರಿ ಪೂಜೆ ಆರಂಭಿಸಿದರೆ ಸತತ 16 ವರ್ಷಗಳ ಕಾಲ ಪೂಜೆ ಮಾಡುತ್ತಾ ಬರಬೇಕು. ಹೀಗೆ ನಿಯಮಾನುಸಾರವಾಗಿ, ವಿಧಿವತ್ತಾಗಿ ತಾಯಿ ಗೌರಿಯನ್ನು ಪೂಜಿಸಿದರೆ ಆ ಮನೆ ಅಭಿವೃದ್ದಿಯನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ ಎನ್ನುವ ನಂಬಿಕೆಯೂ ಇದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.